ಪೊಲೀಸ್ ಅಧಿಕಾರಿ ಫೇಸ್ಬುಕ್ ಹ್ಯಾಕ್: ಹಣಕ್ಕಾಗಿ ಬೇಡಿಕೆ!

0
26

ಕಲಬುರಗಿ: ಚಿತ್ತಾಪುರ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ಈಗ ಗದಗ ಜಿಲ್ಲೆಗೆ ವರ್ಗವಾಗಿರುವ ಸಿಪಿಐ ಪಂಚಾಕ್ಷರಿ ಸಾಲಿಮಠ ಅವರ ಹೆಸರಿನ ಫೇಸ್ಬುಕ್ ಖಾತೆಯಿಂದ ವಾಡಿ ನಗರದ ಬಿಜೆಪಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ, ಪತಾಂಜಲಿ ಉತ್ಪನ್ನ ವಿತರಕ ವೀರಣ್ಣ ಯಾರಿ ಅವರಿಗೆ ಹಣದ ಬೇಡಿಕೆಯಿಟ್ಟಿರುವ ಪ್ರಸಂಗ ಬೆಳಕಿಗೆ ಬಂದಿದೆ. ಸದ್ಯ ಸಿಪಿಐ ಹೆಸರಿನ ಈ ನಕಲಿ ಖಾತೆ ಸಂದೇಶ ಬಿಜೆಪಿ ನಾಯಕನಿಗೆ ತೀವ್ರ ಶಾಕ್ ನೀಡಿದೆ.

ಪಂಚಾಕ್ಷರಿ ಹೆಸರಿನ ಫೇಸ್ಬುಕ್ ಖಾತೆಗೆ ಸಿಪಿಐ ಪಂಚಾಕ್ಷರಿ ಸಾಲಿಮಠ ಅವರ ಭಾವಚಿತ್ರ ಇದೆ. ಈ ಖಾತೆಯಿಂದ ನನ್ನ ಫೇಸ್ಬುಕ್ ಖಾತೆಗೆ ಸೋಮವಾರ ಒಂದು ಸಂದೇಶ ಬಂದಿದೆ. ಹೇಗಿದ್ದೀರಿ? ಎಂಬ ಸಂದೇಶದ ಮೂಲಕ ಆರಂಭವಾದ ಚರ್ಚೆ, ನೀವು ಅರ್ಜಂಟಾಗಿ ನನಗೊಂದು ಸಹಾಯ ಮಾಡಬೇಕು. ನನಗೆ ಸ್ವಲ್ಪ ಹಣದ ಅವಶ್ಯಕತೆಯಿದೆ ಎಂದು ಸಂದೇಶ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

Contact Your\'s Advertisement; 9902492681

ಪರಿಚಿತರಿರುವ ಸಾಲಿಮಠ ಅವರು ಹೀಗೆ ಯಾವತ್ತೂ ಹಣಕ್ಕೆ ಬೇಡಿಕೆಯಿಟ್ಟವರಲ್ಲ. ಅನುಮಾನಗೊಂಡ ನಾನು ತಕ್ಷಣ ಅವರ ನಂಬರ್‌ಗೆ ಕರೆ ಮಾಡಿ ವಿಚಾರಿಸಿದೆ. ಇದಕ್ಕೆ ಪ್ರತಿಕ್ರೀಯಿಸಿದ ಸಿಪಿಐ ಸಾಲಿಮಠ ಅವರು, ನನ್ನ ಹೆಸರಿನಲ್ಲಿ ನನ್ನದೇ ಭಾವಚಿತ್ರ ಇರುವ ನಕಲಿ ಫೇಸ್ಬುಕ್ ಖಾತೆ ತೆರೆಯಲಾಗಿದೆ. ಇದರಿಂದ ಸಾರ್ವಜನಿಕರು ಎಚ್ಚರದಿಂದ ಇರಬೇಕು ಎಂದಿದ್ದಾರೆ ಎಂದು ವೀರಣ್ಣ ಯಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಹೌದು, ಸೋಮವಾರ ನನ್ನ ಹೆಸರಿನಲ್ಲಿ ಅಂತರ್ಜಾಲ ಕಳ್ಳರು ನಕಲಿ ಫೇಸ್ಬುಕ್ ಖಾತೆ ತೆರೆದು ಅನೇಕರಿಗೆ ಸಂದೇಶ ಕಳುಹಿಸುವ ಮೂಲಕ ಗೂಗಲ್ ಪೇ ನಂಬರ್ ಕೊಟ್ಟು ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಈ ರೀತಿ ಅನೇಕ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಖಾತೆಗಳು ತೆರೆದಿರುವುದು ಬೆಳಕಿಗೆ ಬಂದಿದ್ದು, ನನ್ನ ನಕಲಿ ಫೇಸ್ಬುಕ್ ಖಾತೆ ತೆರೆದಿರುವ ಕುರಿತು ಸೈಬರ್ ಕ್ರೈಂ ಬ್ರ್ಯಾಂಚ್‌ಗೆ ದೂರು ಕೊಟ್ಟಿದ್ದೇನೆ ಎಂದಿದ್ದಾರೆ.

ರಾಜಸ್ಥಾನ ಮೂಲದ ಅಂತರ್ಜಾಲ ಕಳ್ಳರು ಈ ಅಪರಾಧ ಕೃತ್ಯದಲ್ಲಿ ತೊಡಗಿರುವುದು ಗೊತ್ತಾಗಿದೆ. ಈಗಾಗಲೆ ಮಹಾರಾಷ್ಟ್ರದಲ್ಲಿ ಒಂದು ಟೀಂ ಹಾಗೂ ಬೆಂಗಳೂರಿನಲ್ಲಿ ಒಂದು ಟೀಂ ಅರೆಸ್ಟ್ ಆಗಿದೆ. ಸಾರ್ವಜನಿಕರು ಯಾವೂದೇ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಿ ಹಣ ಪಾವತಿಸಬಾರದು. ಹಣಕ್ಕೆ ಬೇಡಿಕೆಯಿಟ್ಟವರಿಗೆ ಕರೆ ಮಾಡಿ ವಿಚಾರಿಸಬೇಕು. ಈ ಸೈಬರ್ ಕಳ್ಳರಿಂದ ಎಚ್ಚರದಿಂದ ಇರಬೇಕು ಎಂದು ಗದಗ ಸಿಪಿಐ ಪಂಚಾಕ್ಷರಿ ಸಾಲಿಮಠ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here