ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಅಂಗವಾಗಿ ಸಾಮೂಹಿಕ ವಿವಾಹಗಳು

0
12

ಸುರಪುರ: ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ಅವರ 132ನೇ ಜಯಂತ್ಯೋತ್ಸವದ ಅಂಗವಾಗಿ ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಸರಳ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕ ಮಲ್ಲಿಕಾರ್ಜುನ ಕಟ್ಟಿಮನಿ ವಾಗಣಗೇರ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಚುನಾವಣೆ ನೀತಿ ಸಂಹಿತೆ ಇರುವ ಕಾರಣ ದಿಂದ ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂಬ ಉದ್ದೇಶ ದಿಂದ ತಾಲೂಕಿನ ಎಲ್ಲಾ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ನೆರವಿನೊಂದಿಗೆ ಮುಖಂಡರಾದ ಸಾಹೇಬಗೌಡ ಅವರ ಜೊತೆಗೂಡಿ ಸರಳ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

Contact Your\'s Advertisement; 9902492681

ಏಪ್ರಿಲ್ 14 ರಂದು ಮದ್ಹ್ಯಾನ ನಡೆಯಲಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯವನ್ನು ವರಜ್ಯೋತಿ ಬಂತೇಜಿಯವರು ವಹಿಸಲಿದ್ದು,ಬುದ್ಧ ಘೋಷ್ ದೇವೆಂದ್ರ ಹೆಗ್ಗಡೆಯವರು ಉದ್ಘಾಟಿಸಲಿದ್ದಾರೆ,ಹಿರಿಯ ದಲಿತ ಮುಖಂಡರಾದ ದುರ್ಗಪ್ಪ ಗೋಗಿಕರ್,ಚಂದ್ರಶೇಖರ ಹಸನಾಪುರ ಉಪಸ್ಥಿತರಿರಲಿದ್ದು ಹಿರಿಯ ಮುಖಂಡ ಶರಣಪ್ಪ ಗುಳಬಾಳ ಪುಷ್ಪಾರ್ಚನೆ ಮತ್ತು ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ಅಧ್ಯಕ್ಷ ವೆಂಕಟೇಶ ಹೊಸಮನಿ ಧ್ವಜಾರೋಹಣ ನೆರವೇರಿಸಲಿದ್ದು,ಆಯೋಜಕರಲ್ಲಿ ಒಬ್ಬರಾದ ಸಾಹೇಬಗೌಡ ವಾಗಣಗೇರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಅಲ್ಲದೆ ವಿವಿಧ ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳ ರಾಜ್ಯ ಹಾಗೂ ಜಿಲ್ಲಾ ಮತ್ತು ತಾಲೂಕ ಸಂಚಾಲಕರು ಮತ್ತು ಮುಖಂಡರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಇದೇ ಸಂದರ್ಭದಲ್ಲಿ ಮುಖಂಡರಾದ ಚಾಂದಪಾಷಾ ಗುಲಾಮ ಹುಸೇನ ಮುಜೇವಾರ ಕುಂಬಾರಪೇಟ ಹಾಗೂ ಮುರ್ತುಜಾ ಮುಲ್ಲಾ ಇವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು.ಎಲ್ಲಾ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು,11 ನವ ಜೋಡಿಗಳು ಇದೇ ಸಂದರ್ಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮುಖಂಡರಾದ ಶರಣಪ್ಪ ಗುಳಬಾಳ, ಸಾಹೇಬಗೌಡ ವಾಗಣಗೇರ,ಹಣಮಂತ ಕಟ್ಟಿಮನಿ ಬೊಮ್ಮನಹಳ್ಳಿ,ಹಣಮಂತ ಭದ್ರಾವತಿ ಮಾತನಾಡಿದರು.ಮುಖಂಡರಾದ ನಿಂಗಣ್ಣ ಗೋನಾಲ,ಶರಣಪ್ಪ ವಾಗಣಗೇರ,ಶೇಖರ ಮಂಗಳೂರು,ಮಾನಪ್ಪ ಶೆಳ್ಳಗಿ,ಮಲ್ಲಪ್ಪ ತಳವಾರಗೇರ,ಶರಣಪ್ಪ ಪರಸನಹಳ್ಳಿ,ಮಲ್ಲು ಮುಷ್ಠಹಳ್ಳಿ,ಮಹಾದೇವ ದೇವಾಪುರ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here