ಗುಜರಾತ ಪಟೇಲರ ಮಾದರಿಯಲ್ಲಿ ತಳವಾರ, ಪರಿವಾರ ಹೋರಾಟ

0
173

ಕಲಬುರಗಿ: ಕರ್ನಾಟಕ ರಾಜ್ಯದಲ್ಲಿ ತಳವಾರ ಮತ್ತು ಪರಿವಾರ ಸಮುದಾಯಗಳಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ನಿರಂತರ ಅನ್ಯಾಯವಾಗುತ್ತಿದೆ. ನಮಗಾದ ಅನ್ಯಾಯವನ್ನು ಖಂಡಿಸಿ ಮುಂದಿನ ದಿನಗಳಲ್ಲಿ ಗುಜರಾತನ ಪಟೇಲ ಹಾಗೂ ಗುಜ್ಜರ ಮಾದರಿಯಲ್ಲಿ ಹೋರಾಟ ಮಾಡುತ್ತೇವೆ ಎಂದು ತಳವಾರ, ಪರಿವಾರ ಎಸ್.ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಡಾ. ಸರ್ದಾರ ರಾಯಪ್ಪ ಅವರು ಹೇಳಿದರು.

ನಗರದ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ತಳವಾರ, ಪರಿವಾರ ಎಸ್.ಟಿ ಹೋರಾಟ ಸಮಿತಿ
ಹಮ್ಮಿಕೊಂಡಿರುವ ನಾಲ್ಕನೇದಿನದ ಅನಿದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು

Contact Your\'s Advertisement; 9902492681

ತಳವಾರ ಸಮುದಾಯದಲ್ಲಿ ಇನ್ನೂ ಮೂಡನಂಬಿ ಅನಿಷ್ಟಪದ್ದತಿಗಳು ಆಚರಣೆಯಲ್ಲಿವೆ, ಅದರೊಂದಿಗೆ ನಮ್ಮ ಮೇಲೆ ನಿರಂತರ ಶೋಷಣೆಯು ನಡೆಯುತ್ತಿದೆ. ಇವತ್ತು ನಾವು ಆಚರಿಸುವ ಅತೀಹಿನಾಯ ಆಚರಣೆಯಲ್ಲಿ ಒಂದಾದ ಬೆತ್ತಲೆ ಜೋಕಪ್ಪ ಮೂರ್ತಿಯನ್ನು ಹೊತ್ತು ನಮ್ಮ ಮಹಿಳೆಯರು ಬಿಕ್ಷಾಟನೆ ಮಾಡುವದನ್ನು ಇವತ್ತಿನ ಯಾದುನಿಕ ಸಮಾಜದಲ್ಲಿ ಎಲ್ಲು ಇಲ್ಲ.

ಇಂತಹ ಹಿನಾಯ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು 2014ರಲ್ಲಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾದ 88H ತಳವಾರ, ತಳವಾರ ಬೋಯಾವನ್ನು ಯಥಾವತ್ತಾಗಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಅನುಮೋದಿಸಿ ತಳವಾರ, ಪರಿವಾರ ಸಮುದಾಯಗಳಿಗೆ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಿ ರಾಜ್ಯ ಪತ್ರ ಹೋರಡಿಸಿ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಅದರಂತೆ ರಾಜ್ಯ ಸರ್ಕಾರ ಕೂಡ ಜೂ. 05 ರಂದು ಅಂಗಿಕರಿಸಿ ರಾಜ್ಯ ಪತ್ರ ಹೊರಡಿಸಿ ಪರಶಿಷ್ಟ ಪಂಗಡದ ಪ್ರಮಾಣ ಪತ್ರ ನೀಡಿತ್ತು.

ಆದರೆ ಈಗ ಕೆಲ ಸಮುದಾಯದ ರಾಜಕಾರಣಿಗಳ, ಮಠಾಧೀಶರ, ಅಧಿಕಾರಿಗಳ ಮತ್ತು ಸಂಘಟನೆಗಳ ಹಣಬಲ, ತೋಳ್ಬಲದ ಪ್ರಭಾವಕ್ಕೆ ಮಣಿದು, ಹೆದರಿ ತಳವಾರ ಮತ್ತು ಪರಿವಾರ ಸಮುದಾಯಗಳಿಗೆ ಎಸ್ಟಿ ಪ್ರಮಾಣಪತ್ರ ನೀಡುವುದನ್ನು ನಿಲ್ಲಿಸಿದೆ.

ಈ ಮಸುದೆ ರಾಷ್ಟ್ರಪತಿಯವರಿಂದ ಅಂಗಿಕಾರವಾಗಿದೆ. ಹಾಗೆ ಎರಡೂ ಸದನಗಳಲ್ಲಿ ಅನುಮೋದನೆ ಪಡೆದಿದೆ. ಮೂರು ಹಂತದಲ್ಲಿ ಅಂಗಿಕಾರವಾದ ಈ ಮಸುದೆ ಏನೆನೂ ಅಂಶ ಒಳಗೊಂಡಿದೆ ಎಂದು ನಿಮಗೆ ಗೊತ್ತಿಲವೆ? ಅಥವಾ ಅಧಿಕಾರಿಗಳು ನಿಮ್ಮ ಮಾತು ಕೇಳುತ್ತಿಲ್ಲವೆ?
ಕುದ್ದು ಕೆಲ ಜಿಲ್ಲಾಧಿಕಾರಿಗಳ, ತಾಸೀಲ್ದಾರರ, ಅಧಿಕಾರಿಗಳ ತಾರತಮ್ಯ ಮತ್ತು ಸ್ವಜಾತಿ ಹಿತಾಸಕ್ತಿಯಿಂದ ಈ ಸಮುದಾಯಗಳಿಗೆ ಎಸ್ಟಿ ಪ್ರಮಾಣಪತ್ರ ನೀಡಬಾರದೆಂಬ ಉಧ್ಧೇಶ ಪೂರಕವಾಗಿ ಸುಖಾ ಸುಮ್ಮನೆ ಗೊಂದಲ ಸೃಷ್ಠಿಸುತ್ತಿದ್ದಾರೆ.

ಈ ಅಧಿಕಾರಿಗಳಿಗೆ ವಾಸ್ತವಾಂಶ ಗೊತ್ತಿದ್ದರು ಸತ್ಯವನ್ನು ಮುಚ್ಚಿಟ್ಟು ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ.

ನಮ್ಮ ವಿಷಯದಲ್ಲಿ ವಿರೋಧ ಪಕ್ಷದ ಮುಖಂಡರು ಕೂಡ ಸರ್ಕಾರದ ಜೊತೆ ಕೈಜೋಡಿಸಿದಂತೆ ಕಾಣುತ್ತಿದೆ. ಸರ್ಕಾರದ ಈ ನೀತಿಯಿಂದ ನಮಗೆ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅನ್ಯಾಯವಾಗುತ್ತಿದ್ದರೂ ವಿರೋಧ ಪಕ್ಷದ ಯಾವೊಬ್ಬ ನಾಯಕನ ನಮ್ಮ ಪರವಾಗಿ ಧ್ವನಿಯೆತ್ತುತ್ತಿಲ್ಲ. ಇದು ರಾಜ್ಯ ಸರಕಾರದ ದೊಡ್ಡ ವೈಫಲ್ಯ ನೇರವಾಗಿ ಸರ್ಕಾರದಿಂದ ನಮಗೆ ಸಾವಿಧಾನಿಕ ಅನ್ಯಾಯ ಹಾಗೂ ಈ ಜನಾಂಗದ ಮೇಲೆ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ. ಆದರೆ ನಮ್ಮ ಪರವಾಗಿ ದ್ವನಿ ಎತ್ತಲು ಯಾವ ಜನ ಪ್ರತಿನಿಧಿ ಇಲ್ಲಂತಾಗಿದೆ.

ಈ ಸಂದರ್ಭದಲ್ಲಿಡಾ.ಸದಾ೯ರ ರಾಯಪ್ಪ , ರಾಜೇಂದ್ರ ರಾಜವಾಳ, ದೇವೇಂದ್ರ ಚಿಗರಳ್ಳಿ , ಚಂದ್ರಶೇಖರ ಜಮಾದಾರ ವಕೀಲರು , ಶಿವು ಸುಣಗಾರ, ಸೈಬಣ್ಣ ಜಾಲಗಾರ, ದಿಗಂಬರ ಕಾಡಪ್ಪಗೋಳ, ಶರಣು ಕೋಲಿ, ದಿಗಂಬರ ಡಾಂಗೆ, ಚಂದ್ರಕಾಂತ್ ಗಂವ್ಹಾರ ,ಅನಿಲ ಕಾಮಣ್ಣ ವಚ್ಚಾ, ಇನ್ನಿತರರು ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here