ವೇಗವಾಗಿ ಬೆಳೆಯುತ್ತಿರುವ ಗ್ರಂಥಾಲಯಗಳು

0
143

ಕಲಬುರಗಿ : ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಪ್ರಸ್ತುತ ದಿನಗಳಲ್ಲಿ ಗ್ರಂಥಾಲಯದ ಎಲ್ಲಾ ದೃಷ್ಟಿಕೋನವನ್ನು ಬದಲಾಯಿಸಿದೆ ಎಂದು ಮದ್ರಾಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ, ರಮೇಶ್ ಬಾಬು ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಡಾ. ಬಿ.ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವತಿಯಿಂದ ಆಯೋಜಿಸಿದ್ದ “21ನೇ ಶತಮಾನದ ಕೌಶಲ್ಯದಲ್ಲಿ ಗ್ರಂಥಾಲಯತ್ವದ ಅಸ್ತಿತ್ವ ಮತ್ತು ಕಾರ್ಯದಕ್ಷತೆ” ಕುರಿತು ಮೂರು ದಿನಗಳ ಕಾಲ ನಡೆಯುವ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನಗಳಲ್ಲಿ ತುಂಬಾ ತ್ವರಿತವಾದ ಬೆಳವಣಿಗೆಗಳು ಇಂದು ಕಾಣಬಹುದು ಮತ್ತು ಮನುಷ್ಯ ಜೀವನದಲ್ಲಿ ಹೇಗೆಲ್ಲ ಬದಲಾವಣೆ ಆಗಿವೆ ಅದೇ ರೀತಿಯಲ್ಲಿ ಗ್ರಂಥಾಲಯದಲ್ಲಿ ವ್ಯಾಪಕವಾದ ಬದಲಾವಣೆಗಳು ಕಾಣಬಹುದಾಗಿದೆ ಎಂದು ಅವರು ಹೇಳಿದರು.

Contact Your\'s Advertisement; 9902492681

ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಪ್ರೊ. ವಿ. ಟಿ ಕಾಂಬಳೆ ಮಾತನಾಡಿ ಗ್ರಂಥಾಲಯ ಬದಲಾವಣೆಗಳು ತುಂಬಾ ಕ್ರಾಂತಿಕಾರಿಯಾಗಿದ್ದು, ಅವುಗಳ ಹಿನ್ನೆಲೆಯಲ್ಲಿ ಸ್ಥಿರತೆಯನ್ನು ನಿರೀಕ್ಷಿಸುವುದು ವಾಸ್ತವಿಕವಾಗಿದೆ. ಮಾಹಿತಿ ಮತ್ತು ತಂತ್ರಜ್ಞಾನ ಎನ್ನುವುದು ಮಾಹಿತಿಯ ಕುಶಲತೆ ಮತ್ತು ಸಂವಹನಕ್ಕಾಗಿ ಎಲ್ಲಾ ತಂತ್ರಜ್ಞಾನಗಳನ್ನು ಒಳಗೊಂಡಿರುವ ದೊಡ್ಡ ಮಾಹಿತಿ ಕ್ಷೇತ್ರ ಗ್ರಂಥಾಲಯವಾಗಿದೆ ಎಂದು ಅವರು ತಿಳಿಸಿದರು.

ಸಮ್ಮೇಳನದ ನಿರ್ದೇಶಕ ಮತ್ತು ಗುಲ್ಬರ್ಗ ವಿವಿಯ ಗ್ರಂಥಪಾಲಕ ಡಾ. ಸುರೇಶ್ ಜಂಗೆ ಅವರು ಪ್ರಸ್ತಾವಿಕವಾಗಿ ಮಾತನಾಡಿ
ಇಂಟರ್ನೆಟ್ ಅನ್ನು ಸಂಪನ್ಮೂಲವಾಗಿ ಮತ್ತು ಗ್ರಂಥಾಲಯ ಮತ್ತು ಮಾಹಿತಿ ಸೇವೆಗಳನ್ನು ತಲುಪಿಸುವ ಸಾಧನವಾಗಿ ವ್ಯಾಪಕವಾಗಿ ಬಳಸಲಾಗಿದೆ. ತಂತ್ರಜ್ಞಾನದ ಆಗಮನದೊಂದಿಗೆ ಗ್ರಂಥಾಲಯಗಳು ಎಷ್ಟು ಬದಲಾಗಿವೆ ಎಂಬುದನ್ನು ಎತ್ತಿ ತೋರಿಸುವುದು ಈ ಸಮ್ಮೇಳನದ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ, ದಯಾನಂದ ಅಗಸರ್, ಕುಲಸಚಿವ ಡಾ. ಬಿ. ಶರಣಪ್ಪ
ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯ ವಿಭಾಗದ ಸಂಸ್ಥಾಪಕ ಪ್ರೊ, ಎಸ್. ಆರ್. ಗುಂಜಾಳ, ಎಸ್. ಎಲ್ ಸಂಗಮ ಕರ್ನಾಟಕ ವಿಶ್ವವಿದ್ಯಾಲಯದ ಧಾರವಾಡ, ಡಾ. ಬ್ರಬರ್ ಲೈಸೋನ್ ಅಧ್ಯಕ್ಷರು ಐಎಫ್ಎಲ್ಎ. ಪ್ರೊ, ಬಿ. ಡಿ ಕುಂಬಾರ ಕುಲಪತಿಗಳು ದಾವಣಗೆರೆ ವಿಶ್ವವಿದ್ಯಾಲಯ, ಡಾ. ಸತೀಶ್ ಕುಮಾರ್ ಹೊಸಮನಿ ನಿರ್ದೇಶಕರು ಸಾರ್ವಜನಿಕ ಗ್ರಂಥಾಲಯ ಬೆಂಗಳೂರು, ಇತರರು ಹಾಜರಿದ್ದರು
ಡಾ. ಪಿ. ಎಸ್ ಕಟ್ಟಿಮನಿ ನಿರೂಪಿಸಿದರು. ಡಾ. ಸಾವಿತ್ರಿ ಕೃಷ್ಣ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here