ಹಿಟ್ಲರನ  ಸರ್ವಾಧಿಕಾರದ ವಿರುದ್ಧ ಚಾರ್ಲಿ ಚಾಪ್ಲಿನ್ ಭಾಷಣ.

0
289

ಈ ಭಾಷಣದ ಹೋಲಿಕೆ ಎಲ್ಲ ಸರ್ವಾಧಿಕಾರಿ ಗುಣವಿರುವವರಿಗೆ ಅನ್ವಯಿಸುತ್ತದೆ. 

” ಕ್ಷಮಿಸಿ! ನಾನು ಸರ್ವಾಧಿಕಾರಿಯಾಗಲು ಬಯಸಲಾರೆ, ಅದು ನನ್ನ ಕೆಲಸವೂ ಅಲ್ಲ. ನಾನು ಯಾರನ್ನೂ ಕೂಡಾ ಗೆಲ್ಲಲು ಅಥವಾ ಆಳಲು ಬಯಸುವುದಿಲ್ಲ. ಸಾಧ್ಯವಾದರೆ ನಾವು ಯಹೂದಿ, ನಾಝಿ, ಕರಿಯರು, ಬಿಳಿಯರು ಹೀಗೆ ಎಲ್ಲರಿಗೂ ಸಹಾಯ ಮಾಡುವಂತಾಗಬೇಕು. ಎಲ್ಲರೂ ಪರಸ್ಪರ ಸಹಾಯ ಮಾಡಿಕೊಳ್ಳಬೇಕು. ಮನುಷ್ಯರೆಂದರೆ ಹಾಗೆ. ನಾನು ಪರಸ್ಪರ ಸಂತೋಷದಿಂದ ಬದುಕಬೇಕೇ ಹೊರತು ಇತರರ ದುಃಖಕ್ಕಾಗಿ ಅಲ್ಲ.  ಯಾರನ್ನೂ ದ್ವೇಷಿಸಲೇ ಕೂಡದು. ಈ ಭೂಮಿಯಲ್ಲಿ ಎಲ್ಲರಿಗೂ ಜಾಗವಿದೆ.  ಮತ್ತೆ ಈ ಭೂಮಿಯು ಎಲ್ಲರ ಅಗತ್ಯಗಳನ್ನೂ ಪೂರೈಸುವಷ್ಟು ಸಮೃದ್ಧವಾಗಿದೆ.  ಜೀವನದ ಹಾದಿ ಸುಂದರವೂ ಮುಕ್ತವೂ ಆಗಿರಲು ಸಾಧ್ಯ. ಆದರೆ ನಾವು ಆ ಹಾದಿಯನ್ನೇ ಕಳೆದುಕೊಂಡಿದ್ದೇವೆ.

Contact Your\'s Advertisement; 9902492681

ಸ್ವಾರ್ಥವು ಮನುಷ್ಯನ ಆತ್ಮವನ್ನೇ ಕಲುಷಿತಗೊಳಿಸಿದೆ, ಜಗತ್ತನ್ನು ದ್ವೇಷವೆಂಬ ಬೇಲಿಯಿಂದ ಬಂಧಿಸಿದೆ, ದುಃಖ ಮತ್ತು ರಕ್ತಪಾತದೆಡೆಗೆ ಸಾಗಿಸುತ್ತಿದೆ. ನಾವು ವೇಗವನ್ನು ಅಭಿವೃದ್ಧಿಪಡಿಸಿದ್ದೇವೆ. ಆದರೆ ನಮ್ಮನ್ನು ನಾವು  ಬಂಧಿಸಿದ್ದೇವೆ.  ನಮ್ಮನ್ನು ಮುಕ್ತಗೊಳಿಸಿರುವ ಯಂತ್ರಗಳು ನಮ್ಮನ್ನು ಆಸೆಯ ಕೂಪದಲ್ಲಿರಿಸಿವೆ.  ಜ್ಞಾನವು ನಮ್ಮನ್ನು ಸಿನಿಕರನ್ನಾಗಿಸಿದೆ. ನಮ್ಮ ಜಾಣ್ಮೆಯು ಕಠಿಣವೂ ನಿರ್ದಯಿಯೂ ಆಗಿದೆ. ನಾವು ತುಂಬಾ ಯೋಚಿಸುತ್ತೇವೆ ಆದರೆ ಕಡಿಮೆ ಪ್ರೀತಿಸುತ್ತೇವೆ.

ಯಂತ್ರಗಳಿಗಿಂತ ನಮಗೆ ಹೆಚ್ಚು ಮಾನವೀಯತೆಯ ಅಗತ್ಯವಿದೆ. ಜಾಣ್ಮೆಗಿಂತ ಹೆಚ್ಚು ದಯೆ , ಸಭ್ಯತೆಯ ಅವಶ್ಯಕತೆಯಿದೆ. ಈ ಗುಣಗಳಿಲ್ಲದೆ ಹೋದರೆ, ಬದುಕು ಹಿಂಸಾಮಯವಾಗುವುದು ಮತ್ತು ವಿನಾಶವಾಗುವುದು. ವಿಮಾನ ಮತ್ತು ರೇಡಿಯೋಗಳು ನಮ್ಮನ್ನು ಹತ್ತಿರಕ್ಕೆ ತಂದಿವೆ. ಈ ಸಂಶೋಧನೆಗಳ ತಥ್ಯವೇ ಮನುಷ್ಯನ ಒಳ್ಳೆಯತನವನ್ನು ಕೂಗಿ ಹೇಳುತ್ತಿವೆ, ನಮ್ಮೆಲ್ಲರ ಸಹೋದರೆತೆಗಾಗಿ, ಒಗ್ಗಟ್ಟಿಗಾಗಿ ಮೊರೆಯಿಡುತ್ತಿದೆ.  ಈಗಲೂ ಸಹ ನನ್ನ ಧ್ವನಿಯು ಮಿಲಿಯಗಟ್ಟಲೆ ಜನರನ್ನು ತಲುಪುತ್ತಿದೆ. ನಿರ್ಗತಿಕ ಗಂಡಸರು, ಹೆಂಗಸರು, ಪುಟ್ಟ ಪುಟ್ಟ ಮಕ್ಕಳು – ವ್ಯವಸ್ಥೆಯ ಬಲಿ ಪಶುಗಳು,  ಮುಗ್ಧ ಜನರನ್ನು ಚಿತ್ರಹಿಂಸೆ ನೀಡಿ ಬಂಧನದಲ್ಲಿರಿಸುವ ವ್ಯವಸ್ಥೆ!

ಯಾರಿಗೆ ನನ್ನ ಮಾತುಗಳು ಕೇಳಿಸುತ್ತಿವೆಯೋ ಕೇಳಿರಿ. ಧೃತಿಗೆಡದಿರಿ ನಮ್ಮ ಮೇಲಿರುವ ಈ ವಿಷಾದ ಸ್ವಾರ್ಥ ಸಾಗುತ್ತಿರುವ ಈಹೊತ್ತು ಮಾನವ ಪ್ರಗತಿಯ ಬಗ್ಗೆ ಭಯ ಪಟ್ಟ ಮನುಷ್ಯರ ಕಹಿ ಭಾವನೆಗಳಿವು ಮಾನವ ದ್ವೇಷವು ಕೊನೆಗೊಳ್ಳಲಿದೆ. ಸರ್ವಾಧಿಕಾರಿಯ ಅಂತ್ಯವಾಗಲಿದೆ ಜನರ ಕೈಗಳಿಂದ ಕಿತ್ತುಕೊಂಡ ಅಧಿಕಾರವು ಮರಳಿ ಜನರ ಕೈಗಳಿಗೆ ಮರಳಲಿದೆ ಎಲ್ಲಿಯವರೆಗೆ ಮನುಷ್ಯರು ಸಾಯುತ್ತಿರುವರೋ ಸ್ವಾತಂತ್ರ್ಯವೆಂದೂ ನಾಶವಾಗದು…

ಸೈನಿಕರೇ! ನಿಮ್ಮತನವನ್ನು ದುಷ್ಟರಿಗೆ ಬಿಟ್ಟು ಕೊಡದಿರಿ. ನಿಮ್ಮನ್ನು ಶೋಷಿಸುವವರಿಗೆ ನಿಮ್ಮನ್ನು ದಾಸ್ಯಕ್ಕೆ ದೂಡಿದವರಿಗೆ ನಿಮ್ಮ ಬದುಕುಗಳನ್ನು ನಿಯಂತ್ರಿಸುವವರಿಗೆ ನೀವು ಯಾವುದನ್ನು ಯೋಚಿಸಬೇಕು ಯಾವುದನ್ನು ಪ್ರೀತಿಸಬೇಕು  ನಿಮ್ಮನ್ನು ದುಡಿಸಿದವರಿಗೆ ನಿಮ್ಮನ್ನು ಪಶುಗಳಂತೆ ನಡೆಸಿಕೊಂಡವರಿಗೆ ನಿಮ್ಮನ್ನು ಫಿರಂಗಿಗಳ ಮದ್ದಾಗಿ ಬಳಸಿದವರಿಗೆ ಮನುಷ್ಯರಲ್ಲದವರಿಗೆ

ನಿಮ್ಮತನವನ್ನು ಬಿಟ್ಟು ಕೊಡದಿರಿ ಯಾಂತ್ರಿಕ ಮನುಷ್ಯರಿಗೆ ಯಾಂತ್ರಿಕ ಮನಸ್ಸುಗಳಿಗೆ ಯಾಂತ್ರಿಕ ಹೃದಯಗಳಿಗೆ ನೀವು ತ್ರಗಳಲ್ಲ!

ನೀವು ದನಗಳಲ್ಲ!! ನೀವು ಮನುಷ್ಯರು!! ನಿಮ್ಮ ಹೃದಯದಲ್ಲಿ ಮಾನವತೆಯ ಪ್ರೇಮವಿದೆ! ನೀವು ದ್ವೇಷಿಸಲಾರಿರಿ! ಕೇವಲ ಪ್ರೀತಿಸಲ್ಪಡವನು ಮಾತ್ರ ದ್ವೇಷಿಸುತ್ತಾನೆ. ಪ್ರೀತಿಸಲ್ಪಡದ ಅಸಹಜ ವ್ಯಕ್ತಿ!! ಸೈನಿಕರೆ! ದಾಸ್ಯಕ್ಕಾಗಿ ಹೋರಾಡಬೇಡಿ!

ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿ! ಸಂತ ಲೂಕ ನ 17 ನೆಯ ಅಧ್ಯಾಯದಲ್ಲಿ ಹೀಗಿದೆ  ” ದೇವರ ಸಾಮ್ರಾಜ್ಯವು ಮಾನವನ ಹೃದಯದಲ್ಲಿದೆ” ಒಬ್ಬನ ಹೃದಯದಲ್ಲಲ್ಲ ಯಾವುದೋ ಗುಂಪಿನ ಹೃದಯದಲ್ಲಲ್ಲ ಎಲ್ಲರ ಹೃದಯದಲ್ಲಿಯೂ..

ನಿಮ್ಮ ಹೃದಯದಲ್ಲಿಯೂ ನಿಮ್ಮಲ್ಲಿ ಶಕ್ತಿಯಿದೆ ಯಂತ್ರಗಳನ್ನು ತಯಾರಿಸುವ ಶಕ್ತಿ ಸಂತೋಷಗಳನ್ನು ತಯಾರಿಸುವ ಶಕ್ತಿ ಈ ಬದುಕನ್ನು ಮುಕ್ತವೂ ಸುಂದರವೂ ಆಗಿಸುವ ಶಕ್ತಿ ನಿಮಗಿದೆ.

ಈ ಬದುಕನ್ನೊಂದು ಅದ್ಭುತ ಸಾಹಸವನ್ನಾಗಿಸಿ.

ಆಮೇಲೆ – ಪ್ರಜಾ ಪ್ರಭುತ್ವದ ಹೆಸರಿನಲ್ಲಿ ಆ ಶಕ್ತಿಯನ್ನು ಬಳಸೋಣ ಒಗ್ಗಟ್ಟಾಗೋಣ ಹೊಸ ವಿಶ್ವಕ್ಕಾಗಿ ಹೋರಾಡೋಣ.

ಸಭ್ಯ ಜಗತ್ತಿಗಾಗಿ…

ಎಲ್ಲಾ ಜನರಿಗೆ ಉದ್ಯೋಗ ನೀಡುವ  ಯುವ ಜನರಿಗೆ ಭವಿಷ್ಯವನ್ನೂ ವೃದ್ಧರಿಗೆ ರಕ್ಷಣೆಯನ್ನೂ ನೀಡುವ ಆ ಜಗತ್ತಿಗೋಸ್ಕರ!

ಈ ಸುಳ್ಳು ಆಶ್ವಾಸನೆಗಳ ಮೂಲಕವೇ ಭೃಷ್ಟರು ಅಧಿಕಾರಕ್ಕೆ ಬಂದಿದ್ದಾರೆ. ಅದು ಸುಳ್ಳು! ಅವರು ಆ ಆಶ್ವಾಸನೆಗಳನ್ನು ಈಡೇರಿಸಲಾರರು. ಎಂದೆಂದಿಗೂ!!

ಸರ್ವಾಧಿಕಾರಿಯು ತನ್ನನ್ನು ತಾನು ಮುಕ್ತಗೊಳಿಸಿ ಜನರನ್ನು ಗುಲಾಮರನ್ನಾಗಿಸುತ್ತಾನೆ. ನಾವು  ಆ  ಆಶ್ವಾಸನೆಗಳಿಗೋಸ್ಕರ ಹೋರಾಡೋಣ.

ಮುಕ್ತ ಜಗತ್ತಿಗೋಸ್ಕರ!

ರಾಷ್ಟ್ರಬಂಧಗಳ ವಿಮುಕ್ತಿಗೋಸ್ಕರ!!

ಸ್ವಾರ್ಥ, ದ್ವೇಷ, ಅಸಹನೆಗಳ  ಅಳಿವಿಗೋಸ್ಕರ!!

ವೈಚಾರಿಕ ಜಗತ್ತಿಗಾಗಿ ಹೋರಾಡೋಣ

ಎಲ್ಲಿ ವಿಜ್ಞಾನ ಮತ್ತು ಅಭಿವೃದ್ಧಿಯು ಎಲ್ಲಾ ಮನುಷ್ಯರ ಸಂತೋಷದೆಡೆಗೆ ಸಾಗಿಸುವುದೋ ಆ ಜಗತ್ತಿಗಾಗಿ

ಸಂಗಾತಿಗಳೇ ! ಪ್ರಜಾಪ್ರಭುತ್ವದ ಹೆಸರಿನಲ್ಲಿ ! ನಾವೆಲ್ಲರೂ ಒಂದಾಗೋಣ!

ಚಾರ್ಲಿ ಚಾಪ್ಲಿನ್  ನಟಿಸಿದ ‘ದ ಗ್ರೇಟ್ ಡಿಕ್ಟೇಟರ್’ ನ ಭಾಷಣ.
ಅನುವಾದ: ಪುನೀತ್ ಅಪ್ಪು

ಕೃಪೆ: ವಾಟ್ಸ್ ಪ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here