ಆಳಂದ: ಪಟ್ಟಣದ ಮಟಕಿ ರಸ್ತೆಯಲ್ಲಿನ 100 ಹಾಸಿಗೆಯುಳ್ಳ ಸಸರ್ಜಿತ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ಮಹಾಂತಪ್ಪಾ ಹಾಳಮಳಿ ನೇತೃತ್ವದಲ್ಲಿನ ವೈದ್ಯರ ತಂಡವು ವಿವಿಧ ರೋಗಿಗಳಿಗೆ ನೀಡುತ್ತಿರುವ ತಪಾಸಣೆ ಮತ್ತು ಚಿಕಿತ್ಸೆ ವರವಾಗಿ ಪರಿಣಮಿಸಿ ಜಿಲ್ಲಾ ಮಟ್ಟದ ಗಮನ ಸೆಳೆದಿದೆ.
ಆಸ್ಪತ್ರೆಯ 100 ಹಾಸಿಗೆ ಸುಸರ್ಜಿತ ಕಟ್ಟಡ ಸ್ಥಾಪನೆಯಾದಾಗಿನಿಂದಲೂ ಸರ್ಕಾರಿ ಆಸ್ಪತ್ರೆಯಂದರೆ ಉತ್ತಮ ಚಿಕಿತ್ಸೆ ದೊರೆಯಲ್ಲ ಎಂದಿದ್ದ ರೋಗಿಗಳಿಗೆ ಈಗ ಆಸ್ಪತ್ರೆಯಲ್ಲಿ ಕೈಗೊಂಡ ಸುವ್ಯವಸ್ಥೆ ಮತ್ತು ಉತ್ತಮ ಆಡಳಿತವೇ ರೋಗಿಗಳನ್ನು ಆಸ್ಪತ್ರೆಯತ್ತ ಮುಖಮಾಡುವಂತಾಗಿದೆ.
ಕಳೆದೊಂದು ವರ್ಷದಲ್ಲಿ 313 ರೋಗಿಗಳಿಗೆ ನೇತ್ರ ಶಸ್ತ್ರ ಚಿಕಿತ್ಸೆ ಕೈಗೊಳ್ಳುವ ಮೂಲಕ ಜಿಲ್ಲೆಯ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಆಳಂದ ಪ್ರಥಮ ಸ್ಥಾನಗಿಟ್ಟಿಸಿ ವೈದ್ಯರ ಕಾರ್ಯಕ್ಕೆ ಮೆಚ್ಚಿಗೆ ವ್ಯಕ್ತವಾಗಿದೆ. ಒಂದು ಸಾವಿರಕ್ಕೂ ಹೆಚ್ಚು ಜನ ನೇತೃ ರೋಗಿಗಳ ತಪಾಸಣೆ ಕೈಗೊಂಡು ಸಲಹೆ ಸೂಚನೆ ಮತ್ತು ಚಿಕಿತ್ಸೆ ನೀಡಿದ್ದು, ಅಲ್ಲದೆ, 313 ಜನರಿಗೆ ನೇತ್ರದ ಶಸ್ತ್ರ ಚಿಕಿತ್ಸೆ ಕೈಗೊಳ್ಳುವ ಮೂಲಕ ಆಸ್ಪತ್ರೆಯ ನೇತೃ ತಜ್ಞ ಡಾ. ಸುನಿಲ ಮೇತ್ರೆ ಅವರು ರೋಗಿಗಳ ಪರ ಕಾಳಜಿ ವಹಿಸಿದ್ದು ಇನ್ನೊಬ್ಬ ವೈದ್ಯರಿಗೆ ಮಾದರಿಯಾಗಿದ್ದು, ಹೀಗಾಗಿ ಮೇತ್ರೆ ಅವರನ್ನು ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಮಹಾಂತಪ್ಪ ಹಾಳಮಳಿ ಸನ್ಮಾನಿಸಿದರು. ಸಹಾಯಕ ಆಡಳಿತಾಧಿಕಾರಿ ಈರಣ್ಣಾ ಮೂಲಿಮನಿ, ಐಸಿಟಿಸಿ ಸಿದ್ಧಣ್ಣಾ ಇದ್ದರು.
ಆಸ್ಪತ್ರೆಯಲ್ಲಿ ನೇತ್ರ ಚಿಕಿತ್ಸೆ ಸೌಲಭ್ಯ ಲಭ್ಯವಿದ್ದು ರೋಗಿಗಳು ಇದರ ಲಾಭ ಪಡೆದುಕೊಳ್ಳಬೇಕು ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಮಹಾಂತಪ್ಪ ಹಾಳಮಳಿ ಅವರು ತಿಳಿಸಿದ್ದಾರೆ. ಕ್ಯಾನ್ ಆಂಡ್ ಶೇರ ಹೊರ ರೋಗಿಗಳನ್ನು ಸರಣಿಗೆ ನಿಲ್ಲದೆ ಆನ್‍ಲೈನ್ ಒಪಿಡಿ ಚೀಟಿ ಮೂಲಕವೇ ಚಿಕಿತ್ಸೆ ನೀಡುವಲ್ಲಿ ಆಸ್ಪತ್ರೆ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸೆ ಸೌಲಭ್ಯ, ಸೀಜರಿನ್ ಸೌಲಭ್ಯ, ಪ್ರತಿ ತಿಂಗಳ 100ಕ್ಕೂ ಹೆಚ್ಚು ಹೆರಿಗೆ ನಡೆಯುತ್ತಿದೆ. ಡಯಾಲಸಸ್ ಘಟಕ ಇದ್ದು, ಇದು ಕಿಡ್ನಿ ರೋಗಿಗಳಿಗೆ ಚಿಕಿತ್ಸಾ ಸೌಲಭ್ಯ ಲಭ್ಯವಿದೆ. ಹೊರರೋಗಿಗಳಿಗೆ ನಿತ್ಯ 150ರಿಂದ 200 ರೋಗಿಗಳನ್ನು ತಪಾಸಣೆ ಕೈಗೊಳ್ಳಲಾಗುತ್ತಿದೆ. ನಾನು ಚಾರ್ಜ್ ಪಡೆಯುವ ಮೊದಲು ನಿತ್ಯ 80 ರೋಗಿಗಳ ಮಾತ್ರ ಚಿಕಿತ್ಸೆ ಬರುತ್ತಿದ್ದರು. ಆದರಿಗ ಸಿಬ್ಬಂದಿಗಳ ಸಹಕಾರದಿಂದ ಆಯುಷ್ಯಮಾನ ಭಾರತ, ಆರೋಗ್ಯ ಕರ್ನಾಟಕದಿಂದ ಯೋಜನೆಗಳಿಂದ ಅನೇಕ ಫಲಾನುಭವಿಗಳು ಇದರ ಸದ್ಬಳಕೆ ಮಾಡಿಕೊಳ್ಳುತ್ತಿದ್ದು, ಇನ್ನೂ ಹೆಚ್ಚಿನವರು ಸಹ ಇದರ ಲಾಭವನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಆಡಳಿತ ವೈದ್ಯಾಧಿಕಾರಿ ಡಾ. ಮಹಾಂತಪ್ಪ ಹಾಳಮಳಿ ಅವರು ತಿಳಿಸಿದ್ದಾರೆ.
ಈಚೆಗಷ್ಟೇ ಸ್ಪತ್ರೆಯಲ್ಲಿನ ಐಷಿಯು ಘಟಕ ತೆರೆದು ವಾರದಲ್ಲಿ ಮೂರ್ನಾಲ್ಕು ರೋಗಿಗಳನ್ನು ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ತುರ್ತು ಚಿಕಿತ್ಸೆಗೆ ಒತ್ತು ನೀಡಿದ್ದರಿಂದ ಆಸ್ಪತ್ರೆಯಿಂದ ರೋಗಿಗಳಿಗೆ ಮತ್ತವರ ಕುಟುಂಬಸ್ಥರಿಗೆ ಅನುಕೂಲವಾಗಿದೆ ಎಂದರು.
ಒಟ್ಟು 120 ಸಿಬ್ಬಂದಿಗಳಿದ್ದು, ತಜ್ಞ ವೈದ್ಯರ-9 ಮಂದಿ, ಎಂಬಿಬಿಎಸ್ 4 ವೈದ್ಯರು, ಎಲಬು ಮತ್ತು ಕೀಲು ತಜ್ಞರು, ಶಸ್ತ್ರ ಚಿಕಿತ್ಸಕರು-1 ನೇತ್ರ-1, ಚಿಕ್ಕಮಕ್ಕಳ ತಜ್ಞರು 1, ಪಿಜಿಷನ್ (ಎಂಡಿ), ಸ್ತ್ರೀ ರೋಗ ತಜ್ಞರು 2, ಅರವಳಿಕೆ ತಜ್ಞರು 2, ದಂತ ವೈದ್ಯರು 2, ಸ್ಟಾರ್ಪನಸ್ 15 ಮಂದಿ ಕಾಯಂ ಹಾಗೂ ಗುತ್ತಿಗೆ ಆಧಾರದ ಮೇಲೆ 5 ನರ್ಸ್‍ಗಳಿದ್ದಾರೆ. ಗ್ರೂಫ್ ಡಿ ಸಿಬ್ಬಂದಿ-ಗುತ್ತಿಗೆ ಆಧಾರದ ಮೇಲೆ 11 ಮಂದಿ ಹಾಗೂ ಖಾಯಂ ಸಿಬ್ಬಂದಿ 27 ಮಂದಿ ಸೇರಿ 38 ಜನರು ಕಾರ್ಯನಿರ್ವಹಿಸಿದ್ದರು. 100 ಹಾಸಿಗೆಯುಳ್ಳ ಆಸ್ಪತ್ರೆಯಲ್ಲಿ ಪ್ರತಿಯೊಂದು ಹಾಸಿಗೆಗೂ ಆಕ್ಸಿಜನ್ ಪೂರೈಕೆ ಸೌಲಭ್ಯ ಒದಗಿಸಿ ಚಿಕಿತ್ಸೆ ನೀಡುವ ಸೌಲಭ್ಯ, ಅಲ್ಲದೆ, ಎರಡು ಆಂಬ್ಯೂಲೇನ್ಸ್ ಒಂದನ್ನು ನಗು-ಮಗು ವಾಹನವು ಜನನಿ ಸುರಕ್ಷ ತುರ್ತು ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಹಾವು ಕಡಿತ ಮತ್ತು ನಾಯಿ ಕಡಿತ ಚುಚ್ಚುಮದ್ದು ಔಷಧಿ ಲಭ್ಯವಿದೆ ರೋಗಿಳು ಸರ್ಕಾರಿ ಆಸ್ಪತ್ತೆಯ ಲಾಭವನ್ನು ಪಡೆಯಬೇಕು ಎಂದು ಡಾ. ಮಹಾಂತಪ್ಪ ಹಾಳಮಳಿ ಅವರು ಹೇಳಿದರು.