ಮುನುಷ್ಯನ ಬದುಕಿಗೆ ಗಾಳಿಯಂತೆ ಯೋಗ ಮುಖ್ಯ

0
13

ಶಹಾಬಾದ:ಬದುಕಿಗೆ ಆಹಾರ,ನೀರು ಹಾಗೂ ಗಾಳಿ ಎಷ್ಟು ಅವಶ್ಯಕವೋ, ಅಷ್ಟೇ ಜೀವನಕ್ಕೆ ಯೋಗ ಅಗತ್ಯ ಎಂದು ನಗರದ ಖ್ಯಾತ ವೈದ್ಯರಾದ ಡಾ.ವೀರಭದ್ರಪ್ಪ ಇಂಗಿನಶೆಟ್ಟಿ ಹೇಳಿದರು.

ಅವರು ನಗರದ ಶರಣಬಸವೇಶ್ವರ ಆವರಣದಲ್ಲಿ ಪತಂಜಲಿ ಯೋಗ ಸಮಿತಿ, ಬಿಜೆಪಿ ಮಂಡಲ ವತಿಯಿಂದ ಆಯೋಜಿಸಲಾದ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯ ಉದ್ಘಾಟಕರಾಗಿ ಮಾತನಾಡಿದರು.

Contact Your\'s Advertisement; 9902492681

ಯೋಗ ರೋಗಗಳನ್ನು ಹೊಡೆದೊಡಿಸಿ, ದೇಹದ ಆರೋಗ್ಯವನ್ನು ಕಾಪಾಡುವ ಸಾಧನ.ಎಲ್ಲದಕ್ಕಿಂತ ಹೆಚ್ಚಿನದಾಗಿ ಶಾಂತಿ ಹಾಗೂ ಸಹಬಾಳ್ವೆಯಿಂದ ಬದುಕುವುದನ್ನು ಕಲಿಸಿಕೊಡುತ್ತದೆ.ಚಿಕ್ಕ ವಯಸ್ಸಿನಿಂದಲೇ ಯೋಗ ಮಾಡಿದರೆ ಜೀವನದಲ್ಲಿ ಎಲ್ಲವನ್ನು ಸಾಧಿಸುವ ಸಾಮರ್ಥ್ಯ ಯೋಗ ನೀಡುತ್ತದೆ.ಆದರೆ ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ.ಮಕ್ಕಳು ಹೆತ್ತವರಿಗೆ ಹೆಗಲು ಕೊಡುವುದರ ಬದಲು , ಹೆತ್ತವರೇ ಮಕ್ಕಳಿಗೆ ಹೆಗಲು ಕೊಡುವಂಥ ಪರಿಸ್ಥಿತಿ ಬಂದೊದಗಿದೆ.ಕಾರಣ ಇಂದಿನ ಯುವಕರಲ್ಲಿ ಕಂಡು ಬರುವ ಜೀವನ ಮತ್ತು ಆಹಾರ ಶೈಲಿಯೇ ಕಾರಣ.ಆದ್ದರಿಂದ ಉತ್ತಮ ಆಹಾರ, ಸಾತ್ವಿಕ ಆಲೋಚನೆಗನ್ನು ಯೋಗ ಕಲಿಸಿಕೊಡುತ್ತದೆ. ಪ್ರಧಾನಿ ಮೋದಿಯವರು ಯೋಗಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆ ಬರುವಂಥ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಪತಂಜಲಿ ಯೋಗ ಸಮಿತಿಯ ಯೋಗ ಗುರುಗಳಾದ ಮೋಹನ ಘಂಟ್ಲಿ ಮಾತನಾಡಿ, ಪ್ರಾಚೀನ ಸಂಸ್ಕೃತಿ ಹಾಗೂ ಗುರುವಿನ ಸ್ಥಾನದಿಂದ ಹೆಸರುವಾಸಿಯಾಗಿದ್ದ ಭಾರತ ಇಂದು ಯೋಗ ದಿನಾಚರಣೆಯ ನಿರ್ಧಾರದಿಂದ ಭಾರತ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಯೋಗಕ್ಕೆ ವಯಸ್ಸಿನ್ ಮೀತಿಯಿಲ್ಲ.ಆದ್ದರಿಂದ ಮಕ್ಕಳು ಯೋಗ ದಿನನಿತ್ಯ ಮಾಡುವ ಅಭ್ಯಾಸ ಮಾಡಿಕೊಂಡರೆ ಏಕಾಗ್ರತೆ,ನೆನಪಿನ ಶಕ್ತಿ ಹೆಚ್ಚುತ್ತದೆ.ಅಲ್ಲದೇ ಅಭ್ಯಾಸದಲ್ಲೂ ಹೆಚ್ಚಿನ ಲಾಭ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಯೋಗ ಗುರು ದೀಪಾ ಮೆಂಗಜಿ ಮಾತನಾಡಿ, ದಿನನಿತ್ಯ ಯೋಗ ಮಾಡುವುದರಿಂದ ಮನುಷ್ಯನಿಗೆ ಯಾವುದೇ ರೀತಿಯ ಸಮಸ್ಯೆ ಬರಲಾರದು.ಒಂದು ವೇಳೆ ಬಂದರು ಅದು ಧೈರ್ಯದಿಂದ ಎದುರಿಸಿ ಮೆಟ್ಟಿ ನಿಲ್ಲುವ ಆತ್ಮವಿಶ್ವಾಸ ಯೋಗ ನೀಡುತ್ತದೆ ಎಂದು ಹೇಳಿದರು.
ಬಸವರಾಜ ಬಿರಾದಾರ,ಶ್ರೀಶೈಲಪ್ಪ ಅವಂಟಿ, ನಿಂಗಣ್ಣ ಹುಳಗೋಳಕರ್, ಸೂರ್ಯಕಾಂತ ವಾರದ, ಚನ್ನಪ್ಪ ಕುಂಬಾರ, ಗುರುಲಿಂಗಪ್ಪ ಚಟ್ಟಿ ,ದೇವದಾಸ ಜಾಧವ ,ಅಮರ್ರ ಕೋರೆ, ದೇವೇಂದ್ರಪ್ಪ ಯಲಗೂಡಕರ್, ನನ್ನಾವರೆ,ಅನುಪಮ ಜಗದಾಪ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here