ಮಠಾಧೀಶರ ಬಗ್ಗೆ ಅವಹೇಳನದ ಮಾತು ಸಲ್ಲದು-ಶಿವರಾಜ್ ಕಲಕೇರಿ

0
14

ಸುರಪುರ: ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಕುರಿತು ಇಂದು ಅನೇಕ ಜನರು ತಮ್ಮದೆ ಆದ ರೀತಿಯಲ್ಲಿ ಮಾತನಾಡುತ್ತಿದ್ದಾರೆ.ಆದರೆ ಮುಖ್ಯಮಂತ್ರಿ ಯಡಿಯೂರಪ್ಪನವರ ಕುರಿತು ಮಠಾಧೀಶರು ಮಾತನಾಡಿದ್ದರ ಕುರಿತು ಅನೇಕರು ಮಠಾಧೀಶರ ಬಗ್ಗೆ ಅವಹೇಳನದ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಯುವ ಘಟಕದ ಅಧ್ಯಕ್ಷ ಹಾಗು ಶರಣ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಿವರಾಜ್ ಕಲಕೇರಿ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾದ್ಯಮಗಳಿಗೆ ಹೇಳಿಕೆ ನೀಡಿರುವ ಮುಖಂಡ ಶಿವರಾಜ್ ಕಲಕೇರಿ,ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಆರಂಭದಿಂದಲೂ ಕಟ್ಟಿ ಬೆಳೆಸಿದ್ದಾರೆ.ಅಲ್ಲದೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದಾದರೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರಿಗೆ ಗೌರವಯುತವಾಗಿ ನಡೆಸಿಕೊಂಡು ಸ್ಥಾನದಿಂದ ಕೆಳಗಿಳಿಸಲಿ.ಅಲ್ಲದೆ ಅವರು ಕೊರೊನಾ ಸಂದರ್ಭದಲ್ಲಿ ತುಂಬಾ ಅದ್ಭುತವಾಗಿ ಕೆಲಸ ಮಾಡಿದ್ದಾರೆ.

Contact Your\'s Advertisement; 9902492681

ಒಬ್ಬ ಹಿರಿಯ ರಾಜಕಾರಣಿಯನ್ನು ಹೈಕಮಾಂಡ್ ಇನ್ನಷ್ಟು ದಿನಗಳ ಕಾಲ ಅಧಿಕಾರ ನಡೆಸಲು ಅವಕಾಶ ಮಾಡಿಕೊಡಲಿ ಎನ್ನುವ ಕಾರಣದಿಂದ ಮಠಾಧೀಶರು ಯಡಿಯೂರಪ್ಪನವರ ಪರವಾಗಿ ಮಾತನಾಡಿದ್ದಾರೆ.ಇದನ್ನೆ ನೆಪವಾಗಿಸಿಕೊಂಡಿರುವ ರಾಜ್ಯದ ಕೆಲ ಜನರು ಮಠಾಧೀಶರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ.ಇದು ಸರಿಯಲ್ಲ.ಮಠಾಧೀಶರು ಒಬ್ಬ ಹಿರಿಯ ಮುತ್ಸದ್ಧಿ ರಾಜಕಾರಣಿಯ ಬಗ್ಗೆ ಮಾತನಾಡಿದ್ದಾರೆ,ಅಂತಹ ಒಬ್ಬ ಹಿರಿಯ ರಾಜಕಾರಣಿಗೆ ಅನ್ಯಾಯವಾಗಬಾರದು ಇದು ಮುಂದೆ ಯಾವುದೇ ಪಕ್ಷದ ಹಿರಿಯ ರಾಜಕಾರಣಿಗಳಿಗು ಅನ್ವಯವಾಗುವ ಸಂದರ್ಭ ಬಾರದಿರಲಿ ಇದು ರಾಜಕಾರಣಕ್ಕೆ ಸರಿಯಲ್ಲವೆಂಬ ಕಾರಣದಿಂದ ಮಾತನಾಡಿದ್ದಾರೆ.ಇದನ್ನು ಅರ್ಥ ಮಾಡಿಕೊಳ್ಳದೆ ಮಠಾಧೀಶರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡದಂತೆ ಅವರು ವಿನಂತಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here