ಮನೆಯಲ್ಲೇ ೨೫ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಉದಯಕರ ದಂಪತಿ

0
232

ಶಹಾಬಾದ: ಮನುಷ್ಯ ೫೦ ವರ್ಷ ಬದಕುವುದು ದುಸ್ತರವಾದ ಕಾಲಘಟ್ಟದಲ್ಲಿ ೨೫ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವುದು ನೋಡಿದರೇ ಇದೇ ದೊಡ್ಡದಾದ ಸಾಧನೆ ಎಂಬುದು ನನ್ನ ಅನಿಸಿಕೆ ಎಂದು ಸಿದ್ಧರಾಮೇಶ್ವರ ಶಾಲೆಯ ಮುಖ್ಯಶಿಕ್ಷಕ ಶಿವಶರಣಪ್ಪ ಹೊನಗುಂಟಿಕರ್ ಹೇಳಿದರು.

ಅವರು ನಗರದ ಸಿದ್ರಾಮ ಉದಯಕರ್ ಹಾಗೂ ನಿರ್ಮಲಾ ಉದಯಕರ ದಂಪತಿಗಳ ೨೫ನೇ ಮದುವೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಮನೆಯ ನಾಲ್ಕು ಜನರು ಕೂಡಿಕೊಂಡು ಆಚರಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಕೊರೊನಾದ ಪರಿಸ್ಥಿತಿಯಲ್ಲಿ ಸಂಬಂಧಗಳನ್ನೇ ಕಡಿದುಕೊಳ್ಳುತ್ತಿದ್ದೆವೆ. ಕೊರೊನಾದಿಂದ ಸಾವನಪ್ಪಿದ ಕುಟುಂಬದ ಸದಸ್ಯರಿಗೆ ಮುಟ್ಟಲಾರದ ಪ್ರಸಂಗ ಹಾಗೂ ಮುಖ ನೋಡಲಾರದ ದಾರುಣ ಸ್ಥಿತಿ ಯನ್ನು ಕಂಡಿದ್ದೆವೆ. ಇಂತಹ ಸಂದರ್ಭದಲ್ಲಿ ಮದುವೆಯಾಗಿ ಸುಮಾರು ೨೫ ವರ್ಷಗಳ ಕಾಲ ಅನ್ಯೋನ್ಯತೆಯಿಂದ ಬದುಕು ನಿರ್ವಹಣೆ ಮಾಡಿದ್ದಾರೆ.ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎನ್ನುವಂತೆ ಒಬ್ಬರಿಗೊಬ್ಬರೂ ತಾಳ್ಮೆಯಿಂದ ಅನುಸರಿಸಿಕೊಂಡು ಜೀವನ ನಡೆಸುತ್ತಿರುವುದೆ ದೊಡ್ಡ ಸಾಧನೆ ಎಂದು ನಾನು ನಂಬಿದ್ದೆನೆ.ಅಲ್ಲದೇ ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಗಳನ್ನು ಅಪ್ಪಿಕೊಂಡು ನಡೆಯುವ ಸಿದ್ರಾಮ ಉದಯಕರ ಅವರ ಜೀವನ ಸಂತೋಷವಾಗಿ ಸಾಗಲಿ ಎಂದು ಹಾರೈಸುತ್ತೆನೆ ಎಂದು ಹೇಳಿದರು.

ಅಂಬಿಕಾ ಹೊನಗುಂಟಿಕರ್,ಐಶ್ವರ್ಯ, ಅಶ್ವಿನ್‌ಕುಮಾರ ಇತರರು ಇದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here