- ಕೆ.ಶಿವು.ಲಕ್ಕಣ್ಣವರ
ಪಶ್ವಿಮ ಶಿಕ್ಷಕರ ಕ್ಷೇತ್ರದಲ್ಲಿ ಸತತವಾಗಿ ಏಳು ಬಾರಿ ಗೆದ್ದು ದಾಖಲೆ ನಿರ್ಮಿಸಿದವರು ಬಸವರಾಜ ಹೊರಟ್ಟಿಯವರು. ಈ ಏಳು ಚುನಾವಣೆಯಲ್ಲಿ ಮೊಟ್ಟಮೊದಲ ಬಾರಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದರು. ಆದರೆ ಭಾರೀ ಹಣಾಹಣಿಯ ಪ್ರತಿಷ್ಠಿತ ಚುನಾವಣಾವಾಗಿ ಕಣವಾಗಿ ಪಶ್ಚಿಮ ಶಿಕ್ಷಕರ ಕ್ಷೇತ್ರ ಸಿದ್ಧವಾಗಿದೆ. ಈ ಕ್ಷೇತ್ರಕ್ಕೆ ಚುನಾವಣೆಯ ದಿನಾಂಕ ಈಗಾಗಲೇ ಘೋಷಣೆಯಾಗಿದೆ. ಸಾಕಷ್ಟು ಚಟುವಟಿಕೆಗಳೂ ತಯಾರು ಮಾಡಿಕೊಳ್ಳಲಾಗುತ್ತಿವೆ ಎಲ್ಲಾ ಪಕ್ಷಗಳೂ. ಅಷ್ಟೇ ಅಲ್ಲದೇ ಶಿಕ್ಷಕರ ಕ್ಷೇತ್ರದಲ್ಲಿ ಇದೀಗ ಮಿಂಚಿನ ರಾಜಕೀಯ ಚಟುವಟಿಕೆಗಳು ನಡೆದಿವೆ.
ಈ ಮೊದಲು ನಡೆದ ಚುನಾವಣೆಗಳಂತೆ ಈ ಸಲದ ಚುನಾವಣೆ ಅಲ್ಲವೇ ಅಲ್ಲ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಹಾಲಿ ವಿಧಾನಸಭಾ ಸಭಾಪತಿ ಬಸವರಾಜ ಹೊರಟ್ಟಿ ಕಣಕ್ಕೆ ಇಳಿಯಲು ಕಸರತ್ತು ನಡೆಸಿದ್ದರು. ಈಗ ಅದು ಅಂತಿಮವಾಗಿದೆ. ಇನ್ನೊಂದು ಕಡೆ ಹೇಗಾದರೂ ಮಾಡಿ ಈ ಸಲ ಕೈ ವಶಕ್ಕೆ ಕಾಂಗ್ರೆಸ್ ನಾಯಕರು ಶತಾಯ ಗತಾಯ ಪ್ರಯತ್ನ ಮಾಡುತಿದ್ದಾರೆ. ಶಿಕ್ಷಕರ ಕ್ಷೇತ್ರದಲ್ಲಿ ಸತತವಾಗಿ ಏಳು ಬಾರಿ ಗೆದ್ದು ದಾಖಲೆ ನಿರ್ಮಿಸಿದರು ಬಸವರಾಜ ಹೊರಟ್ಟಿಯವರು.
ಇದನ್ನೂ ಓದಿ: ರಸಗೊಬ್ಬರ ಕೊರತೆ ನೀಗಿಸಲು ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಆಗ್ರಹ
ಈ ಏಳೆನೆಯ ಚುನಾವಣೆಗಳಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದರು ಬಸವರಾಜ ಹೊರಟ್ಟಿಯವರು. ಬಳಿಕ ನಡೆದ ಆರೂ ಚುನಾವಣೆಗಳಲ್ಲೂ ಜನತಾ ಪರಿವಾರದಿಂದ ಸ್ಪರ್ಧಿಸಿ ಗೆಲುವು ಕಂಡಿದ್ದವರು ಬಸವರಾಜ ಹೊರಟ್ಟಿಯವರು. ಈಗ ಈ ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಬಿಜೆಪಿ ಸೇರಿ ಆ ಪಕ್ಷದಿಂದಲೇ ಕೊನೆಯ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ.
ಇನ್ನು ಭಾರತೀಯ ಜನತಾ ಪಕ್ಷಕ್ಕೆ ಅತ್ಯಂತ ಇದು ಮಹತ್ವವಾದ ಚುನಾವಣೆ ಆಗಿದ್ದು, ವಿಧಾನ ಪರಿಷತ್‌ನಲ್ಲಿ ಸಂಖ್ಯಾ ಬಲ ಹೆಚ್ಚಿಸಿಕೊಳ್ಳಲು ತಂತ್ರ ರೂಪಿಸುತ್ತಿದೆ ಬಿಜೆಪಿ ಪಕ್ಷವು. ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸೋಲನುಭವಿಸಿರುವ ಬಸವರಾಜ ಗುರಿಕಾರ ಅವರನ್ನು ಕಾಂಗ್ರೆಸ್ ತನ್ನ ಹುರಿಯಾಳು ಎಂದು ಘೋಷಿಸಿಕೊಂಡಿದೆ.
ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ
ಏಳು ಬಾರಿ ಗೆದ್ದಿರುವ ಬಸವರಾಜ ಹೊರಟ್ಟಿಯವರನ್ನು ಅವರಿಗೆ ಈ ಸಲ ಸೋಲಿಸಲೇಬೇಕು ಎಂಬ ಪಣ ಕಾಂಗ್ರೆಸ್ ನಾಯಕರದ್ದು ಆಗಿದೆ. ಈ ಹಿನ್ನೆಲೆಯಲ್ಲಿಯೇ ಮತದಾರರ ನೋಂದಣಿ, ಪ್ರಚಾರವನ್ನೂ ಭರ್ಜರಿಯಾಗಿ ನಡೆಸಿದ್ದು, ವೈಯಕ್ತಿಕವಾಗಿ ಮತದಾರರಿಗೆ ಅಭ್ಯರ್ಥಿ ಕಾರ್ಯವೈಖರಿ, ತಮ್ಮ ಅಜೆಂಡಾ, ಶಿಕ್ಷಕ ಸಮಸ್ಯೆ ಹಾಗೂ ಮುಂದಿನ ಶೈಕ್ಷಣಿಕ ಸವಾಲುಗಳನ್ನು ಹೇಗೆ ಎದುರಿಸುವ ಕುರಿತು ಮನವರಿಕೆ ಮಾಡಿಕೊಡಲಾಗುತ್ತದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹಿಂಬಾಲಕರಾದ ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಅವರು ಸಹ ಬಿಜೆಪಿ ಅಭ್ಯರ್ಥಿ ಎಂದು ಸ್ವಯಂ ಘೋಷಣೆ ಮಾಡಿಕೊಂಡು ಪ್ರಚಾರ ಅಖಾಡಕ್ಕೆ ಸಹ ಇಳಿದಿದ್ದರು.
ಆದರೆ ರಾಜಕೀಯ ಚಿತ್ರಣವೇ ಬದಲಾಗಿದ್ದು ಬಸವರಾಜ ಹೊರಟ್ಟಿ ಅವರಿಗೇ ಭಾರತೀಯ ಜನತಾ ಪಕ್ಷದ ಟಿಕೆಟ್ ಪಕ್ಕಾ ಆಗಿ, ಇಷ್ಟುದಿನ ತಾವೇ ಬಿಜೆಪಿ ಅಭ್ಯರ್ಥಿ ಎಂದುಕೊಂಡಿದ್ದ ಮೋಹನ ಲಿಂಬಿಕಾಯಿ ಅವರಿಗೆ ಬಸವರಾಜ ಹೊರಟ್ಟಿ ಅಡ್ಡಗಾಲಾದಾರು. ಟಿಕೆಟ್ ಸಿಗದಿದ್ದಲ್ಲಿ ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರಾಗಿರಲೇ ಬೇಕಾಗಿದೆ ಮೋಹನ ಲಿಂಬಿಕಾಯಿಯವರು. ಅಥವಾ ಸಡ್ಡು ಹೊಡೆದು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿತ್ತು. ಆದರೆ ಬಿಜೆಪಿ ಪಕ್ಷದ ನಾಯಕರಾಗಿ ಮನವರಿಕೆಯಿಂದ ಮೋಹನ ಲಿಂಬಿಕಾಯಿಯವರು ಈಗ ಬಸವರಾಜ ಹೊರಟ್ಟಿಯವರಿಗೇ ಬೆಂಬಲಿಸುತ್ತಿದ್ದಾರೆ.
ಇದನ್ನೂ ಓದಿ: ಬದುಕಿನ ತಲ್ಲಣಗಳಿಗೆ ಕಾವ್ಯ ಮಿಡಿಯಬೇಕು : ರಾಮೇಶ್ವರ
ಮೋಹನ್ ಲಿಂಬಿಕಾಯಿ ಅವರಿಗೆ ಭಾರತೀಯ ಜನತಾ ಪಕ್ಷದಲ್ಲಿ ಅಷ್ಟೊಂದು ಹಿರಿಯ ನಾಯಕರ ಬೆಂಬಲವಿಲ್ಲ. ಇದರಿಂದಾಗಿ ಇತ್ತೀಚೆಗೆ ಸ್ವತಃ ಅವರು ಭಾರತೀಯ ಜನತಾ ಪಕ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವರೇ ಅಷ್ಟೇ ಅಲ್ಲಾ ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಆದ್ದರಿಂದ ಮೋಹನ್ ಲಿಂಬಿಕಾಯಿ ಅವರ ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳಬಹುದು ಎಂಬುದು ಇನ ನಿಗೂಢವಾಗಿಯೂ ಉಳಿದುಕೊಂಡಿದ್ದೂ ಸುಳ್ಳಲ್ಲವೂ. ಜೆಡಿಎಸ್ ಕೂಡ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಹಾಗಾಗಿ ಶಿಕ್ಷಕರ ಕ್ಷೇತ್ರದ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಇನ್ನು ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯ ಕ್ಷೇತ್ರವಿದು. ಒಟ್ಟು 23 ಶಾಸಕರು ಇದ್ದಾರೆ. ಇದರಲ್ಲಿ 18 ಶಾಸಕರು ಬಿಜೆಪಿ, ಐವರು ಕಾಂಗ್ರೆಸ್‌ನವರು. ಮೂವರು ಎಂಎಲ್‌ಸಿ ಪೈಕಿ ಇಬ್ಬರು ಬಿಜೆಪಿ, ಒಬ್ಬರು ಕಾಂಗ್ರೆಸ್‌ನವರು. ಈ ಕ್ಷೇತ್ರದಲ್ಲಿ ಬರುವ ಮೂವರು ಸಂಸದರೂ ಬಿಜೆಪಿಗರೇ.
ಇದನ್ನೂ ಓದಿ: ಆಮೆ ಗತಿಯಲ್ಲಿ ಸಾಗುತ್ತಿರುವ ರಸ್ತೆ ಕಾಮಗಾರಿ: ನಿಲ್ಲದ ವಾಹನ ಸವಾರರ ಪರದಾಟ
ಹೀಗಾಗಿ ಬಿಜೆಪಿಯ ತೂಕ ಜಾಸ್ತಿಯಾಗಿದೆ. ಇದು ಬಿಜೆಪಿ ಅಭ್ಯರ್ಥಿಗೆ ಅನುಕೂಲವಾದ ವಾತಾವರಣ ಆಗಿದೆ. ಎರಡ್ಮೂರು ತಿಂಗಳ ಮುಂಚೆಯೇ ನಾವು ನಮ್ಮ ಅಭ್ಯರ್ಥಿಯನ್ನು ಘೋಷಿಸಿದ್ದೇವೆ. ಬಸವರಾಜ ಹೊರಟ್ಟಿ ಇದೀಗ ಬಿಜೆಪಿ ಸೇರುತ್ತಿದ್ದಾರೆ. ಈ ಬಗ್ಗೆ ಶಿಕ್ಷಕರಲ್ಲಿ ಬೇಸರವಿದೆ ಎಂಬುದು ಕಾಂಗ್ರೆಸ್ ನಾಯಕರ ಅಭಿಪ್ರಾಯವಾಗಿದೆ.
ಪಶ್ಚಿಮ ಶಿಕ್ಷಕರ ಚುನಾವಣೆ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸು ಮುಖ್ಯವಾಗುತ್ತದೆ. ಶಿಕ್ಷಕರ ನೋವು ನಲಿವು ಮತ್ತು ಶಿಕ್ಷಕರ ಸಮಸ್ಯೆ ಅರಿತವರು ಮಾತ್ರ ಗೆಲುವು ಸಾಧಿಸಲು ಸುಲಭದಾಗಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಯಾರೇ ಗೆದ್ದರೂ ಅದು ದಾಖಲೆಯೇ.
ಹೊರಟ್ಟಿಯದ್ದೇ ಅಧಿಪತ್ಯವೂ.
- 64 ವರ್ಷದ ಕ್ಷೇತ್ರದಲ್ಲಿ 42 ವರ್ಷ ಬಸವರಾಜ ಹೊರಟ್ಟಿಯದ್ದೇ ಅಧಿಪತ್ಯ.
- ಪಶ್ಚಿಮ ಶಿಕ್ಷಕರ ಕ್ಷೇತ್ರದ ವೈಶಿಷ್ಟ್ಯವಿದು.
- ಈ ಕ್ಷೇತ್ರದಲ್ಲಿ ಬಿಜೆಪಿ ಗೆದ್ದೇ ಇಲ್ಲ.
ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಇದೀಗ ನಡೆಯುತ್ತಿರುವ ಚುನಾವಣೆ ರಂಗೇರಿದೆ. ಈ ಕ್ಷೇತ್ರದಲ್ಲಿ ಏಳು ಬಾರಿ ಗೆಲ್ಲುವ ಮೂಲಕ ಬಸವರಾಜ ಹೊರಟ್ಟಿ ದಾಖಲೆ ಬರೆದಿದ್ದಾರೆ. ಈ ಚುನಾವಣೆಯಲ್ಲಿ ಯಾರೇ ಗೆದ್ದರೂ ಅದು ಮತ್ತೊಂದು ದಾಖಲೆಯೇ ಆಗುತ್ತದೆ 64 ವರ್ಷದ (1958) ಇತಿಹಾಸ ಹೊಂದಿರುವ ಈ ಕ್ಷೇತ್ರ ಕಾಲಕಾಲಕ್ಕೆ ಅಲ್ಪಸ್ವಲ್ಪ ಬದಲಾವಣೆ ಕಂಡಿದೆ. ಈ ವರೆಗೆ 6 ಜನಪ್ರತಿನಿಧಿಗಳನ್ನು ಕಂಡಿದೆ. ಅದರಲ್ಲಿ 42 ವರ್ಷ ಅಧಿಪತ್ಯ ಸಾಧಿಸಿದ್ದು ಮಾತ್ರ ಬಸವರಾಜ ಹೊರಟ್ಟಿಯವರು. ಇದು ರಾಷ್ಟ್ರಮಟ್ಟದ ದಾಖಲೆಯೂಯೂ ಆಗಿದೆ.
ಇದನ್ನೂ ಓದಿ: ಗಾಯಾಳು ಯೋಧನ ಚಿಕಿತ್ಸೆಗೆ ಸರ್ಕಾರ ವೆಚ್ಚ ಭರಿಸಿ: ವಡಗಾಂವ
1958 ರಲ್ಲಿ ಈ ಕ್ಷೇತ್ರದ ಹೆಸರು ಮೈಸೂರು ಉತ್ತರ ಶಿಕ್ಷಕರ ಕ್ಷೇತ್ರವೆಂದಿತ್ತು. 1962 ರಲ್ಲಿ ಮೈಸೂರು ಉತ್ತರ ಶಿಕ್ಷಕರ ಕ್ಷೇತ್ರದಿಂದ ಮೈಸೂರು ಪಶ್ಚಿಮ ಶಿಕ್ಷಕರ ಕ್ಷೇತ್ರ ಎಂದಾಯಿತು. ಬಳಿಕ 1980 ರ ಚುನಾವಣೆ ವೇಳೆ ಕರ್ನಾಟಕ ಉತ್ತರ ಕೇಂದ್ರ ಶಿಕ್ಷಕರ ಕ್ಷೇತ್ರವೆಂದಾಯಿತು. ಆಗ ಅವಿಭಜಿತ ಧಾರವಾಡ, ರಾಯಚೂರು, ಶಿವಮೊಗ್ಗ, ಬಳ್ಳಾರಿ ಜಿಲ್ಲೆಗಳು ಇದೇ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿದ್ದವು. ಬಳಿಕ ಇದನ್ನು ಧಾರವಾಡ, ಹಾವೇರಿ, ಉತ್ತರ ಕನ್ನಡ, ಗದಗ ಜಿಲ್ಲೆಗೆ ಸೀಮಿತಗೊಳಿಸಿ ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರವೆಂದು ಮಾಡಿರುವುದು ವಿಶೇಷವಾಯಿತು.
1958 ರಿಂದ 1980 ರ ವರೆಗೆ ಆರು ಬಾರಿ ಈ ಕ್ಷೇತ್ರಕ್ಕೆ ಚುನಾವಣೆ ನಡೆದಿದೆ. ಮಮದಾಪುರ ಬಸವಂತಪ್ಪ ಬಾಳಪ್ಪ, ದೇಶಪಾಂಡೆ ಬಾಲಕೃಷ್ಣ ಗಂಗಾಧರ, ಕೇಶವರಾವ್ ತಾತ್ಯಾರಾವ್ ನಿಟ್ಟೂರಕರ್, ಜಿ.ಕೆ. ಕುಲಕರ್ಣಿ, ಎಸ್.ಐ.ಶೆಟ್ಟರ್ ಆಯ್ಕೆಯಾದ ಸದಸ್ಯರಿವರು.
ಬಳಿಕ 1980 ರಲ್ಲಿ ಬಸವರಾಜ ಹೊರಟ್ಟಿ ಪ್ರಥಮ ಬಾರಿಗೆ ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಆಗ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಎಸ್.ಐ. ಶೆಟ್ಟರ್, ಕೆ.ಮಲ್ಲಪ್ಪ, ಕೋಣಂದೂರು ಲಿಂಗಪ್ಪ, ಆರ್.ಟಿ. ಮಜ್ಜಗಿ, ಕೋ.ಚೆನ್ನಬಸಪ್ಪ ಅವರಂಥ ಘಟಾನುಘಟಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಇವರೆಲ್ಲರ ಎದುರಿಗೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಬಸವರಾಜ ಹೊರಟ್ಟಿಯವರು ಅತ್ಯಂತ ಕಿರಿಯ ವಯಸ್ಸಿನವರಾಗಿದ್ದರು. ಆದರೆ ಅಚ್ಚರಿಯೆಂಬಂತೆ ಗೆದ್ದು ಮೊದಲ ಪ್ರಯತ್ನದಲ್ಲೇ ಪರಿಷತ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದರು.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಶಿಕ್ಷಕರ ಕೊಡುಗೆ ಅಪಾರ: ದೇಶಮುಖ
ಆಗ ಗೆದ್ದ ಬಸವರಾಜ ಹೊರಟ್ಟಿ 1986, 1992, 1998, 2004, 2010, 2016 ರಲ್ಲಿ ನಡೆದ ಚುನಾವಣೆಗಳಲ್ಲಿ ಗೆಲುವು ಸಾಧಿಸಿ ರಾಷ್ಟ್ರದಾಖಲೆ ನಿರ್ಮಿಸಿದವರು. ಹೀಗೆಯೇ 64 ವರ್ಷದ ಇತಿಹಾಸ ಹೊಂದಿರುವ ಕ್ಷೇತ್ರದಲ್ಲಿ ಬರೋಬ್ಬರಿ 42 ವರ್ಷಗಳ ಗೆದ್ದು ಬೀಗಿದವರು ಬಸವರಾಜ ಹೊರಟ್ಟಿಯವರು. ಮೊದಲ ಬಾರಿಗೆ ಮಾತ್ರ ಪಕ್ಷೇತರರಾಗಿ ಸ್ಪರ್ಧಿಸಿದ್ದ ಬಸವರಾಜ ಹೊರಟ್ಟಿಯವರು ಆನಂತರ ಜನತಾಪರಿವಾರದಿಂದಲೇ ಸ್ಪರ್ಧಿಸಿದವರು. ಇದೇ ಮೊದಲ ಬಾರಿಗೆ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ.
ಈ ವರೆಗೂ ಬಿಜೆಪಿ ಈ ಕ್ಷೇತ್ರದಲ್ಲಿ ಒಂದೇ ಒಂದು ಬಾರಿಯೂ ಗೆದ್ದ ಉದಾಹರಣೆ ಇಲ್ಲವೇ ಇಲ್ಲ. ಪ್ರತಿ ಚುನಾವಣೆಯಲ್ಲೂ ಬಸವರಾಜ ಹೊರಟ್ಟಿ ಅವರಿಗೆ ತೀವ್ರ ಪೈಪೋಟಿ ನೀಡಿದೆ. ಆದರೆ ಗೆಲುವು ಮಾತ್ರ ಕಂಡಿಲ್ಲ. ಹೀಗಾಗಿಯೇ ಈ ಸಲ ಬಸವರಾಜ ಹೊರಟ್ಟಿ ಅವರೇ ಗೆದ್ದರೂ ಅದು ಅವರಿಗೆ 8 ನೆಯ ಬಾರಿಗೆ ಗೆದ್ದು ತಮ್ಮ ದಾಖಲೆ ಮುರಿದಂತಾಗುತ್ತದೆ.
ಜೊತೆಗೆ ಬಿಜೆಪಿ ಮೊದಲ ಬಾರಿಗೆ ಗೆಲ್ಲುವ ಮೂಲಕ ಬಿಜೆಪಿಯದ್ದೂ ದಾಖಲೆಯಾಗುತ್ತದೆ. ಒಂದು ವೇಳೆ ಬಸವರಾಜ ಹೊರಟ್ಟಿ ಸೋತು ಬೇರೆ ಯಾರೇ ಗೆದ್ದರೂ ರಾಷ್ಟ್ರ ದಾಖಲೆ ಮಾಡಿದವರನ್ನು ಸೋಲಿಸಿದ ದಾಖಲೆ ಅವರದ್ದಾಗುತ್ತದೆ.
ಇದನ್ನೂ ಓದಿ: ಉಪಯೋಗಕ್ಕೆ ಬಾರದ ಸಾರ್ವಜನಿಕ ಶೌಚಾಲಯ
ಹೀಗಾಗಿಯೇ ಕ್ಷೇತ್ರದಲ್ಲಿ ಯಾರೇ ಗೆದ್ದರೂ ಅದು ದಾಖಲೆಯೇ ಸರಿ.ಆದರೂ ಈಗ ಬಿಜೆಪಿಯ ಅಭ್ಯರ್ಥಿಯಾಗಿರುವ ಬಸವರಾಜ ಹೊರಟ್ಟಿಯವರೇ ಮತ್ತೆ ಮತ್ತೇ ಗೆಲ್ಲುವ ಎಲ್ಲಾ ಲಕ್ಷಣಗಳೇನು ಕಾಣುತ್ತಿರುವುದೇನು ಬಂತು, ಬಸವರಾಜ ಹೊರಟ್ಟಿಯವರೇ ಮತ್ತೆ ಮತ್ತೇ ಗೆಲ್ಲುವ ಅಭ್ಯರ್ಥಿಯಾಗಿದ್ದಾರೆ.