ಕಲಬುರಗಿ: ಸಮಾಜದಲ್ಲಿ ಅಂಕುಡೊಂಕು ತಿದ್ದಿ.ಸಮಾಜದ ಸ್ವಾಸ್ಥ್ಯ ಕಾಪಾಡುವುದು ಪತ್ರಿಕಾ ಧರ್ಮ, ಸತ್ಯಾಸತ್ಯತೆ ಅರಿತು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಲಿ ಎಂದು ಶ್ರೀನಿವಾಸ್ ಸರಡಗಿ ಪೂಜ್ಯರಾದ ಡಾ.ರೇವಣಸಿದ್ಧ ಶಿವಾಚಾರ್ಯರು ಹೇಳಿದರು
ನಗರದ ಪತ್ರಿಕಾ ಭವನದಲ್ಲಿ ದಿ. ಸುಭಾಶ್ಚಂದ್ರ ಪಾಟೀಲ್ ಜನಕಲ್ಯಾಣ ಟ್ರಸ್ಟನಡಿಯಲ್ಲಿ ‘ ಕಲ್ಯಾಣ ಕಹಳೆ ‘ ಮಾಸ ಪತ್ರಿಕೆ ಬಿಡುಗಡೆಗೊಳಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಇದನ್ನೂ ಓದಿ: ಕಲಬುರಗಿ: ಗುಡುಗು, ಗಾಳಿ, ಆಣೆಕಲ್ಲು ಸಹಿತ ಮಳೆ
ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ನ್ಯೂನತೆ ಸರಿಪಡಿಸಿ ಸಮಾಜದ ಬೆಳವಣಿಗೆಗೆ ಪೂರಕವಾಗಿ ಕೆಲಸ ನಿರ್ವಹಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ಮಾತನಾಡಿ, ಪತ್ರಿಕೆಗಳಿಗೆಸಾಮಾಜಿಕ ಹೊಣೆಗಾರಿಕೆ ಇದ್ದು, ಲಾಭಕ್ಕಾಗಿ ಪತ್ರಿಕೆ ನಡೆಸದೆ ಸಮಾಜದ ಸ್ವಾಸ್ಥ್ಯ ಕಾಪಾಡುವದಾಗಿದೆ. ಆದರೆ ಇಡೀ ವಿಶ್ವದಲ್ಲೇ ಉತ್ಪಾದನೆ ಕೃತಿಗಿಂತ ಕಡಿಮೆ ಬೆಲೆಗೆ ಮಾರಾಟವಾಗುವ ಏಕೈಕ ವಸ್ತುವೆಂದರೆ ಪತ್ರಿಕೆಗಳು.
ಯಾವುದೇ ಪತ್ರಿಕೆಗಳು ಮುದ್ರಣಗೊಂಡು ಓದುಗರ ಕೈಯಲ್ಲಿ ಸೇರಬೇಕಾದರೆ ಕನಿಷ್ಠ 20-25 ರೂಪಾಯಿ ಖರ್ಚು ವ್ಯಯಿಸಬೇಕಿದೆ. ಹೀಗಾಗಿ, ಸದ್ಯ ಪತ್ರಿಕೋದ್ಯಮ ಸಂಕಷ್ಟಕ್ಕೆ ಸಿಲುಕಿಕೊಂಡಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇನ್ನು ಶರಣಗೌಡ ಪಾಟೀಲ್ ಅವರು ಪತ್ರಿಕಾರಂಗಕ್ಕೆ ಧುಮ್ಮುಕಿದ್ದು, ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಿದರು. ಪ್ರಾದೇಶಿಕ ಆಯುಕ್ತರ ಕಚೇರಿಯ ತಸಿಲ್ದಾರ್ ಶಿವಪುತ್ರಪ್ಪ ಕಂಟ್ಟಿ ಚಿಂಚನ್ಸೂರ್ ಮಾತನಾಡಿದರು. ವೇದಿಕೆ ಮೇಲೆ ಅಫಜಲಪುರ ಠಾಣೆಯ ಸಿಪಿಐ ಜಗದೇವಪ್ಪ ಪಾಳಾ, ಬಿಜೆಪಿ ಮುಖಂಡ ಗೋರಖನಾಥ ಶಾಖಾಪುರ, ಕಸಾಪ ಗೌರವ ಕಾರ್ಯದರ್ಶಿ ಪ್ರೊ.ಯಶವಂತರಾಯ ಅಷ್ಟಗಿ ಮತ್ತಿತರರಿದ್ದರು.
ಇದನ್ನೂ ಓದಿ: ಯಾತ್ರೆಯ ಬಳಿಕ ಚುನಾವಣೆ ಅಭ್ಯರ್ಥಿಯ ಘೋಷಣೆ
ಡಾ ಶರಣಬಸಪ್ಪ ವಡ್ಡನಕೇರಿ ನಿರೂಪಿಸಿದರು. ಪತ್ರಿಕೆ ಸಂಪಾದಕ ಶರಣಗೌಡ ಪಾಟೀಲ್ ಪಾಳಾ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ ಶಿವಶಂಕರಕ ಬಿರಾದಾರ ಕೋಟನೂರ್ ( ಡಿ )ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಬಿ ಎಚ್ ನಿರಗುಡಿ., ಜಗದೀಶ್ ಪಾಟೀಲ್ ಸಣ್ಣೂರ,.ವಿನೋದ್ ಪಾಟೀಲ್ ಸರಡಗಿ, ರೇವಣಯ್ಯಸ್ವಾಮಿ, ಶಿವು ಮುಗುಳುನಾಗಾಂವ (ಗುತ್ತೇದಾರ) ಕುಸನೂರ, ನಾಗರಾಜ ಕಲ್ಲಾ ನಂದೂರ್,ವಿಶ್ವನಾಥ್ ಪಾಟೀಲ್ ಗೌನಳ್ಳಿ, ಮಂಗಲಾ ಕಪರೆ, ಗಂಗಮ್ಮ ನಾಲ್ವಾರ್, ಮಲ್ಲಮ್ಮ ಕಾಳಗಿ, ಚಾಮರಾಜ್ ದೊಡ್ಡಮನಿ, ವೆಂಕಟೇಶನ್ ಜನಾರ್ದಿ ಮಲ್ಲಿಕಾರ್ಜುನ ಸುಣ್ಣೂರ ಇತರರು ಉಪಸ್ಥಿತರಿದ್ದರು.