ಪ್ರಿಯಾಂಕ್ ಖರ್ಗೆ ಜನರಿಗೆ ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ: ಸಂಸದ ಜಾಧವ್ ಆರೋಪ

0
182

ಕಲಬುರಗಿ: ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವ ನೆಪವನ್ನು ನೀಡಿ ಚಿಂಚೋಳಿ ಕ್ಷೇತ್ರದ ಶಾಸಕ ಡಾ. ಅವಿನಾಶ್ ಜಾಧವ್ ಅವರನ್ನು ಒಣಿಗಳಲ್ಲಿ ಬರ ಗುಡುವುದಿಲ್ಲ ಎಂದು ಕೇಳಿಕೆ ನೀಡುವ ಮೂಲಕ ಚಿತ್ತಾಪುರ ಶಾಸಕ ಪ್ರಿಯಾಂಖ್ ಖರ್ಗೆ ಜನರಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಆರೋಪಿಸಿದ್ದಾರೆ.

ಮಂಗಳವಾರ ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸೋಲಿನ ಭೀತಿಯಿಂದ ಚಿಂಚೋಳಿ ತಾಲ್ಲೂಕಿನ ಚಂದನಕೇರ್ ಗ್ರಾಮದಲ್ಲಿ ಬಿಜೆಪಿ ಶಾಸಕ ಅವಿನಾಶ್ ಜಾಧವ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಚಂದನಕೇರದಲ್ಲಿ ಅಂಬೇಡ್ಕರ್ ಮೂರ್ತಿ ಇಲ್ಲ, ನಾಮಫಲಕ ಇದೆ. ಅದಕ್ಕೆ ಅವಮಾನ ಮಾಡಲಾಗಿದೆ ಎಂಬ ಪ್ರಿಯಾಂಕ್ ಖರ್ಗೆ ಮಾತು ಸತ್ಯಕ್ಕೆ ದೂರವಾದದು. ಕಾಂಗ್ರೆಸ್ ಗೆ ಸೋಲಿನ ಹತಾಶೆ ಕಾಡುತ್ತಿದೆ ಅದಕ್ಕೆ ಈ ರೀತಿಯ ಹೇಳಿಕೆ ಮತ್ತು ಘಟನೆಗಳನ್ನು ನಡೆಸುತ್ತಿದೆ ಎಂದು ದುರಿದರು.

Contact Your\'s Advertisement; 9902492681

ಕಾಂಗ್ರೆಸ್ ಗುಂಡಾ ಕಾರ್ಯಕರ್ತರ ವರ್ತನೆಯಿಂದ ಈ ಘಟನೆ ನಡೆದಿದ್ದು, ಬಿಜೆಪಿ ಕಾರ್ಯಕರ್ತರು ಇಲ್ಲದಿದ್ದರೇ ಶಾಸಕ ಜಾಧವ್ ಅವರ ಸಾವು ಖಚಿತವಾಗಿತ್ತು. ಪೊಲೀಸರು ಸರಿಯಾದ ಸಮಯಕ್ಕೆ ಸ್ಥಳಕ್ಕೆ ಬಂದಿರುವುದರಿಂದ ದೊಡ್ಡ ಅನಾಹುತ ತಪ್ಪಿದೆ ಎಲ್ಲಾಂದ್ರೆ ಮೂರು ನಾಲ್ಕು ಸಾವು ಸಂಭವಿಸುತ್ತಿತ್ತು. ಗ್ರಾಮದ ನಾಲ್ಕು ಭಾಗಗಳಲ್ಲಿ ಕಲ್ಲುಗಳು ತಂದು ಇಟ್ಟು ಘಟನೆ ನಡೆಸಲಾಗಿದೆ. ಅದರ ಬಗ್ಗೆ ಪ್ರಿಯಾಂಕ್ ಏಕೆ ಹೇಳುತ್ತಿಲ್ಲ.

ಪ್ರಿಯಾಂಕ್ ಖರ್ಗೆ ಅವರು ದರ್ಪದ ಮಾತುಗಳನ್ನು ಆಡುವ ಮೂಲಕ ಜನರಿಗೆ ಪ್ರಚೋದನೆಗೆ ಒಳಪಡಿಸುವ ಕೆಲಸ ಮಾಡುತ್ತಿದ್ದಾರೆ. ಅಂಬೇಡ್ಕರ್ ಪ್ರಿಯಾಂಕ್ ಖರ್ಗೆ ಅವರ ಆಸ್ತಿ ಅಲ್ಲ, ದೇಶದ ಆಸ್ತಿ ಅವರಿಗಿಂತ ಬಿಜೆಪಿ ಪಕ್ಷ ಅಂಬೇಡ್ಕರ್ ಅವರಿಗೆ ಹೆಚ್ಚು ಗೌರವ ನೀಡುತ್ತದೆ ಎಂದು ಟಾಂಗ್ ನೀಡಿದ ಅವರು ಪ್ರಿಯಾಂಕ್ ಖರ್ಗೆ ಅವರಿಗೆ ಸೋಲಿನ ಹತಾಶೆ ಕಾಡುತ್ತಿದೆ ಎಂದರು.

ಮಾಲಿಕಯ್ಯಾ ಗುತ್ತೇದಾರ್ ಜಾಧವ್ ಯಿಂದ ತಪ್ಪಾಗಿದೆ ಎಂದು ಹೇಳಿದ್ದು, ನಮ್ಮ ಬಗ್ಗೆ ಅವರು ಏಕೆ ಮಾತನಾಡುತ್ತಾರೆ ವಿಷಯ ತಿಳಿದುಕೊಂಡು ಮಾಲಿಕಯ್ಯಾ ಹೇಳಿಕೆ ನೀಡ ಬೇಕು ಸುಳ್ಳು ಹೇಳಿಕೆ ನೀಡಲು ಗೋಗಬಾರದೆಂದು ಗುಡುಗಿದರು.

ಹಿರಿಯರು ಪಕ್ಷ ಬಿಡುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಜಾಧವ್ ನಮ್ಮಗೆ ಮತದಾರರು ವರಿಷ್ಠರು ಪಕ್ಷದ ಹಿರಿಯರಿಂದ ಪಕ್ಷ ಇಲ್ಲ ಮತದಾರರಿಂದ ಪಕ್ಷ ಇದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಅಮರನಾಥ್ ಪಾಟೀಲ್, ಕೆಎಮ್ಡಿಸಿ ನಾಮ ನಿರ್ದೇಶಿತ ನಿರ್ದೇಶಕರಾದ ಸದ್ದಾಮ್ ಹುಸೇನ್ ವಜಿರಗಾಂವು ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here