ಶಹಾಬಾದ: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಹಿನ್ನೆಲೆಯಲ್ಲಿ ಶನಿವಾರ ಗ್ರೇಡ್-2 ತಹಸೀಲ್ದಾರ ಗುರುರಾಜ ಸಂಗಾವಿ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ತಂಡ ಗ್ರಾಮಕ್ಕೆ ತೆರಳಿ ಗ್ರಾಮಸ್ಥರಿಂದ ಸಮಸ್ಯೆಗಳನ್ನು ಆಲಿಸಿ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದರೇ ಇನ್ನೂ ಕೆಲವು ಸಮಸ್ಯೆಗಳಿಗೆ ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಿದರು.
ತಹಸೀಲ್ದಾರ ನಡೆ ಹಳ್ಳಿ ಕಡೆ ಎನ್ನುವ ಕಾರ್ಯಕ್ರಮಕ್ಕೆ ಶನಿವಾರ ತಾಲೂಕಿನ ತರಿತಾಂಡಾದಲ್ಲಿ ಇಡೀ ತಾಲೂಕಾಡಳಿತದೊಂದಿಗೆ ತೆರಳಿದಾಗ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿಕೊಂಡು ತಮ್ಮ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಇದನ್ನೂ ಓದಿ: ಅದ್ದೂರಿಯಿಂದ ಜರುಗಿದ ಶಹಾಬಾದ ಶರಣಬಸವೇಶ್ವರ ರಥೋತ್ಸವ
ತಾಂಡಾದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿದೆ. ಆದರೆ ಸಿಸಿ ರಸ್ತೆ ನಿರ್ಮಾಣ ಮಾಡದಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ಸಿಸಿ ರಸ್ತೆ ನಿರ್ಮಾಣ ಮಾಡಬೇಕೆಂದು ಹೇಳಿದರು. ಅಲ್ಲದೇ ಸರಕಾರಿ ಶಾಸಲೆಯಲ್ಲಿ ಶಿಕ್ಷಕರ ಸಂಖ್ಯೆ ಕಡಿಮೆಯಿರುವ ಕಾರಣ ಮಕ್ಕಳಿಗೆ ಅಭ್ಯಾಸ ಚೆನ್ನಾಗಿ ಆಗುತ್ತಿಲ್ಲ.ಶಿಕ್ಷಕರ ನಿಯೋಜನೆ ಮಾಡಬೇಕು. ಬಿಸಿಯೂಟದಲ್ಲಿ ವ್ಯತ್ಯಾಸ ಕಂಡು ಬರುತ್ತಿದ್ದು, ಸರಿಪಡಿಸಬೇಕು. ತೆರೆದ ಬಾವಿಯೊಂದು ತಾಂಡಾದಲ್ಲಿದ್ದು, ಮಕ್ಕಳು ಅದರಲ್ಲಿ ಬೀಳುವ ಸಾಧ್ಯತೆಯಿದೆ.ಆದ್ದರಿಂದ ಅದನ್ನು ಕಬ್ಬಿಣ ತುಂಡುಗಳ ಗ್ರಿಲ್ ಮಾಡಿ ಅಳವಡಿಸಿ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು. ನಂತರ ಎಲ್ಲಾ ಅಧಿಕಾರಿಗಳ ತಂಡ ಗ್ರಾಮದಲ್ಲಿ ಸುತ್ತಾಡಿ ತೆರೆದ ಬಾವುಯನ್ನು ವೀಕ್ಷಣೆ ಮಾಡಿದರು.
ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹಾರ ನೀಡಿದ್ದಾರೆ.ನಂತರ ಸಾರ್ವಜನಿಕರಿಂದ ಸುಮಾರು 30ಅರ್ಜಿಗಳು ಬಂದಿದ್ದು, ಅದರಲ್ಲಿ ವೃದ್ಯಾಪ ವೇತನ, ವಿಧವಾ ವೇತನ, ಅಂಗವಿಕಲರ ವೇತನ ಸೇರಿದಂತೆ ಅನೇಕ ಪಿಂಚಣಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸ್ಥಳದಲ್ಲಿಯೇ 19 ಜನರ ಮಾಶಾಸನ ಮಂಜೂರು ಮಾಡಲಾಯಿತು. ಇನ್ನುಳಿದ ಕೆಲವು ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ:ಕಂಬವೇರಿ ವಿದ್ಯುತ್ ದುರಸ್ಥಿತಿ ವೇಳೆ ವಿದ್ಯುತ್ ಸ್ಪರ್ಷಿಸಿ ಲೈನ್ ಮ್ಯಾನ್ ಸಾವು
ತಾಪಂ ಇಓ ಬಸಲಿಂಗಪ್ಪ ಡಿಗ್ಗಿ, ಭೂಮಾನ ಇಲಾಖೆಯ ರವಿಕುಮಾರ, ಕೃಷಿ ಇಲಾಖೆಯ ರವೀಂದ್ರಕುಮಾರ, ಪಶು ಸಂಗೋಪನಾ ಇಲಾಖೆಯ ಡಾ.ದಿಪ್ತಿ, ಶಿರಸ್ತೆದಾರರಾದ ರವಿಕುಮಾರ, ಸಯ್ಯದ್ ಹಾಜಿ, ಎಇ ಶ್ರೀನಿವಾಸ ಮುದ್ನಾಳ,ಕಂದಾಯ ಅಧಿಕಾರಿ ಹಣಮಂತರಾವ ಪಾಟೀಲ,ಸಮಾಜ ಕಲ್ಯಾಣ ಇಲಾಖೆಯ ರವಿಕುಮಾರ, ಸಯ್ಯದ್ ಖಾದ್ರಿ, ಶಿವಾನಂದ ಹೂಗಾರ, ಪಾರ್ವತಿ,ಶ್ರೀನಿವಾಸ, ಗ್ರಾಪಂ ಸದಸ್ಯರಾದ ಲಕ್ಷಮಿಕಾಂತ ಕಂದಗೂಳ, ಯಶವಂತ ಚವ್ಹಾಣ, ಭಾರತ್ ಜಾಧವ,ದೇವರಾಜ, ಮುಖಂಡರಾದ ಶಂಕರ ಪವಾರ, ಮಾರುತಿ ರಾಠೋಡ ಇತರರು ಇದ್ದರು.
ಇದನ್ನೂ ಓದಿ: ಪುರಾಣ-ಪ್ರವಚನಗಳು ಆಲಿಸುವುದರಿಂದ ಬದುಕಿಗೆ ನೆಮ್ಮದಿ: ಶಾಸಕ ಮತ್ತಿಮಡು