ಸುರಪುರ: ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಆರಂಭಗೊಂಡಿದ್ದು ಉತ್ತಮವಾಗಿ ಮಳೆ ಬೀಳುತ್ತಿರುವುದರಿಂದ ಜಿಲ್ಲೆಯಲ್ಲಿನ ನಮ್ಮ ರೈತಾಪಿ ಬಂಧುಗಳು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ.ಅದರಂತೆ ಎಲ್ಲಾ ರೈತರು ಬಿತ್ತಣಿಕೆಯನ್ನು ಆರಂಭಿಸುವ ಹಂತದಲ್ಲಿರುವಿರಿ.ಆದ್ದರಿಂದ ಎಲ್ಲರು ನಕಲಿ ಬೀಜ ಗೊಬ್ಬರಗಳ ಬಗ್ಗೆ ತುಂಬಾ ಎಚ್ಚರಿಕೆ ವಹಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ತಿಳಿಸಿದ್ದಾರೆ.
ಇದನ್ನೂ ಓದಿ: ಖಾಸಗಿ ಶಾಲೆಗಳ ಮಿತಿ ಮೀರಿದ ಶುಲ್ಕ ವಸೂಲಿಗೆ ಕಡಿವಾಣ ಹಾಕಿ: ವೆಂಕಟೀಶ ನಾಯಕ
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ಈಗಾಗಲೇ ಅನೇಕ ಕಡೆಗಳಲ್ಲಿ ನಕಲಿ ಬೀಜ ಗೊಬ್ಬರಗಳ ಮಾರಾಟ ಕಂಡುಬಂದಿದ್ದು ಅಧಿಕಾರಿಗಳು ಪತ್ತೆ ಮಾಡಿರುವ ಉದಾಹರಣೆಗಳು ಇವೆ.ಆದ್ದರಿಂದ ನಮ್ಮ ರೈತರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರದೆ ಕಡಿಮೆ ದರಕ್ಕೆ ಸಿಗುತ್ತವೆ ಎಂದಾಗಲಿ ಅಥವಾ ಬೇಕಾದಷ್ಟು ಸಿಗುತ್ತವೆ ಎಂದಾಗಲಿ,ಯಾವುದೇ ದಾವಂತಕ್ಕೆ ಒಳಗಾಗದೇ ಸರಿಯಾದ ಬೀಜಗಳನ್ನು ಮತ್ತು ಗೊಬ್ಬರಗಳನ್ನು ನೋಡಿ ತೆಗೆದುಕೊಳ್ಳಬೇಕು.
ಇದನ್ನೂ ಓದಿ: ಮಕ್ಕಳ ಪಠ್ಯಪುಸ್ತಕದಲ್ಲಿ ಮನುವಾದ ಬೇಡ: ಪ್ರತಿಭಟನೆ
ಅಲ್ಲದೆ ಜಿಲ್ಲೆಯ ಕೃಷಿ ಅಧಿಕಾರಿಗಳು ಕೂಡ ಗ್ರಾಮೀಣ ಭಾಗದಲ್ಲಿ ಸಭೆಗಳನ್ನು ಮಾಡಿ ರೈತರಿಗೆ ಯಾವ ರೀತಿಯ ಬೀಜಗಳನ್ನು ಖರಿದಿಸಬೇಕು ಮತ್ತು ಎಂತಹ ಗೊಬ್ಬರ ಖರೀದಿಸಬೇಕು ಎನ್ನುವುದರ ಕುರಿತು ಮಾಹಿತಿ ನೀಡಬೇಕು ಹಾಗೂ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ನಕಲಿ ಬೀಜ ಗೊಬ್ಬರ ಮಾರಾಟಕ್ಕೆ ಅವಕಾಶ ನೀಡದಂತೆ ನಿಗಾವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಭಾರತಿಯ ಯುವ ಸೈನ್ಯಕ್ಕೆ ಸೋನುಬಾಯಿ, ಗಣೇಶ ಮೇಳಕುಂದ ಆಯ್ಕೆ