ಸುರಪುರ: ಚುನಾವಣಾಧಿಕಾರಿಗಳ ಸುದ್ದಿಗೋಷ್ಠಿ

0
11

ಸುರಪುರ: ನಗರದ ತಹಸೀಲ್ದಾರ್ ಕಚೇರಿಯಲ್ಲಿ ತೆರೆಯಲಾಗಿರುವ ವಿಧಾನಸಭಾ ಚುನಾವಣೆಯ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಸುರಪುರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಅಮರೇಶ ನಾಯ್ಕ ಅವರು ಸುದ್ದಿಗೋಷ್ಠಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿ, ಮುಂಬರುವ ಮೇ10 ನಡೆಯಲಿರುವ ಸುರಪುರ ವಿಧಾನಸಭಾ ಕ್ಷೇತ್ರದ ಚುನಾವಣೆಗಾಗಿ ಎಲ್ಲಾ ರೀತಿಯಿಂದ ಸಿದ್ಧತೆ ಮಾಡಿಕೊಂಡಿದ್ದು ಚುನಾವಣಾ ನೀತಿ ಸಂಹಿಲೆ ಪಾಲನೆ ಹಾಗೂ ಯಾವುದೇ ಅಕ್ರಮಗಳು ನಡೆಯದಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಾಲೂಕು ಚುನಾವಣಾಧಿಕಾರಿ ಹಾಗೂ ಜಿಪಂ ಉಪ ಕಾರ್ಯದರ್ಶಿ ಅಮರೇಶ ನಾಯ್ಕೆ ತಿಳಿಸಿದರು.

Contact Your\'s Advertisement; 9902492681

ಸುರಪುರ ಮತ್ತು ಹುಣಸಗಿ ತಾಲೂಕುಗಳು ಸೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 317 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು 1,37,159 ಪುರುಷರು ಹಾಗೂ 1,34,718 ಮಹಿಳೆಯರು ಹಾಗೂ 19 ಇತರೆ ಸೇರಿದಂತೆ ಒಟ್ಟು 2,71,896 ಮತದಾರರಿದ್ದಾರೆ ಎಂದು ತಿಳಿಸಿದರು, ಕ್ಷೇತ್ರದಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು ಸುರಪುರ ತಾಲೂಕಿನ ಬಂಡೋಳಿ(ತಿಂಥಣಿ ಬ್ರಿಜ್), ಹುಣಸಗಿ ತಾಲೂಕಿನ ಮಾಳನೂರು, ನಾರಾಯಣಪೂರ ಹಾಗೂ ಹಗರಟಗಿ ಸ್ಥಳಗಲ್ಲಿ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದ್ದು ಪಾಳೆಯ ಪ್ರಕಾರ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು, ಚುನಾವಣಾ ಕರ್ತವ್ಯಕ್ಕಾಗಿ 19 ಸೆಕ್ಟರ್ ಅಧಿಕಾರಿಗಳು, 12-ಎಫ್‍ಎಸ್‍ಟಿ ತಂಡಗಳು, 5-ವಿಎಸ್‍ಟಿ ತಂಡಗಳು, 01-ವಿವಿಟಿ ತಂಡ ಹಾಗೂ 12-ಎಸ್‍ಎಸ್‍ಟಿ ತಂಡಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಳೆದ 2018ರ ವಿಧಾನಸಭಾ ಚುನಾವಣೆ ಚುನಾವಣೆಯಲ್ಲಿ ಇದ್ದ ಮತದಾರರಿಗಿಂತ ಈ ಬಾರಿ ಮತದಾರರ ಸಂಖ್ಯೆ ಅಷ್ಟೊಂದು ಹೆಚ್ಚಳವಾಗಿಲ್ಲ ಅಷ್ಟೇ ಸಂಖ್ಯೆಯಲ್ಲಿದ್ದಾರೆ ಮತದಾರರ ವಲಸೆ, ಆಧಾರ ಕಾರ್ಡು ಜೋಡಣೆ ಕೈಗೊಂಡಿರುವ ಕಾರಣ ಈ ವರ್ಷವೂ ಹೊಸದಾಗಿ ಮತದಾರರ ನೊಂದಣಿ ಹೆಚ್ಚಾಗಿದ್ದರೂ ಒಟ್ಟಾರೆ ಮತದಾರರ ಸಂಖ್ಯೆಯಲ್ಲಿ ದೊಡ್ಡ ವ್ಯತ್ಯಾಸ ಆಗಿಲ್ಲ ಎಂದರು, ಕಳೆದ ಚುನಾವಣೆಯಲ್ಲಿ ಸುರಪುರ ಕ್ಷೇತ್ರದಲ್ಲಿ ಶೇ71 ರಷ್ಟು ಮತದಾನ ನಡೆದಿತ್ತು ಈ ಸಲದ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಳಕ್ಕೆ ಮತದಾರರಲ್ಲಿ ಜಾಗೃತಿ ಮೂಡಿಸಲು ಸ್ವೀಪ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಮನೆಯಿಂದಲೇ ಪೋಸ್ಟಲ್ ಬ್ಯಾಲೆಟ್ ಮತದಾನ ಚಲಾವಣೆ, ಚುನಾವಣಾ ಆಯೋಗದ ನಿರ್ದೇಶನದಂತೆ ಈ ಬಾರಿಯ ಚುನಾವಣೆಯಲ್ಲಿ ಮತಗಟ್ಟೆಗಳಲ್ಲಿ ಮಿಂಚಲಿವೆ ಐತಿಹಾಸಿಕ ಸ್ಮಾರಕಗಳ ಚಿತ್ತಾರಗಳು 80ವರ್ಷ ಮೇಲ್ಪಟ್ಟವರು, ವಿಕಲಚೇತನರು, ಕೋವಿಡ್‍ನಿಂದಾಗಿ ಮನೆಯಲ್ಲಿ ಇರುವವರಿಗೆ, ನಡೆದಾಡಲು ಆಗದ ಆಶಕ್ತರಿಗೆ, ಹಾಗೂ ಆರೋಗ್ಯ, ಕುಡಿಯುವ ನೀರು ಪೂರೈಕೆ ಸಿಬ್ಬಂದಿ, ಕೆಎಸ್‍ಆರ್‍ಟಿಸಿ ಸೇರಿದಂತೆ ಅಗತ್ಯ ಸೇವೆಯಲ್ಲಿರುವ ಸಿಬ್ಬಂದಿ ವರ್ಗದವರಿಗೆ ಮತ ಚಲಾಯಿಸಲು ಪೋಸ್ಟಲ್ ಬ್ಯಾಲೆಟ್(ಅಂಚೆಮತ ಪತ್ರ) ವ್ಯವಸ್ಥೆ ಕಲ್ಪಿಸಲಾಗಿದ್ದ ಕ್ಷೇತ್ರದಲ್ಲಿ 1454 ಪುರುಷರು ಹಾಗೂ 2756 ಮಹಿಳೆಯರು ಸೇರಿದಂತೆ ಒಟ್ಟು 4,210 80ವರ್ಷ ವಯಸ್ಸು ಮೇಲ್ಪಟ್ಟ ವಯಸ್ಸಿನವರು ಇದ್ದಾರೆ ಹಾಗೂ 1899ಪುರುಷ ಹಾಗೂ 1488 ಮಹಿಳೆಯರು ಸೇರಿದಂತೆ ಒಟ್ಟು 3387 ವಿಕಲಚೇತನ ಮತದಾರರು ಅಲ್ಲದೆ 64 ಮಿಲಿಟರಿ ಸೇವೆಯಲ್ಲಿ ಇದ್ದಾರೆ ಸಾರ್ವತ್ರಿಕ ಮತದಾನ ನಡೆಯುವ ಮೊದಲು ವೇಳಾಪಟ್ಟಿಯ ಪ್ರಕಾರ ಈ ಮತದಾರರ ಮನೆಗಳಿಗೆ ನಿಯೋಜಿತ ಚುನವಣಾಧಿಕಾರಿಗಳ ತಂಡವು ಭೇಟಿ ನೀಡಿ ಪೋಸ್ಟಲ್ ಬ್ಯಾಲೆಟ್ ಚಲಾವಣೆ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.

ಅಭ್ಯರ್ಥಿಗಳಿಂದ ಘೋಷಣೆ ಕಡ್ಡಾಯ ಚುನಾವಣಾ ಆಯೋಗದ ಹೊಸ ನಿರ್ದೇಶನದಂತೆ ಈ ಬಾರಿಯ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳು ತಮ್ಮ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳು ಇದ್ದರೆ ಅಫಿಡೆವಿಟ್ ಸಲ್ಲಿಕೆ ಜೊತೆಗೆ ಫಾರ್ಮ 5 ಮತ್ತು 6 ಮೂಲಕ ಪ್ರಕರಣಗಳ ವಿವರಗಳನ್ನು ಬಹಿರಂಗ ಪ್ರಚಾರ ಮುಕ್ತಾಯದ 2ದಿನಗಳ ಮುಂಚೆ ಪತ್ರಿಕೆಗಳು ಹಾಗೂ ಟಿವಿ ಮೂಲಕ ಪ್ರಚಾರಪಡಿಸತಕ್ಕದ್ದು
3 ಸಲ ಪ್ರಕಟಣೆ ನೀಡುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು.

ಐತಿಹಾಸಿಕ ಸ್ಮಾರಕಗಳ ಚಿತ್ತಾರಗಳಿಂದ ಮಿಂಚಲಿರುವ ಮತಗಟ್ಟೆಗಳು ಪ್ರತಿ ಚುನಾವಣೆಯಲ್ಲಿರುವಂತೆ ಈ ಬಾರಿ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ವಿಶೇಷವಾಗಿ ಈ ಬಾರಿ ಕ್ಷೇತ್ರದ ಆಯ್ದ 40-50 ಮತಗಟ್ಟೆಗಳಲ್ಲಿ ಐತಿಹಾಸಿಕ ಕೋಟೆ, ಕೊತ್ತಲುಗಳು ಇನ್ನೀತರ ಐತಿಹಾಸಿಕ ಸ್ಮಾರಕಗಳ ಪೇಟಿಂಗ್ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಹೊಸ ಮತದಾರರು ಇಲ್ಲಿಯವರೆಗೆ ಕ್ಷೇತ್ರದಲ್ಲಿ 2ಸಾವಿರ ಹೊಸ ಯುವ ಮತದಾರರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದು ಹೊಸ ಮತದಾರರ ಸೇರ್ಪಡೆಗೆ ಏಪ್ರೀಲ್ 11 ವರೆಗೆ ಅವಕಾಶವಿದ್ದು 18ವರ್ಷ ಪೂರ್ಣಗೊಂಡಿರುವ ಅರ್ಹ ಮತದಾರರು ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವವರು ಫಾರ್ಮ 6 ತುಂಬಿ ಹೆಸರು ಸೇರ್ಪಡೆಗೊಳಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಹಾಯಕ ಚುನಾವಣಾಧಿಕಾರಿ ಸುಬ್ಬಣ್ಣ ಜಮಖಂಡಿ, ತಾಪಂ ಇಓ ಚಂದ್ರಶೇಖರ ಪವಾರ, ಚುನಾವಣಾ ವಿಭಾಗದ ಶಿರಸ್ತೇದಾರ ಅವಿನಾಶ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here