ಸಂಗೀತ, ವಾದ್ಯ ನುಡಿಸುವುದರೊಂದಿಗೆ ಕೊರೊನಾ ಜನಜಾಗೃತಿ

0
166

ಕಲಬುರಗಿ: ಸಂಗೀತದ ಹಲವಾರು ವಾದ್ಯಗಳು ನುಡಿಸುವದರಿಂದ ಹಾಗೂ  ಹಾಡುವುದರಿಂದ ನಮ್ಮ ಉಸಿರಾಟ ಪ್ರಕ್ರಿಯೆ ಉತ್ತಮಗೊಳಿಸುವುದರೊಂದಿಗೆ ಹಲವಾರು ರೋಗಗಳು ಹೋಗಲಾಡಿಸಬಹುದು ಹಾಗೂ ರೋಗ ಬರದಂತೆ ನೋಡಿ  ಕೊಳ್ಳಬಹುದು  ಎಂದು ಖ್ಯಾತ ಕೊಳಲು ವಾದಕ ಪ್ರಶಾಂತ ಗೋಲ್ಡ್ ಸ್ಮಿತ್  ಅವರು ಹೇಳಿದರು.

ನಗರದ ಸಂತೋಷ್ ಕಾಲನಿಯ ಕೆಎಚ್ ಬಿ ಗ್ರೀನ್ ಪಾರ್ಕ್  ಬಡಾವಣೆಯಲ್ಲಿ ಕೆಎಚ್ ಬಿ ಕ್ಷೇಮಾಭಿವೃದ್ಧಿ  ಸಂಘದ ವತಿಯಿಂದ ಹಮ್ಮಿಕೊಂಡಿರುವ ವಿಭಿನ್ನ  ರೀತಿಯ ಸಂಗೀತ ಮತ್ತು ವಾದ್ಯಗಳ ನುಡಿಸುವದರೊಂದಿಗೆ ಕೊರೊನಾ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ  ಮನುಷ್ಯನು ಹಲವಾರು ಒತ್ತಡದ ಮಧ್ಯದಲ್ಲಿ ಜೀವನ ಸಾಗಿಸುತ್ತಿದ್ದೇನೆ. ಶಾಂತಿ ನೆಮ್ಮದಿ ಕಳೆದುಕೊಂಡು ಅಶಾಂತಿಯಿಂದ   ಹಲವಾರು ರೋಗಗಳ ಮಧ್ಯದಲ್ಲಿ ಜೀವನ ಸಾಗಿಸುತ್ತಿದ್ದಾನೆ.

Contact Your\'s Advertisement; 9902492681

ಆದರೆ ಸಂಗೀತ ಆಲಿಸುವುದರಿಂದ ವಾದ್ಯ ನುಡಿಸುವದರಿ೦ದ ಶಾಂತಿ ನೆಮ್ಮದಿ ಸಿಗುವುದರೊಂದಿಗೆ  ಆರೋಗ್ಯವಂತರಾಗಿ ಬದುಕಬಹುದು. ಹಾಡುಗಳನ್ನು ಹಾಡುವುದರಿಂದ ನಮ್ಮ ಉಸಿರಾಟ ಪ್ರಕ್ರಿಯೆ ಉತ್ತಮ ಆಗುವದರೊ೦ದಿಗೆ  ಹೃದಯ ಕಾಯಿಲೆ ಹಾಗೂ  ಕೊರೋನಾ ಸೋಂಕು ಹೀಗೆ ಹಲವಾರು ರೋಗ ಬರದಂತೆ ನೋಡಿಕೊಳ್ಳಬಹುದು.  ಸಂಘವು ಇಂಥ ವಿಭಿನ್ನ ರೀತಿಯ ಕೊರೋನಾ ಜನಜಾಗ್ರತಿ ಕಾರ್ಯಕ್ರಮ  ಹಮ್ಮಿಕೊಂಡಿರುವುದು ಶ್ಲಾಘನೀಯ.  ಸಂಘವು  ಇಂಥ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನರಿಗೆ ಒಳ್ಳೆಯ ಸಂದೇಶ ನೀಡುವದರೊ೦ದಿಗೆ ಸರಕಾರ ಮಾಡುವ ಕಾರ್ಯಕ್ಕೆ ಸರ್ವರು ಸಹಕರಿಸಬೇಕೆಂದು ಹೇಳಿದರು.

ಸಂಘದ ಅಧ್ಯಕ್ಷರಾದ ಸಂಜೀವ ಕುಮಾರ್ ಶೆಟ್ಟಿ ಮಾತನಾಡುತ್ತ ನಾವೆಲ್ಲರೂ  ಕೊರೋನಾ ಸೋಂಕಿನ ಬಗ್ಗೆ ಭಯ ಪಡದೆ ಮುಂಜಾಗ್ರತೆ ವಹಿಸಿಕೊಂಡು ಸೊ೦ಕು  ಓಡಿಸುವುದರೊಂದಿಗೆ ರೋಗ ಮುಕ್ತ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಖ್ಯಾತ ಸಂಗೀತ ಕಲಾವಿದರಾದ  ಸಂಗಮೇಶ ಶಾಸ್ತ್ರಿ ಮಾಶಾಳ, ಸಂಘದ ಕಾನೂನು ಸಲಹೆಗಾರರಾದ ನ್ಯಾಯವಾದಿ ಹಣಮಂತರಾಯ ಎಸ. ಅಟ್ಟೂರ, ಪ್ರದೀಪ ಕುಮಾರ ಕುಂಬಾರ, ದಿಲೀಪಕೂಮಾರ ಭಕರೆ,ಬಸವರಾಜ ಬಿರಾದಾರ ಹೊದಲೂರ, ಚಂದ್ರಶೇಖರ ಹರವಾಳ, ರವೀಂದ್ರ ಗುತ್ತೇದಾರ,ರಾಮದಾಸ ಪಾಟೀಲ ಇವರು ಕೊರೋನಾ ಜಾಗೃತಿ   ಗೀತೆಗಳನ್ನು ಪ್ರಸ್ತುತ ಪಡಿಸುವ ಮೂಲಕ  ಜನಜಾಗೃತಿ ಮುಡಿಸಲಾಯಿತು.

ಕೊಳಲು ವಾದಕರಾದ ಪ್ರಶಾಂತ ಅವರು ಅದ್ಭುತವಾಗಿ ಕೊಳಲು ನುಡಿಸಿದರು. ಇವರಿಗೆ ಸಂಘದ ವತಿಯಿಂದ ವಿಶೇಷವಾಗಿ ಗೌರವಿಸಲಾಯಿತು.  ಕಾರ್ಯಕ್ರಮದಲ್ಲಿ  ಸಂಘದ ಗೌರವಾಧ್ಯಕ್ಷರಾದ ನಾಗೇಂದ್ರಪ್ಪ ದಂಡೋತಿಕರ, ಉಪಾಧ್ಯಕ್ಷರಾದ ಬಾಲಕೃಷ್ಣ ಕುಲಕರ್ಣಿ’ ಕುಶಾಲ ದರ್ಗಿ,ಶ್ರೀಶೈಲ ಪಾಟೀಲ, ಶಿವಾನಂದ ಭುಜರಿ, ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here