ಮೀಸಲಾತಿ ರದ್ದು; ಸಾಮೂಹಿಕ ಸಂಘಟನೆಗಳ ಒಕ್ಕೂಟ ಪ್ರತಿಭಟನೆ | ಮುಸ್ಲೀಂ ಸಮುದಾಯಕ್ಕೆ ಅನ್ಯಾಯ

0
21

ಸುರಪುರ:ಸರಕಾರ ಮುಸ್ಲೀಂ ಸಮುದಾಯಕ್ಕೆ ನೀಡಲಾಗಿದ್ದ 2ಬಿ ಮೀಸಲಾತಿಯ ಪ್ರತಿಶತ 4ನ್ನು ರದ್ದುಗೊಳಿಸಿರುವುದನ್ನು ವಿರೋಧಿಸಿ ಸಾಮೂಹಿಕ ಸಂಘಟನೆಗಳ ಒಕ್ಕೂಟ ದಿಂದ ಪ್ರತಿಭಟನೆಯನ್ನು ನಡೆಸಲಾಯಿತು.ನಗರದ ಟಿಪ್ಪು ಸುಲ್ತಾನ ವೃತ್ತ ದಿಂದ ತಹಸೀಲ್ದಾರ್ ಕಚೇರಿ ವರೆಗೆ ಬೈಕ್ ರ್ಯಾಲಿ ನಡೆಸಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದ ಅನೇಕ ಮುಖಂಡರು,ರಾಜ್ಯದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಮುಸ್ಲೀಂ ಸಮುದಾಯಕ್ಕೆ 1995ರಲ್ಲಿ ನೀಡಿದ್ದ 4 ಪರ್ಸೆಂಟ್ ಮೀಸಲಾತಿಯನ್ನು ಸರಕಾರ ರದ್ದುಗೊಳಿಸುವ ಮೂಲಕ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಸರಕಾರ ಧರ್ಮದ ಆಧಾರದ ಮೇಲೆ ಮೀಸಲಾತಿ ರದ್ದುಗೊಳಿಸುವುದಾದರೆ ಇನ್ನುಳಿದ ಕ್ರೈಸ್ತ,ಜೈನ,ಶಿಖ್ಖ ಧರ್ಮದವರಿಗೆ ಇರುವ ಮೀಸಲಾತಿಯನ್ನು ತೆಗೆಯಬೇಕಿತ್ತು.ಆದರೆ ಇದು ಕೇವಲ ಮುಸ್ಲೀಂ ಸಮುದಾಯಕ್ಕೆಂದೆ ಮಾಡಿರುವ ದ್ರೋಹವಾಗಿದೆ.ಕೂಡಲೇ ಸರಕಾರ ಸಮುದಾಯಕ್ಕೆ ಮಾಡಿರುವ ಅನ್ಯಾಯವನ್ನು ಸರಿಪಡಿಸಲು 2ಬಿ ಮೀಸಲಾತಿ ರದ್ದುಗೊಳಿಸಿರುವುದನ್ನು ಹಿಂದಡೆದು ಸಮುದಾಯಕ್ಕೆ ನ್ಯಾಯ ಒದಗಿಸಬೇಕು,ಇಲ್ಲವಾದಲ್ಲಿ ರಾಜ್ಯಾದ್ಯಂತ ಇನ್ನಷ್ಟು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಂತರ ರಾಜ್ಯಪಾಲರಿಗೆ ಬರೆದ ಮನವಿಯನ್ನು ಗ್ರೇಡ-2 ತಹಸೀಲ್ದಾರ್ ಮಲ್ಲಯ್ಯ ದಂಡು ಅವರ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಮಲ್ಲಯ್ಯ ಕಮತಗಿ,ಅಬ್ದುಲ್ ಗಫೂರ ನಗನೂರಿ,ಉಸ್ತಾದ ವಜಾಹತ್ ಹುಸೇನ್,ಖಾಜಾ ಖಲೀಲಹ್ಮದ್,ಶೇಖ್ ಲಿಯಾಖತ್ ಹುಸೇನ್,ನಾಸೀರ ಹುಸೇನ್ ಕುಂಡಾಲೆ,ಡಾ:ಅಮ್ಜದ್ ಗಡಂಗ,ಖಲೀಲ ಅಹ್ಮದ್ ತಾಳಿಕೋಟಿ,ಅಹ್ಮದ್ ಪಠಾಣ್,ಶಿವಲಿಂಗ ಹಸನಾಪುರ,ಹಣಮಂತ ಕಟ್ಟಿಮನಿ,ಶೇಖ ಮಹಿಬೂಬ ಒಂಟಿ,ಬಕ್ತಿಯಾರ್ ಅಹ್ಮದ್,ಶೌಖತ್ ಅಲಿ,ಮಹ್ಮದ್ ಮೌಲಾ ಸೌದಾಗರ್,ಇಕ್ಬಾಲ್ ಮಿಸ್ತ್ರಿ,ಮುನ್ವರ್ ಸಾಬ,ನಿಜಾವತ್ ಹುಸೇನ್ ಉಸ್ತಾದ,ಎಮ್.ಪಟೇಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here