ಕರವೇಯಿಂದ 15ನೇ ಕಲ್ಯಾಣ ಕರ್ನಾಟಕ ಉತ್ಸವ

0
68

ಕಲಬುರ್ಗಿ: ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ನೇತೃತ್ವದಲ್ಲಿ 15ನೇ ಕಲ್ಯಾಣ ಕರ್ನಾಟಕ ಉತ್ಸವವನ್ನು ಗ್ರಾಮಿಣ ಶಾಸಕ ಬಸವರಾಜ ಮತ್ತಿಮೂಡ ಉದ್ಘಾಟಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ಯ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ಮಾತನಾಡುತ್ತಾ ಹೈದರಾಬಾದ್ ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ಬದಲಾಗಿಸಲಾಗಿದ್ದು, ಅದಕ್ಕೂ ಮುನ್ನ ಗುಲಬರ್ಗಾ ಹೆಸರನ್ನು ಕಲಬುರ್ಗಿ ಎಂದು ಅಧಿಕೃತವಾಗಿ ಬದಲಾಯಿಸಲಾಗಿದೆ. ಆದರೆ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ಹಾಗೆಯೇ ಮುಂದುವರಿದಿದ್ದು, ಅದನ್ನು ಕಲಬುರ್ಗಿ ವಿದ್ಯುತ್ ಸರಬರಾಜು ನಿಗಮ ಎಂದು ಬದಲಿಸಬೇಕು ಎಂದು ಒತ್ತಾಯಿಸಿದರು.

Contact Your\'s Advertisement; 9902492681

ಮಾತನಾಡಿದ ಅವರು, ಕಲಬುರ್ಗಿಯನ್ನು ಸ್ಮಾರ್ಟ್ ಸಿಟಿಯನ್ನಾಗಿಸಲು ಅಗತ್ಯ ಕ್ರಮವನ್ನು ಸರ್ಕಾರ ಹಾಗೂ ಇಲ್ಲಿನ ಅಧಿಕಾರಿಗಳು ತೆಗೆದುಕೊಳ್ಳಬೇಕು. 371 (ಜೆ) ಕೋಶವನ್ನು ಕಲಬುರ್ಗಿಗೆ ಸ್ಥಳಾಂತರಿಸಬೇಕು. ಕಲಬುರ್ಗಿ ರೈಲ್ವೆ ವಿಭಾಗೀಯ ಕಚೇರಿ ಆರಂಭಿಸಬೇಕು. ಜಿಲ್ಲೆಗೆ ಇಲ್ಲಿಯವರನ್ನೇ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಬೇಕು ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯವನ್ನು ಕಲಬುರ್ಗಿ ವಿಶ್ವವಿದ್ಯಾಲಯವನ್ನಾಗಿ ನಾಮಕರಣ ಮಾಡಬೇಕು ಎಂಬ ನಿರ್ಣಯಗಳನ್ನು ಉತ್ಸವದಲ್ಲಿ ಕೈಗೊಳ್ಳಲಾಗಿದೆ ಎಂದು ಗದ್ದುಗೆ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಗುರುರಾಜ ಮತ್ತಿಮೂಡ, ಮನೋಹರ ಬೀರನೂರ, ಸಂಪತ್ ಜೆ. ಹಿರೇಮಠ, ಅಂಬರೀಶ ಶಾಬಾದಕರ, ಸತೀಶ ಬೀರನೂರ, ಮಂಜುನಾಥ ಕುಸನೂರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here