ಡಾ.ಮೌಲಾನಾ ಅಬ್ದುಲ್ ಕಲಾಂ ಆಜಾದ್ ಜನ್ಮದಿನಾಚರಣೆ | ರಾಷ್ಟ್ರೀಯ ಯುವ ಪ್ರಶಸ್ತಿ ಪ್ರದಾನ

0
16

ಹುನಗುಂದ: ದೇಶದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರ ಸ್ಪೂರ್ತಿದಾಯಕವಾಗಿದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ನಗರದಲ್ಲಿ”ಭಾರತರತ್ನ”ಮೌಲಾನಾ ಅಬುಲ್‌ ಕಲಾಂ ಆಜಾದ್‌ ಅಸೋಸಿಯೇಷನ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಬುಲ್‌ ಕಲಾಂ ಆಜಾದ್‌ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

Contact Your\'s Advertisement; 9902492681

ಕಾರ್ಯಕ್ರಮಕ್ಕೆ ದಿವ್ಯಸಾನಿಧ್ಯ
ಹಜರತ್‌ ಸೈಯ್ಯದ ಪೈಸಲ ಪಾಷಾ ಖಾದ್ರಿ ಸಜ್ಜಾದ ನಶೀನ (ಹನಮಸಾಗರ)ಇಲಕಲ್ಲ,
ಶ್ರೀ ವೇ.ಮೂ. ಮಹಾಂತಯ್ಯ ಪಂಚಾಕ್ಷರಿಮಠ ಪೀಠಾಧಿಪಥಿಗಳು, ಗಚ್ಚಿನಮಠ ಹುನಗುಂದ,
ಭಾವಚಿತ್ರ ಮಾಲಾರ್ಪಣೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್‌ ರಜಾಕ ತಟಗಾರ ಮಾಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಆಜಾದ್‌ ಸಂಸ್ಥೆಯ ಜಬ್ಬಾರ ಕಲಬುರ್ಗಿ ಮಾತನಾಡಿದ ಅವರು
ಮಾಜಿ ಶಾಸಕರು ಡಾ. ವಿಜಯಾನಂದ ಎಸ್‌. ಕಾರಪ್ಪನವರು ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಗೈದು “ಭಾರತರತ್ನ” ಮೌಲಾನಾ ಅಬುಲ್ ಕಲಾಂ ಆಜಾದ್, ರಾಷ್ಟ್ರೀಯ ಯುವ ಪ್ರಶಸ್ತಿಗೆ ಭಾಜನರಾಗಿದ್ದಾರೆ ಸಾಧಕ ಡಾ.ವಿಜಯಾನಂದ ಅವರು
ಜಾತಾತೀತ ಮನಸ್ಸುಳ್ಳ ತಾವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿದ್ದು ಶಾಸಕರಾಗಿ ಬಡವರ, ದೀನದಲಿತರ, ಅಲ್ಪಸಂಖ್ಯಾತರ, ಏಳಿಗೆಗಾಗಿ ಶ್ರಮಿಸಿ ನೂರಾರು ಜನರಿಗೆ ಸೂರು ಕಲ್ಪಿಸಿ, ರಾಷ್ಟ್ರ ಮಟ್ಟದಲ್ಲಿ ನಡೆದ ಎನ್‌.ಆರ್.ಸಿ ಹೋರಾಟದ ಮುಂಚೂಣಿ ನಾಯಕರಾಗಿ ಮುಸ್ಲಿಂದೊಂಬಿಗೆ 130 ಕಿ.ಮಿ ಕಾಲ್ನಡಿಗೆಯ ಮೂಲಕ ವಿಜಯಪುರದ ವರೆಗೆ ನಡೆದು ಬೆಂಬಲಿಸಿದ ನಿಸ್ವಾರ್ಥ ಹೃದಯವಂತರು, ತಾಲೂಕಿಗೆ ನೀರಾವರಿ, ರಸ್ತೆ, ಶಾಲೆ, ಕಾಲೇಜುಗಳನ್ನು ತಂದು ಸರ್ವತೋಮುಖ ಅಭಿವೃದ್ಧಿ ಮಾಡಿ ಬಡಮಕ್ಕಳ ಶಿಕ್ಷಣಕ್ಕಾಗಿ ಕೈಗೊಂಡ ಅಕ್ಷರ ಯಜ್ಞವನ್ನು ಬಣ್ಣಿಸಲು ನಮ್ಮಲ್ಲಿ ಶಬ್ದಗಳಿಲ್ಲ ಎಂದರು.

ಪಂಚಮಸಾಲಿ ಸಮುದಾಯದಲ್ಲಿ ಯಾರೊಬ್ಬರು ಸಾಧಿಸಲಾಗದ ಸಾಧನೆ ಮಾಡಿ 650 ಕಿ.ಮಿ ದೂರದ ಅಂತರವನ್ನು ನಡೆದು ಬೆಂಗಳೂರಿನಲ್ಲಿ ಮೀಸಲಾತಿಯ ಕೂಗು ಮುಗಿಲೆತ್ತರಕ್ಕೆ ಕೊಂಡ್ಯೂದ ಸಾಧಕರು ತಾವು ತಮ್ಮ ಈ ಸಾಧನೆಯನ್ನು ಸಮಾಜ, ರಾಜ್ಯ, ಮತ್ತು ದೇಶ ಎಂದು ಮರೆಯುವುದ್ದಿಲ್ಲ ಎಂದು ಹೇಳಿದರು.

ಈ ಕಾರ್ಯದಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಬಾಗಲಕೋಟ ಅಂಜುಮನ್ ಸಂಸ್ಥೆ ಮಾಜಿ ಅಧ್ಯಕ್ಷ ಜಾಫರ ಬೇಪಾರಿ ಅವರಿಗೆ ಭಾರತರತ್ನ ಮೌಲಾನಾ ಅಬುಲ್ ಕಲಾಂ ಆಜಾದ್ ರಾಷ್ಟ್ರೀಯ ಯುವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕೆಲವು ಸಾಧಕರಿಗೆ ಸೌಹಾರ್ಧ ಪ್ರಶಸ್ತಿ ನೀಡಿ ವಿಶೇಷ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬಾಗಲಕೋಟ,ಜಿಲ್ಲೆ ವಕ್ಫ್ ಬೋರ್ಡ್ ಅಧ್ಯಕ್ಷ ಮಹೆಬೂಬ್ ಸರ್ಕಾವಸ್, ಬಾಗಲಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜಾಕ್ ಬೇನೂರು, ಬಾಗಲಕೋಟೆ ಎಂಐಎಂ ಅಧ್ಯಕ್ಷ ಸಲೀಂ ಪಟಾನ, ಪ್ರಧಾನ ಕಾರ್ಯದರ್ಶಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗ ಶಬ್ಬೀರ್ ನದಾಫ, ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ವಕ್ತರ ಸಿಕಂದರ್ ಅಥಣಿ, ಬಾಗಲಕೋಟೆ ಅಂಜುಮನ ಸಂಸ್ಥೆಯ ಮಾಜಿ ಉಪಾಧ್ಯಕ್ಷ ನಬಿಸಾಬ ಟಂಗಸಾಲಿ, ದಾವಲಸಾಬ ನಾಯ್ಕೋಡಿ, ಗಫಾರ ಕೊರ್ತಿ, ಮಹೆಬೂಬ ಸೌನೂರ್, ವಾಸಿಮ್ ಯರಗೋಡಿ, ಅಶ್ಪಾಕ್, ಮುಖಂಡರು ಯುವಕರು ಇನ್ನು ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here