ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘದಿಂದ ತಾರತಮ್ಯ ನೀತಿ

0
27

ಕಲಬುರಗಿ: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘದ ಕಲ್ಯಾಣ ಕರ್ನಾಟಕ ಸಾಹಿತ್ಯ ಸಂಸ್ಕೃತಿ ಮಾಲೆಯ ಅಡಿಯಲ್ಲಿ 30 ಪುಸ್ತಕಗಳು ಪ್ರಕಟವಾಗಿದ್ದು, ಪುಸ್ತಕಗಳ ಸಂಪಾದನೆಯಲ್ಲಿ ತಾರತಮ್ಯ ಮಾಡಿರುತ್ತಾರೆ ಎಂದು ದಲಿತ ಸಾಹಿತ್ಯ ಪರಿಷತ್‍ಜಿಲ್ಲಾಧ್ಯಕ್ಷಡಾ. ಸುನಿಲ ಜಾಬಾದಿ ಆರೋಪಿಸಿದರು.

ಓಬಿಸಿ, ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತ ಲೇಖಕರಿಗೆ, ಕಲ್ಯಾಣಕರ್ನಾಟಕ ಭಾಗದ  ಸಾಹಿತ್ಯ, ಸಂಸ್ಕೃತಿ, ಕಲೆ ಕಡೆಗಣಿಸಿದ್ದಾರೆ  ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ಈ ಭಾಗದ ಸೂಫಿ, ಸಂತರು, ಹರಿದಾಸರು, ತತ್ವಪದಕಾರರು, ಬೌದ್ಧರು, ಜೈನರನ್ನುಕೈಬಿಟ್ಟು ಕೇವಲ ಎರಡುಜಿಲ್ಲೆಯ ಲೇಖಕರಿಗೆ ಮಾತ್ರ  ಆದ್ಯತೆಕೊಟ್ಟು ಉಳಿದ ಜಿಲ್ಲೆಗಳನ್ನು ಕಡೆಗಣಿಸಿದ್ದಾರೆ ಎಂದು ತಿಳಿಸಿದರು.

ಈ ಸಂಪುಟಗಳಲ್ಲಿ ಕೇವಲ ಒಂದು ಸಮುದಾಯವನ್ನು ಕೇಂದ್ರೀಕರಿಸಿ ಸೀಮಿತಗೊಳಿಸಲಾಗಿದ್ದು, ಇದು ಸರ್ಕಾರದ ಯೋಜನೆಯಾಗಿರುವುದರಿಂದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದವರಿಗೆಇದರಅಡಿಯಲ್ಲಿ ಪ್ರಕಟಗೊಂಡ ಪುಸ್ತಕಗಳನ್ನು ಖರೀದಿಗೆ ಕೇಳಿದರೆ ಮಾಹಿತಿ ನೀಡುತ್ತಿಲ್ಲಎಂದುದೂರಿದರು.

ಸರ್ಕಾರದ ಯೋಜನೆಗಳಲ್ಲಿ ಸಮಾನ ಪಾಲು, ಸಮಾನ ಹಕ್ಕು ನೀಡಬೇಕು ಮತ್ತುಎಲ್ಲರಿಗೂ ಸಮನಾದ ನ್ಯಾಯ ದೊರಕಿಸಿಕೊಡಬೇಕು.ಈ ರೀತಿಯದ್ವಂದ್ವ ನೀತಿಯನ್ನು ಅನುಸರಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದುಎಂದು ಎಚ್ವರಿಸಿದರು.ಪೆÇ್ರ.ಶಿವರಾಜ ಪಾಟೀಲ, ಡಾ.ಗವಿಸಿದ್ಧ ಪಾಟೀಲ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here