ಮನುಷ್ಯನ ಆರೋಗ್ಯಕರ ಬದುಕಿಗೆ ಹಾಸ್ಯ ಅವಶ್ಯ

0
28

ಕಲಬುರಗಿ: ಇಂದು ಹಲವಾರು ಒತ್ತಡಗಳ ನಡುವೆ ಮನುಷ್ಯ ಯಾಂತ್ರಿಕವಾಗಿ ಬದುಕುವ ಸ್ಥಿತಿ ನರ‍್ಮಾಣವಾಗಿದೆ. ಹಾಗಾಗಿ ಹಾಸ್ಯ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಖ್ಯಾತ ಹಾಸ್ಯ ಸಾಹಿತಿ ಪ್ರಾಣೇಶ ಗಂಗಾವತಿ ತಿಳಿಸಿದರು.

ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಹಾಸ್ಯ ಪ್ರವೃತ್ತಿಯಿಂದ ಎಂತಹ ಒತ್ತಡದ ನಡುವೆಯೂ ನಿರಾಳವಾಗಿ ಜೀವಿಸಬಲ್ಲ.ಯಾವುದೇ ವ್ಯಕ್ತಿ ತನ್ನ ಶಾಲಾ,ಕಾಲೇಜು ಜೀವನದಲ್ಲಿ ಇಂತಹ ಶಿಬಿರದಲ್ಲಿ ಭಾಗವಹಿಸುವುದರ ಮೂಲಕ ತಮ್ಮ ವ್ಯಕ್ತಿತ್ವ ನರ‍್ಮಾಣ ಮಾಡಿಕೊಳ್ಳಬಹುದು ಎಂದು ಹೇಳಿದರು.

Contact Your\'s Advertisement; 9902492681

ಇನ್ನರ‍್ವ ಮುಖ್ಯ ಅತಿಥಿ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಮಾತನಾಡಿ, ಇಂತಹ ಕರ‍್ಯಕ್ರಮ ಆಯೋಜಿಸುವುದರಿಂದ ಮಕ್ಕಳು ಎಲ್ಲರ ಒಟ್ಟಿಗೆ ಬೆರೆತು ಬಾಳುವುದನ್ನ ಕಲಿತುಕೊಳ್ಳುತ್ತಾರೆ ಎಂದರು.

ಮತ್ತರ‍್ವ ಹಾಸ್ಯಗಾರರಾದ ಸ್ಥಳಿಯ ಕಲಾವಿದ ಗುಂಡಣ್ಣ ಡಿಗ್ಗಿ ಅವರು ವಿದ್ಯರ‍್ಥಿಗಳು,ಹಾಗೂ ನಾಗರಿಕರನ್ನು ತಮ್ಮ ಹಾಸ್ಯದ ಮಾತುಗಳಿಂದ ಮನಸೊರೆಗೊಂಡರು.

ಕರ‍್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ಆರ್.ಬಿ.ಕೊಂಡಾ ವಹಿಸಿಕೊಂಡಿದ್ದರು. ಕರ‍್ಯಕ್ರಮದಲ್ಲಿ ಎನ್ ಎಸ್ ಎಸ್ ಅಧಿಕಾರಿಗಳಾದ ಡಾ.ಮಹೇಶ ಗಂವ್ಹಾರ, ಡಾ.ರೇಣುಕಾ ಹಾಗರಗುಂಡಗಿ,ಡಾ.ಸುಷ್ಮಾ ಕುಲರ‍್ಣಿ,ಡಾ.ಮೋಹನರಾಜ ಪತ್ತಾರ. ಡಾ.ಪ್ರೇಮಚಂದ ಚವ್ಹಾಣ,ಉಪನ್ಯಾಸಕರಾದ ಸಂಗಮೇಶ,ಸಿದ್ದಲಿಂಗ ಬಿ. ಠಾಕುರ್, ಅಂಬಿಕಾ,ಪಲ್ಲವಿ ಮೊದಲಾದವರು ಭಾಗವಹಿಸಿದ್ದರು. ವಿಜಯಲಕ್ಷ್ಮಿ ಗುರುಸಿದ್ದಯ್ಯ ತಂಡದವರು ನರ‍್ವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here