ಶಹಾಪುರ: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಿ ಸತತ ಅಧ್ಯಯನಶೀಲರಾದಾಗ ಮಾತ್ರ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಶಹಪುರ ಪೋಲಿಸ್ ಠಾಣೆ ಸಬ್ಇನ್ಸ್ಪೆಕ್ಟರ್ ಧರ್ಮಣ್ಣ ಜಂಗಳಿ ಹೇಳಿದರು.
ಶಹಾಪುರ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಬಾಲಕರ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ತರಗತಿಯಲ್ಲಿ ಗುರುಗಳು ಹೇಳಿದ ಪಾಠವನ್ನು ಮನನ ಮಾಡಿಕೊಂಡು ಮನೆಯಲ್ಲಿ ಅಧ್ಯಯನದ ಜೊತೆಗೆ ತಂದೆ ತಾಯಿಗಳಿಗೆ ಗೌರವ ಕೊಡುವುದನ್ನು ನಾವು ಕಲಿಯಬೇಕು ಎಂದು ಕಿವಿಮಾತು ಹೇಳಿದರು.
ವ್ಯಾಪಾರಿಗಳ ಮೇಲೆ GST ಪರಿಣಾಮ ಕುರಿತು ವೆಬಿನಾರ್
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಸವರಾಜ ಸಿನ್ನೂರ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯು ವಿದ್ಯಾರ್ಥಿ ದಿಸೆಯಿಂದಲೇ ಸಾಹಿತ್ಯಿಕ,ಸಾಮಾಜಿಕ,ಸಾಂಸ್ಕೃತಿಕ, ಹಾಗೂ ಸೃಜನಾತ್ಮಕ ಬರವಣಿಗೆಯ ಒಲವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಅಲ್ಲದೆ ಉತ್ತಮ ಸಾಹಿತ್ಯವನ್ನು ಓದುವುದರಿಂದ ಮನುಷ್ಯನಲ್ಲಿ ಉತ್ತಮ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಾಧ್ಯ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಅಬ್ದುಲ್ ಕರೀಂ ಕನ್ಯಾಕೋಳೂರ,ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು,ಸಾಂಸ್ಕೃತಿಕ ಕಾರ್ಯಕ್ರಮಗಳ ಕಾರ್ಯದರ್ಶಿ ಅಧಿಕಾರಿಗಳಾದ ಅಯ್ಯಣ್ಣ ಇನಾಮದಾರ,ಉಪನ್ಯಾಸಕರಾದ ಗುರುರಾಜ ಕುಲಕರ್ಣಿ,ಪ್ರಕಾಶ್, ಹೊನ್ನಮ್ಮ,ನೀಲವೇಣಿ,ಸುಧಾಕರ್ ಬುದ್ಧಿ,ಶಿವಶರಣಪ್ಪ ಭಂಡಾರಿ,ಸೂರ್ಯಕಾಂತ್,ಭೀಮಾ ಶಂಕರ್, ಹಾಗೂ ಇತರರು ಉಪಸ್ಥಿತರಿದ್ದರು,ನಂತರ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸಂಸದ ಜಾಧವ್ ಗೆ ಶಾಸಕ ಖರ್ಗೆ ತಿರುಗೇಟು
ಕಾರ್ಯಕ್ರಮದ ಪ್ರಾರಂಭದಲ್ಲಿ ಚೇತನ್ ಹಾಗೂ ಬಸು ಅವರಿಂದ ಪ್ರಾರ್ಥನೆ ಗೀತೆ ಹಾಡಿದರು, ಭವಾನಿ ಪ್ರಾಸ್ತಾವಿಕ ನುಡಿಗಳಾಡಿದರು,ಮಹ್ಮದ್ ಮಶಾಕ್ ನಿರೂಪಿಸಿ ವಂದಿಸಿದರು.