ದ್ವಿತೀಯ ಪಿಯು ಕನ್ನಡ ಮೌಲ್ಯ ಮಾಪನ ಕೇಂದ್ರ ಉತ್ತಮವಾಗಿದೆ: ಮುಳೇಗಾಂವ

0
18

ಕಲಬುರಗಿ:ಕನ್ನಡ ಉಪನ್ಯಾಸಕರು ಮೌಲ್ಯಮಾಪನ ಕೆಲಸ ತುಂಬಾ ಜವಾಬ್ದಾರಿಯಿಂದ ಮೌಲ್ಯ ಮಾಪನ ಯಶಸ್ವಿ ಮಾಡಿದಿರಿ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶಿವಶರಣಪ್ಪಾ ಮುಳೇಗಾಂವ ಹೇಳಿದರು.

ನಗರದ ಗುರುಕುಲ ಪಿಯು ಕಾಲೇಜಿನಲ್ಲಿ 2022-2023ನೇ ಸಾಲಿನ ದ್ವಿತೀಯ ಪಿಯು ಕನ್ನಡ ವಿಷಯದ ಮೌಲ್ಯ ಮಾಪನ ಏಪ್ರಿಲ್ 3ರಿಂದ ಪ್ರಾರಂಭ ಗೊಂಡು ಏಪ್ರಿಲ್15 ರವರೆಗೆ ನಡೆಯಲಿದ್ದು. ಆಧುನಿಕ ಸಂದರ್ಭದಲ್ಲಿ ಕಂಪ್ಯೂಟರ್ ಬಳಕೆ ಯನ್ನು ಹೊಂದಿಕೊಳ್ಳುವುದು ಬಹಳ ಅವಶ್ಯಕತೆ ಇದೆ ಈ ಸಂದರ್ಭದಲ್ಲಿ 9,10,11,12 ತರಗತಿಗಳು ವಿಲೀನೀಕರಣವಾಗಿದ್ದು ಹೊಸ ಜ್ಞಾನ ಇಲಾಖೆಯ ಕಾರ್ಯಗಳನ್ನು ಉಪನ್ಯಾಸಕರು ಮಾಡಲೇಬೇಕಾಗುತ್ತೆ ಎಂದು ತಿಳಿಸಿದರು. 2023ನೇ ಸಾಲಿನಲ್ಲಿ ನಿವೃತ್ತ ಹೊಂದಿರುವ ಪ್ರಾಂಶುಪಾಲರು, ಉಪನ್ಯಾಸಕರಿಗೆ ಗೌರವ ಸನ್ಮಾನ ಹಾಗೂ ಪಿ ಎಚ್ ಡಿ ಪದವಿ ಪಡೆದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಉಪನ್ಯಾಸಕರುಗಳಿಗೂ ಗೌರವಿಸಲಾಯಿತು.

Contact Your\'s Advertisement; 9902492681

ವೇದಿಕೆಯಲ್ಲಿ ಮೌಲ್ಯ ಮಾಪನ ಕೇಂದ್ರದ ಮುಖ್ಯಸ್ಥರೂ ಕೆ ಎಲ್ ಚವ್ಹಾಣ, ವೀಕ್ಷಕರು ಪಂಡರಿ ಹುಗ್ಗಿ, ಹರೀಶ್ ದೇಶಪಾಂಡೆ, ಇದ್ದರು. ಮಾರುತಿ ರೆಡ್ಡಿ, ವಿಜಯಕುಮಾರ್ ರೋಣದ, ಡಾ ಮನ್ಮಥ ಡೋಳೆ, ಡಾ ಗೌಸುದ್ದೀನ, ಡಾ ಚಂದ್ರಪ್ಪ, ಶಿವರಾಜ್ ರವರು ಆಪೀಸ್ ಡಿಸಿ ಆಗಿ ಕಾರ್ಯ ನಿರ್ವಹಿಸಿದರು, ಸೇವೆ ಸಲ್ಲಿಸಿ ನಿವೃತ್ತರಾಗುವ ಜಗದೀಶ್ ಕಡಬಗಾಂವ, ಸದಾಶಂಕರ, ಡಾ ಅಬ್ದುಲ್ ಕರೀಂ, ಶರಣಯ್ಯ ಹಿರೇಮಠ, ಶಿವರುದ್ರಯ್ಯ, ರಾಜಪ್ಪ ಅವರಿಗೆ ಗೌರವ ಸನ್ಮಾನ ಮಾಡಲಾಯಿತು.

ಇದೆ ಸಂದರ್ಭದಲ್ಲಿ ಬಿ ಎಚ್ ನಿರಗುಡಿ, ಡಾ ಚಿ ಸಿ ನಿಂಗಣ್ಣ,, ಡಾ ಜೈಸೇನ್ ಪ್ರಸಾದ್ ರವರಿಗೆ ಸನ್ಮಾನಿಸಲಾಯಿತು. ಡಾ ಶಂಕರ ಬಾಳಿ ಸ್ವಾಗತಿಸಿದರು, ಕಾರ್ಯ ಕ್ರಮ ನಿರ್ವಹಣೆ ಅಂಜನಾ ಯಜುರವೇದಿ, ಮಾಡಿದರು, 13ದಿನಗಳ ಕಾಲ 250ಕ್ಕೂ ಹೆಚ್ಚು ಉಪನ್ಯಾಸಕರು ಯಶಸ್ವಿಯಾಗಿ ಮೌಲ್ಯ ಮಾಪನ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here