ಪ್ರವಾಹ ಭೀತಿ ನದಿ ಪಾತ್ರದ ಗ್ರಾಮಗಳಿಗೆ ತಹಸೀಲ್ದಾರ್ ಭೇಟಿ

0
21

೨೩೦೭ ಸುರಪುರ ೦೧
ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ ಹಿನ್ನೆಲೆಯಲ್ಲಿ ನದಿ ಪಾತ್ರದ ಗ್ರಾಮಗಳಿಗೆ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಭೇಟಿ ನೀಡಿ ಜನರಿಗೆ ಎಚ್ಚರಿಕೆ ನೀಡಿದರು.

ಸುರಪುರ: ಕೃಷ್ಣಾ ನದಿಗೆ ದಿನೆ ದಿನೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುತ್ತಿರುವುದರಿಂದ ನದಿ ಪಾತ್ರಾದ ಗ್ರಾಮಗಳಲ್ಲಿನ ಜನರಲ್ಲಿ ಪ್ರವಾಹದ ಭೀತಿ ಹೆಚ್ಚುತ್ತಿದೆ.ಆದ್ದರಿಂದ ಪರಸ್ಥಿತಿಯನ್ನು ಅರಿಯಲು ಸ್ವತಃ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ನದಿ ಪಾತ್ರದ ಗ್ರಾಮಗಳಿಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

Contact Your\'s Advertisement; 9902492681

ಶುಕ್ರವಾರ ಮುಂಜಾನೆ ತಾಲೂಕಿನ ನೀಲಕಂಠರಾಯನಗಡ್ಡಿಗೆ ಭೇಟಿ ನೀಡಿದ ತಹಸೀಲ್ದಾರರು ಅಲ್ಲಿಯ ಜನರೊಂದಿಗೆ ಸಮಾಲೋಚನೆ ನಡೆಸಿದರು.ನದಿಗೆ ಈಗ ೨ ಲಕ್ಷ ಕ್ಯೂಸೆಕ್‌ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನೀರು ನದಿಗೆ ಬಿಡುಗಡೆ ಮಾಡಲಾಗುತ್ತಿದೆ.ಇನ್ನೂ ಹೆಚ್ಚಾಗಬಹುದು,ಆದ್ದರಿಂದ ತಾವೆಲ್ಲರು ಸುರಕ್ಷಿತ ಸ್ಥಳಕ್ಕೆ ತೆರಳುವುದಾದರೆ ಎಲ್ಲಾ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು.ಆದರೆ ನೀಲಕಂಠರಾಯನಗಡ್ಡಿಯ ಜನರು ಸದ್ಯ ಇನ್ನೂ ಹೆಚ್ಚಿನ ನೀರು ಬರದಿರುವುದರಿಂದ ನಮಗೆ ಏನು ತೊಂದರೆ ಇಲ್ಲ ಇಲ್ಲೆ ಇರುವುದಾಗಿ ತಿಳಿಸಿದರು.

ಅಲ್ಲದೆ ಹಾಗೇನಾದರು ನಮಗೆ ಅಪಾಯ ಎನಿಸಿದಲ್ಲಿ ನಾವು ತಿಳಿಸುತ್ತೇವೆ ಆಗ ಇಲ್ಲಿಂದ ಬರುವುದಾಗಿ ಜನರು ತಿಳಿಸಿದರು.

ಅದೇರೀತಿಯಾಗಿ ನದಿ ಪಾತ್ರದ ಗ್ರಾಮಗಳಾದ ತಿಂಥಣಿ ಶೆಳ್ಳಗಿ ಮತ್ತಿತರೆ ಗ್ರಾಮಗಳಿಗೆ ತಹಸೀಲ್ದಾರರು ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಿದರು.ಯಾವುದೇ ಕಾರಣಕ್ಕೂ ಜನರು ನದಿ ಕಡೆಗೆ ಹೋಗದಂತೆ ಎಚ್ಚರಿಕೆಯನ್ನು ನೀಡುವ ಜೊತೆಗೆ ತಿಂಥಣಿ ಗ್ರಾಮದಲ್ಲಿ ಮೌನೇಶ್ವರ ದೇವಸ್ಥಾನದ ಮುಂಬಾಗದಿಂದ ನದಿಗೆ ಹೋಗುವ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಿಸುವ ಮೂಲಕ ಜನರು ಮತ್ತು ಜಾನುವಾರುಗಳು ನದಿ ಕಡೆಗೆ ಹೋಗದಂತೆ ಕ್ರಮ ಕೈಗೊಳ್ಳಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here