ಹೆಚ್ಚುವರಿ ವೇತನ, ಮೊಬೈಲ್ ನೀಡಲು ಆಗ್ರಹಿಸಿ ಅಂಗನವಾಡಿಯ ಕಾರ್ಯಕರ್ತೆಯರ ಪ್ರತಿಭಟನೆ

0
14

ಶಹಾಬಾದ: ಅಂಗನವಾಡಿ ಕೇಂದ್ರಗಳಿಗೆ ಕರ್ತವ್ಯ ನಿರ್ವಹಿಸಲು ಕಳೆದ 4 ವರ್ಷಗಳ ಹಿಂದೆ ನೀಡಿದ್ದ ಸ್ಮಾರ್ಟ್ ಮೊಬೈಲ್‍ಗಳು ಸಮರ್ಪಕವಾಗಿ ಕೆಲಸ ನಿರ್ವಹಿಸದ ಕಾರಣ ರಾಜ್ಯದಾದ್ಯಂತ 63 ಸಾವಿರ ಅಂಗನವಾಡಿ ಕಾರ್ಯಕರ್ತರು ಸರ್ಕಾರ ತಮಗೆ ನೀಡಿರುವ ಮೊಬೈಲ್‍ಗಳನ್ನು ಸರ್ಕಾರಕ್ಕೆ ಜು,10 ರಂದು ತಾಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ತಮಗೆ ಇಲಾಖೆಯು ನೀಡಲಾಗಿರುವ ಮೊಬೈಲ್‍ಗಳನ್ನು ಶಿಶು ಅಭಿವೃದ್ದಿ ಯೋಜನಾ ಇಲಾಖೆಗೆ ವಾಪಸ. ದೇಶದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕನಿಷ್ಟ ವೇತನ ನಿಗದಿ ಮಾಡಿ ಜಾರಿಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ನೌಕರರ ಸಂಘದ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ (ಸಿಐಟಿಯು) ಶಹಾಬಾದ ರೈಲ್ವೆ ನಿಲ್ದಾಣದಿಂದ ಪ್ರಾರಂಭವಾದ ಪ್ರತಿಭಟನೆ ತಾಲೂಕಿನ ಶಿಶು ಅಭಿವೃದ್ಧಿ ಇಲಾಖೆ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಕಳಪೆ ಗುಣಮಟ್ಟದ ಮೊಬೈಲ್‍ಗಳನ್ನು ಪ್ರದರ್ಶಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಖಾಂತರ ಭಾರತದ ಪ್ರಧಾನ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

Contact Your\'s Advertisement; 9902492681

ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಸಾಬಮ್ಮ ಕಾಳಗಿ ಮತ್ತು ಕಾರ್ಯದರ್ಶಿ ಶೇಖಮ್ಮ ಕುರಿ ಅವರು ಮಾತನಾಡಿ, ಹೊಸ ಗುಣಮಟ್ಟದ ಮೊಬೈಲ್‍ಗಳ ವಿತರಿಸಬೇಕು. ಬಜೆಟ್‍ನಲ್ಲಿ ಹೆಚ್ಚಳವಾದ ಒಂದು ಸಾವಿರ ರೂ ಗೌರವಧನ ಬಿಡುಗಡೆ ಮಾಡಬೇಕು. ಇಎಸ್‍ಐ, ಪಿಎಫ್, ಪಿಂಚಣಿ, ಎಕ್ಸ್‍ಗ್ರೇಷಿಯಾ ಸೌಲಭ್ಯ ನೀಡಬೇಕು. 45 ಮತ್ತು 46ನೇ ಇಂಡಿಯನ್ ಲೇಬರ್ ಕಾನ್ಫರೆನ್ಸ್‍ಗಳ ಶಿಫಾರಸುಗಳನ್ನು ಜಾರಿಗೊಳಿಸಬೇಕು. ಸುಪ್ರೀಂಕೋರ್ಟ್ ನೀಡಿರುವ ಗ್ಯಾಚ್ಯುಟಿ ಕೊಡುವ ತೀರ್ಪನ್ನು ಕೂಡಲೇ ಜಾರಿಯಾಗಬೇಕು. ಭತ್ಯೆಗಳ ಪರಿಶೀಲನೆ ಮತ್ತು ನಿಗದಿಗಾಗಿ ಸಮಿತಿ ರಚಿಸಬೇಕು. ಏಕರೂಪದ ಸೇವಾ ನಿಯಮಗಳ ಕೂಡಲೇ ರೂಪಿಸಬೇಕು. ದೆಹಲಿಯಲ್ಲಿ ಸಂಘಟನೆ, ಮುಷ್ಕರ ಮಾಡಿದ ಕಾರಣಕ್ಕಾಗಿ ಕೆಲಸದಿಂದ ತೆಗೆದಿರುವ ಎಲ್ಲರನ್ನು ಮರು ನೇಮಕಾತಿ ಮಾಡಿಕೊಂಡು ಸಂಘಟನೆ, ಪ್ರತಿಭಟಿಸುವ ಹಕ್ಕು ಖಾತರಿಪಡಿಸಬೇಕು. ಹಂತಹಂತವಾಗಿ ಟ್ಯಾಬ್ಲೆಟ್‍ಗಳನ್ನು ನೀಡಬೇಕು. ಮೊಬೈಲ್‍ಗಳಲ್ಲಿ ಪ್ರಾದೇಶಿಕ ಭಾμÉಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು.

ಇನ್ನು ಪೆÇೀಷಣ್ ಅಭಿಯಾನಕ್ಕೆ ಆಧಾರ್ ಅಥವಾ ಫೆÇೀನ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ ಎಂಬ ಆದೇಶ ಹಿಂಪಡೆಯಬೇಕು. ಐಸಿಡಿಎಸ್‍ಯೇತರ ಮತ್ತು ಇತರೆ ಇಲಾಖೆಗಳ ಕೆಲಸವನ್ನು ನೀಡಬಾರದು. ಇಸಿಸಿಇ ಮತ್ತು ಐಸಿಡಿಎಸ್ ಗುಣಾತ್ಮಕ ಅನುμÁ್ಠನಕ್ಕಾಗಿ ಹಾಗೂ ಸಂಬಳ ಮತ್ತು ಸಾಮಾಜಿಕ ಭದ್ರತೆಗಾಗಿ ಸಾಕಷ್ಟು ಹಣ ಬಿಡುಗಡೆ ಮಾಡಬೇಕು. ಎನ್‍ಇಪಿ 2020 ಅನ್ನು ಹಿಂಪಡೆಯಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದರು.

ಈ ಪ್ರತಿಭಟನೆಯಲ್ಲಿ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here