ಸುರಪುರ: ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ರಾಜುಗೌಡ ನಾಮಪತ್ರ ಸಲ್ಲಿಕೆ

0
17

ಸುರಪುರ: ಇಲ್ಲಿಯ ತಹಸೀಲ್ದಾರ್ ಕಚೇರಿಯಲ್ಲಿನ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಸುರಪುರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಶಾಸಕ ನರಸಿಂಹ ನಾಯಕ (ರಾಜುಗೌಡ) ತಮ್ಮ ನಾಮಪತ್ರ ಸಲ್ಲಿಸಿದರು.ಸೋಮವಾರ ಮದ್ಹ್ಯಾನ ತಮ್ಮ ಸೂಚಕರೊಂದಿಗೆ ಆಗಮಿಸಿದ ಶಾಸಕ ರಾಜುಗೌಡ ಚುನಾವಣಾಧಿಕಾರಿ ಅಮರೇಶ ನಾಯ್ಕ ಅವರಿಗೆ ನಾಮಪತ್ರ ಸಲ್ಲಿಸಿದರು.

ಸಹಾಯಕ ಚುನಾವಣಾಧಿಕಾರಿಗಳಾದ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ,ಹುಣಸಗಿ ತಹಸೀಲ್ದಾರ್ ಜಗದೀಶ ಚೌರ್ ಇದ್ದರು.
ನಾಮಪತ್ರ ಸಲ್ಲಿಸಿದ ನಂತರ ಹೊರಗೆ ಬಂದು ವಿಜಯದ ಸಂಕೇತ ಬೀರಿದ ಶಾಸಕ ರಾಜುಗೌಡ ಮಾತನಾಡಿ,ಈಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸುವುದಾಗಿ ತಿಳಿಸಿದರು.ಈಬಾರಿ ರಾಜ್ಯದಲ್ಲಿ ಬಿಜೆಪಿ ಪರವಾಗಿ ದೊಡ್ಡ ಅಲೆ ಇದೆ,130ಕ್ಕೂ ಹೆಚ್ಚು ಸೀಟುಗಳು ಬಿಜೆಪಿ ಗೆಲ್ಲಲಿದೆ ಎಂದರು.

Contact Your\'s Advertisement; 9902492681

ಅಲ್ಲದೆ ನಾನುಕೂಡ ಕಳೆದ ಬಾರಿ 22 ಸಾವಿರದ ಐದನೂರಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದೆ,ಈಬಾರಿ 50 ಸಾವಿರ ಮತಗಳ ಅಂತರ ದಿಂದ ಗೆಲುವು ಸಾಧಿಸುವುದಾಗಿ ಭರವಸೆ ವ್ಯಕ್ತಪಡಿಸಿದರು.ಅಲ್ಲದೆ ಕಾರ್ಯಕರ್ತರಿಗೂ ಸಮಾಧಾನ ದಿಂದ ಚುನಾವಣೆಯನ್ನು ಮಾಡುವಂತೆ ಹೇಳಿದ್ದೇನೆ,ನಾನು ಪಕ್ಷ ಹೇಳಿದ ಕ್ಷೇತ್ರಗಳಿಗೆ ಪ್ರಚಾರಕ್ಕೆ ಹೋಗುವುದಾಗಿ ತಿಳಿಸಿದರು.

ಅಲ್ಲದೆ ಲಕ್ಷ್ಮಣ ಸವದಿ ಹಾಗೂ ಜಗದೀಶ ಶೆಟ್ಟರ್ ಪಕ್ಷ ತೊರೆದಿದ್ದರ ಕುರಿತು ಬೇಸರ ವ್ಯಕ್ತಪಡಿಸಿ,ಇಬ್ಬರಿಗೂ ಪಕ್ಷ ಎಲ್ಲ ರೀತಿಯ ಸ್ಥಾನಮಾನ ನೀಡಿತ್ತು,ಆದರೂ ಪಕ್ಷ ತೊರೆದಿದ್ದು ಬೇಸರದ ಸಂಗತಿಯಾಗಿದೆ.ಅದರಲ್ಲಿ ಲಕ್ಷ್ಮಣ ಸವದಿಯವರು ಬಿಜೆಪಿ ಕಚೇರಿ ಮುಂದೆ ನನ್ನ ಶವವೂ ಹೋಗುವುದಿಲ್ಲ ಎಂದಿರುವುದು ತುಂಬಾ ನೋವು ತಂದಿದೆ ಎಂದರು.

ಶಾಸಕ ಒಟ್ಟು 4 ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿದೆ.ಈ ಸಂದರ್ಭದಲ್ಲಿ ಸೂಚಕರಾಗಿ ಸಂಸದ ರಾಜಾ ಅಮರೇಶ್ವರ ನಾಯಕ,ಗುಜರಾತ ರಾಜ್ಯದಿಂದ ಕ್ಷೇತ್ರದ ವೀಕ್ಷಕರಾಗಿ ಆಗಮಿಸಿದ್ದ ಕಮಲೇಶ ಪಟೇಲ್,ರಾಜಾ ಹನುಮಪ್ಪ ನಾಯಕ ತಾತಾ,ಗದ್ದೆಪ್ಪ ಪೂಜಾರಿ ಭಾಗವಹಿಸಿದ್ದರು.

ಬಾಕ್ಸ್ ಮಾಡಿ ಹಾಕಿಕೊಳ್ಳಿ: ಶಾಸಕ ರಾಜುಗೌಡ ಅವರ ಧರ್ಮ ಪತ್ನಿ ಮೈತ್ರಾ ನರಸಿಂಹ ನಾಯಕ (ರಾಜುಗೌಡ) ಅವರು ಕೂಡ ಪಕ್ಷೇತರರಾಗಿ ಎರಡು ನಾಮಪತ್ರ ಸಲ್ಲಿಸಿದರು. ಸೂಚಕರಾಗಿ ಅಪ್ಪಾಸಾಹೇಬ ಪಾಟೀಲ್,ಪರಮಣ್ಣ ಪೂಜಾರಿ,ಹಿರಸಂಗಪ್ಪ ಹಾವೇರಿ,ಕಿಷ್ಟಪ್ಪ ಸಾಹುಕಾರ ಹುಣಸಗಿ ಸೂಚಕರಾಗಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here