ಆಳಂದ: ಈ ಭಾರಿ ಮುಂಗಾರು ಮಳೆ ಕಡಿಮೆಯಾಗಲಿದ್ದು, ಒಂದಕಡೆ ಬಂದರೆ ಮತ್ತೊಂದು ದಿಕ್ಕಿಗೆ ಮಳೆ ಅಭಾವ ಎದರಾಗಲಿದೆ. ಹೀಗಾಗಿ ಮುಂಗಾರುಗಿಂತ ಹಿಂಗಾರು ಮಳೆ ಹೆಚ್ಚಳವಾಗಲಿದೆ ಎಂದು ಪ್ರಭುರಾಯ ಆರ್. ಪೂಜಾರಿ ತಮ್ಮ ವಾಡಿಕೆಯಂತೆ ಭವಿಷ್ಯ ನುಡಿದರು.
ಮಾಡಿಯಾಳ ಗ್ರಾಮದ ಶ್ರೀ ಅಮೋಘಸಿದ್ದೇಶ್ವರ ಜಾತ್ರೆಯ ನಿಮಿತ್ಯ ಬೆಳಗಿನ ಜಾವ ಭಕ್ತರ ಮಧ್ಯೆ ತಮ್ಮ ವಾಣಿಯ ಮೂಲಕ ಅರಕೇರಿ ಅರಮನೆ. ಕಲ್ಲೂರು ಗುರು ಮನೆ. ಮಾಯ ಮಕಣಾಪೂರ ಸಿಂಹಾಸನ ಗದ್ದೆ ಸಮುದ್ರಕ್ಕ ಹೋಗಿ ಕಟ್ಟಿ ಪೂಜೆ ಮಾಡಿ ಧರ್ಮ ರಾಜ್ಯಗ ಹಚ್ಚಿ ಚಪ್ಪನಾಡಿಗೆಲ್ಲ ಜಾಡಗಂಬಳಿ ತಂದು ಜಾಡಸಿನಿ.
ಮುಂಗಾರು ಹಂಡ ಹವಳದ ಮ್ಯಾಲ್, ಹಿಂಗಾರು ನಂದಿ ಮ್ಯಾಲ್, ಹಿಂಗಾರು ಮುಂಗಾರು ಚಿಂತಾನ ಹಚ್ಚಿ ತೂಗದರಾಗ ಹಿಂಗಾರು ಹೆಚ್ಚಾಯಿತು. ಬಸವನ ಹಸು, ಶಿಶುವಿನ ಹಸು ಚೌತಿಗೆ ಹರಿಬೇಕೆಂದ್ರೆ ದಸರಿಗೆ ಹರಿಯುವುದು ಎಂದರು.
ಮುಂಗಾರು ಹಿಂಗಾರು ಸೋಸಿ ನೋಡರದಾಗ ಕೆಂಪು, ಕರಿ, ಬಿಳಿ ಮೂರು ಸಮವಾಯಿತು. ಎಂಟ ದಿಕ್ಕು, ಹದಿನಾರು ಕೋನಿ, ನಾಲ್ಕು ಮೂಲಿ ಸೋಸಿ ನೋಡಿದಾಗ ಗಂಗೆ ನಾಡು ಎರಾಯಿತು. ಗಂಗಿನಾಡಿಗೆ ತಂಗಿ ತಯಾರಾಗ್ಯಳ. ಭೂತ್ಯಾಗ ಹಚ್ಚಿ ಬಯಲು ಮಾಡಿನೀ. ಬಸವಿಂದು ಉಳಿತು ಶಿಶುವಿಂದ ಹೋಯಿತು.
ಭಯ ಭಕ್ತಿಯಿಂದ ನಡೆದವರಿಗೆ ದೇವ ಬಲ ಹೆಚ್ಚತ್ತದೆ. ನಾ ಎಂಬ ಆಹಂಕಾರ ಇದ್ದವರಿಗೆ ಜೀವನದಲ್ಲಿ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶನಿವಾರ ಅಮಘೋಸಿದ್ಧೇಶ್ವರ ದೇವಸ್ಥಾನದಿಂದ ಬೆಳಗಿನ ಜಾವ 2ಗಂಟೆಗೆ ಹೊರಟ ಪಲ್ಲಕಿ ಮತ್ತು ಮಖಾಗಳು ಗ್ರಾಮದ ಮಾಳಿಂಗರಾಯ, ಹನುಮಾನ, ಮಲ್ಲಿಕಾರ್ಜುನ ಮಠ, ಸಂಗಮೇಶ್ವರ ಮಠ ಮತ್ತು ವಪ್ಪತ್ತೇಶ್ವರ ಮಠದ ಮೂಲಕ ಮೇರವಣಿಗೆಯೂ ಬಹು ಅದ್ದೂರಿಯಾಗಿ ಬೆಳಗಿನವರೆಗೆ ನಡೆಯಿತು. ಮೇರವಣಿಗೆಯಲ್ಲಿ ಡೋಳ ಕುಣಿತ, ಮಖಾಗಳ ಕುಣಿತ, ವಾದ್ಯ ವೈಭವ ನೋಡುಗರ ಗಮನ ಸೆಳೆಯಿತು.
ಉತ್ಸವದಲ್ಲಿ ಸಿದ್ಧಣ್ಣಾ ಪೂಜಾರಿ, ಯಲ್ಲಾಲಿಂಗ ಶಿರೂರ, ಸೂರ್ಯಕಾಂತ ಶ್ರೀಗಣಿ, ದತ್ತಾದತ್ರೆಯ ಶಿರೂರ, ಅಮೋಘಸಿದ್ಧ ಹೊನ್ನಗುಂಡೆ, ಸುಭಾಷ ಪೊಲೀಸ್ ಪಾಟೀಲ, ರೈತ ಸೂರ್ಯಕಾಂತ ರಾಮಜಿ, ಗ್ರಾಪಂ ಅಧ್ಯಕ್ಷ ಶ್ರೀಕಾಂತ ಕವಲಗಿ, ಉಪಾಧ್ಯಕ್ಷ ಪ್ರಭಾಕರ್ ಮಡ್ಡಿತೋಟ, ಪತ್ರಕರ್ತ ಅರ್ಜುನ ಬಂಡೆ, ದತ್ತಪ್ಪಾ ಖಂಡೇಕರ್, ಮಹಾದೇವ ಧುತ್ತರಗಿ, ಶಂಕರ ಬಿರಾದಾರ, ಸುಧಾಕರ್ ಖಂಡೇಕರ್ ಅನೇಕರು ಉಪಸ್ಥಿತರಿದ್ದರು.
ಹಡಲಗಿ, ಯಳಸಸಂಗಿ, ಸೇರಿದಂತೆ ನೆರೆ ಹೊರೆಯ ವಿವಿಧ ಭಾಗಗಳಿಂದ ಭಕ್ತಾದಿಗಳು ಎಂದಿನಂತೆ ಭಾಗವಹಿಸಿ ದರ್ಶನ ಪಡೆದುಕೊಂಡರು. ನಿಂಬರ್ಗಾ ಠಾಣೆ ಪಿಎಸ್‍ಐ ರೇಣುಕಾ ಸೂಕ್ತ ಪೊಲೀಸ ಬಂದೊಬಸ್ತ ಒದಗಿಸಿದರು.