ನಾಳೆ ಮಾಜಿ ಮುಖ್ಯಮಂತ್ರಿ ದಿ. ಧರಂಸಿಂಗ್ 4 ನೇ ಪುಣ್ಯಸ್ಮರಣೋತ್ಸವ

0
39

ಕಲಬುರಗಿ: ಅಜಾತ ಶತ್ರು, ಬಡವರ ಮುಖ್ಯಮಂತ್ರಿ ಎಂದೇ ಹೆಸರಾಗಿದ್ದ ದಿ. ಡಾ. ಎನ್ ಧರಂಸಿಂಗ್ ಅವರು ರಾಜ್ಯದ ಜನತೆಯನ್ನಗಲಿ  ಇದೇ ಜು. 27 ಕ್ಕೆ (ಜು. 27, 2017) 4 ವರ್ಷಗಳು ತುಂಬಿವೆ. ತಮ್ಮ 81 ಸಾರ್ಥಕ ವಸಂತಗಳ ಜೊತೆಗೇ 50 ವರ್ಷಗಳ ಸುದೀರ್ಘ ರಾಜಕೀಯ ಜೀವನವನ್ನು ನಡೆಸಿ ರಾಜ್ಯದ ಹಿತ ಕಾಪಾಡಿದ ಧರಂಸಿಂಗ್ ರಾಜಕೀಯ ಜೀವನ ಬಲು ರೋಚಕ ಎಂದು ಜನ ಇಂದಿಗೂ ಸ್ಮರಿಸುತ್ತಾರೆ.

ಹಿಂದಿ ಶಿಕ್ಷಕ ವೃತ್ತಿಯೊಂದಿಗೇ ವಕೀಲರಾಗಿದ್ದ ಧರಂಸಿಂಗ್ 1972 ರಲ್ಲಿ ಜೇವರ್ಗಿ ಅಸೆಂಬ್ಲಿಯಿಂದ ಸ್ಪರ್ಧಿಸಿ ಗೆದ್ದವರು ಹಿಂದಿರುಗಿ ನೋಡಿz್ದÉೀ ಇಲ್ಲ, ಸತತ ಗೆಲ್ಲುತ್ತಲೇ ಜನಾನುರಾಗಿ ಜನನಾಯಕರಾಗಿ ಸರ್ವಸ್ಪರ್ಶಿ ಸಿಎಂ ಎಂದು ಹೆಸರಾದವರು. ಧರಂಸಿಂಗ್ ಅವರ ಹುಟ್ಟೂರು ಜೇವರ್ಗಿ ತಾಲೂಕಿನ ನೆಲೋಗಿಯಲ್ಲಿ ಮಂಗಳವಾರ ಸರಳವಾಗಿ ಅವರ ಪುಣ್ಯ ಸ್ಮರಣೋತ್ಸವವನ್ನು ಕುಟುಂಬದ ಸದಸ್ಯರು ಸೇರಿ ಆಚರಿಸುತ್ತಿದ್ದಾರೆ.

Contact Your\'s Advertisement; 9902492681

ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ತಂದೆಯವರ ಪುಣ್ಯ ಸ್ಮರಣೆ ಕಾರ್ಯಕ್ರಮ ನೋಲೋಗಿಯಲ್ಲಿ ತುಂಬ ಸರಳವಾಗಿ ಕುಟುಂಬ ಸದಸ್ಯರೇ ಸೇರಿಕೊಂಡು ಆಚರಿಸಲಾಗುತ್ತಿದೆ ಎಂದು ಜೇವರ್ಗಿ ಶಾಸಕರು ಹಾಗೂ ವಿಧಾನಸಭೆ ವಿರೋಧ ಪಕ್ಷ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ತಿಳಿಸಿದ್ದಾರೆ. ಈ ಸಮಾರಂಭದಲ್ಲಿ ದಿ. ಧರಂಸಿಂಗ್ ಅವರ ಅಭಿಮಾನಿಗಳು, ಆಪ್ತರು, ಪಕ್ಷದ ಪ್ರಮುಖರು, ಕಾರ್ಯಕರ್ತರು ಪಾಲ್ಗೊಳ್ಳುತ್ತಿದ್ದು ಸಮಾರಂಭದಲ್ಲಿ ಪ್ರಸಾದ ವ್ಯವಸ್ಥೆಯೂ ಮಾಡಲಾಗಿದೆ.

ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದಲ್ಲಿ ಹುಟ್ಟಿ , ಪ್ರಾಥಮಿಕ, ಪ್ರೌಢ, ಉನ್ನತ ಶಿP್ಷÀಣ ಕಲಬುರಗಿಯಲ್ಲಿ ಮುಗಿಸಿ  ಹೈದರಾಬಾದ್ ನಲ್ಲಿ  ಉನ್ನತ ಕಾನೂನು ಪದ ಪಡೆದು ಕಲಬುರಗಿಯಲ್ಲೇ ವಕೀಲರಾದರು. ಕಾಂಗ್ರೆಸ್ ಪಕ್ಷದಲ್ಲಿ ದಿ. ಇಂದಿರಾ ಗಾಂಧಿಗೆ ಹತ್ತಿರದವರಾಗಿದ್ದ ಧರಂಸಿಂಗ್ 1972 ರಲ್ಲಿ ಜೇವರ್ಗಿ ಅಸೆಂಬ್ಲಿ ಕಣಕ್ಕಿಳಿದು ಗೆಲ್ಲುವುದರೊಂದಿಗೆ ಸತತ 11 ಬಾರಿ ಗೆಲ್ಲುತ್ತ ಗೆಲ್ಲುವ ಕುದುರೆಯಾದರು.

ಕಲಬುರಗಿ ಪಾಲಿಕೆ ಸದಸ್ಯರಾಗಿ, ನಿರಂತರ 8 ಬಾರಿ ಜೇವರ್ಗಿ ಶಾಸಕರಾಗಿ, ಕಲಬುರಗಿ, ಬೀದರ್ ಸಂಸದರಾಗಿ, ಕೆಪಿಸಿಸಿ ಅಧ್ಯP್ಷÀರಾಗಿ, ವಿರೋಧ ಪP್ಷÀದ ನಾಯಕರಾಗಿ ಕೆಲಸ ಮಾಡಿರುವ ಧರಂಸಿಂಗ್ ಸರ್ಕಾರದಲ್ಲಿ ಸಚಿವರಾಗಿ ಗೃಹ, ಲೋಕೋಪಯೋಗಿ, ಕಂದಾಯ, ಅಬಕಾರಿ, ಸಮಾಜ ಕಲ್ಯಾಣ ಮತ್ತು ನಗರಾಭಿವೃದ್ಧಿ ಸೇರಿದಂತೆ ಪ್ರಮುಖ ಖಾತೆ ನಿಭಾಯಿಸಿದವರು.

ರಾಜಕೀಯದಲ್ಲಿ ಹಲವಾರು ಮಜಲುಗಳನ್ನು ಹತ್ತಿ ಜನಪರ ಕೆಲಸಗಳಿಗೆ ಚಾಲನೆ ನೀಡಿದ ಧರಂಸಿಂಗ್ ಅವರ ಧರ್ಮಪತ್ನಿ ಪ್ರಭಾವತಿ ಧರಂಸಿಂಗ್ ಅವರೂ ಪತಿಯೊಂದಿಗೆ ಸಾಧನೆ ದಾರಿಯಲ್ಲಿ ಜೊತೆಯಾಗಿಯೇ ಹೆಜ್ಜೆ ಹಾಕಿದವರು. ಇವರ ಪುತ್ರ ಡಾ. ಅಜಯ್ ಸಿಂಗ್ ತಂದೆಯ ಉತ್ತರಾಧಿಕಾರಿಯಾಗಿ  ಜೇವರ್ಗಿ ಶಾಸಕರಾಗಿದ್ದು, ಇದೀಗ ಸದನದಲ್ಲಿ ರೋಧ ಪಕ್ಷದ ಮುಖ್ಯ ಸಚೇತಕರು, ಇನ್ನೋರ್ವ ಪುತ್ರ ವಿಜಯ ಸಿಂಗ್ ಬೀದರ್ ಜಿಲ್ಲೆಯ ಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ಆಯ್ಕೆಯಾಗಿ  ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here