ಏಪ್ರಿಲ್ 10ರ ವರೆಗೆ ನಿರಂತರವಾಗಿ ಕಾಲುವೆಗಳಿಗೆ ನೀರು ಹರಿಸಿ-ಆರ್.ವಿ ನಾಯಕ ಮನವಿ

0
69

ಸುರಪುರ: ಕೃಷ್ಣಾ ಎಡದಂಡೆ ಕಾಲುವೆಗಳಿಗೆ ಯಾವುದೇ ಬಂದ್ ಇಲ್ಲದಂತೆ ಏಪ್ರಿಲ್ 10ರ ವರೆಗೆ ನಿರಂತರವಾಗಿ ನೀರು ಹರಿಸುವಂತೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಒತ್ತಾಯಿಸಿದ್ದಾರೆ.

ಈ ಕುರಿತು ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ಒತ್ತಾಯಿಸಿರುವ ಅವರು, ಆಲಮಟ್ಟಿ ಹಾಗೂ ನಾರಾಯಣಪೂರ ಜಲಶಾಯಗಳಲ್ಲಿ ನೀರಿನ ಪ್ರಮಾಣ ಇನ್ನೂ ಹೆಚ್ಚಾಗಿ ಲಭ್ಯವಿದ್ದು, ವಾರಾಬಂದಿ ಪದ್ದತಿಯಂತೆ ಮಾ.31 ರ ವರೆಗೆ ಅವಧಿ ಮುಗಿಯುತ್ತಾಬಂದಿದ್ದು.

Contact Your\'s Advertisement; 9902492681

ಹಿಂಗಾರು ಹಂಗಾಮಿನ ನೀರು ಅವಲಂಬಿತ ಬೆಳಗಳು ಕಟಾವಿಗೆ ಬಂದಿರುವುದಿಲ್ಲ. ದಿನಪತ್ರಿಕೆಯಲ್ಲಿ ಪ್ರಕಟಣೆಗೊಂಡ ಮಾಹಿತಿ ಪ್ರಕಾರ ಮಾರ್ಚ 31 ರಿಂದ ಕಾಲುವೆಗೆ ನೀರು ಬಂದಮಾಡಿ ಏ.06 ರಿಂದ 10 ರ ವರೆಗೆ ಪುನಃ ಕಾಲುವೆಗೆ ನೀರುಹರಿಸಲಾಗುತ್ತದೆ ಎಂದು ತಿಳಿದುಬಂದಿರುತ್ತದೆ. ಇದರಿಂದ ಕಾಲುವೆಯ ಕೊನೆಯಭಾಗದ ರೈತರ ಜಮೀನುಗಳಿಗೆ ನೀರು ತಲುಪದೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಬೆಳೆಗಳು ಸಂಪೂರ್ಣವಾಗಿ ಹಾಳಾಗಿಹೋಗಿ ರೈತರುಗಳು ತುಂಬಾ ಸಂಕಷ್ಟಕ್ಕೋಳಗಾಗುತ್ತಾರೆ.

ಕಾರಣ ರೈತರ ಹಿತದೃಷ್ಠಿಯಿಂದ ಮಾ.31 ರ ಅವಧಿ ಮುಗಿದನಂತರ ಏಪ್ರೀಲ್ 01 ರಿಂದ 05 ರ ವರೆಗೆ ಕಾಲುವೆÀಗೆ ನೀರುಹರಿಸುವುದನ್ನು ನಿಲ್ಲಿಸುವ ಬದಲಾಗಿ ಮಾರ್ಚ.31 ರಿಂದ ಏ10ರ ವರೆಗೆ ನಿರಂತರವಾಗಿ ಕಾಲುವೆಗಳಿಗೆ ನೀರುಹರಿಸಿ ರೈತರ ಹಿತಕಾಯುವ ನಿರ್ಣಯ ಕೈಗೊಳ್ಳುವಂತೆ ತಮ್ಮಲ್ಲಿ ಈ ಮೂಲಕ ಕೋರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here