ದೇವಪುರ:ಜೆಸ್ಕಾಂ ಕಚೇರಿಗೆ ಕರ್ನಾಟಕ ರಾಜ್ಯ ಬೇಡರ ಸಮಿತಿ ನೇತೃತ್ವದಲ್ಲಿ ಮುತ್ತಿಗೆ

0
9

ಸುರಪುರ: ತಾಲೂಕಿನ ದೇವಪುರ ಗ್ರಾಮದಲ್ಲಿನ ಜೆಸ್ಕಾಂ ಇಲಾಖೆಯ 110 ಕೆ.ಬಿ ಕಚೇರಿಗೆ ಕರ್ನಾಟಕ ರಾಜ್ಯ ಬೇಡರ ಸಮಿತಿ ಬೆಂಗಳೂರು ಸಂಘದ ನೇತೃತ್ವದಲ್ಲಿ ಅನೇಕ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಸಂಘದ ಕಾರ್ಯಾಧ್ಯಕ್ಷರಾದ ಗಂಗಾಧರ ನಾಯಕ ತಿಂಥಣಿ ಹಾಗೂ ರಾಜ್ಯ ಸಂಘದ ಕಾನೂನು ಸಲಹೆಗಾರರಾದ ಬಲಭೀಮ ನಾಯಕ ನ್ಯಾಯವಾದಿಗಳು ದೇವಪುರ್ ಹಾಗೂ ವಿವಿಧ ಸಂಘಟನೆಯ ಮುಖಂಡರು ಹಾಗೂ ತಿಂಥಣಿ ಮತ್ತು ದಾದಲಪುರ್ ಗ್ರಾಮದ ಭಾಗವಹಿಸಿದ್ದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕಚೇರಿ ಕಾರ್ಯನಿರ್ವಾಹಕ ಅಭಿಯಂತರರಿಗೆ ಧಿಕ್ಕಾರಗಳನ್ನು ಕೂಗಿ ದಾದಲಾಪುರ ಹಾಗೂ ತಿಂಥಣಿ ಗ್ರಾಮದ ರೈತರಿಗೆ ದೇವಪುರ ಕೆ ಬಿ ಯಿಂದ ಕರೆಂಟು ಸಪ್ಲೈ ಮಾಡಬೇಕು ಐಪಿ ಶಟ್ಟುಗಳಿಗೆ ಕನೆಕ್ಷನ್ ಕೊಡಬೇಕು ಎಂದು ಆಗ್ರಹಿಸಿ ಅಧಿಕಾರಿಗಳಿಗೆ ಘೋಷಣ ಕೂಗುವ ಮೂಲಕ ಒತ್ತಾಯ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ತಾಲೂಕ ಪಂಚಾಯಿತಿ ಸದಸ್ಯರಾದ ಮಲ್ಲಿಕಾರ್ಜುನ್ ಸಾಹುಕಾರ್ ಹಾಗೂ ಗ್ರಾಮ ಪಂಚಾಯತಿಯ ಸದಸ್ಯರಾದ ಬೈರಣ್ಣ ಅಂಬಿಗೆ ಹಾಗೂ ಕರ್ನಾಟಕ ರಾಜ್ಯ ಬೇಡರ ಸಮಿತಿಯ ಪದಾಧಿಕಾರಿಗಳಾದ ಗಂಗಾಧರ ನಾಯಕ್ ಹಾಗೂ ಬಲ ಭೀಮ ನಾಯಕ ನ್ಯಾಯವಾದಿಗಳು ದೇವಪುರ್ ಅಧಿಕಾರಿಗಳಿಗೆ ಆಗ್ರಹ ಮಾಡಿದರು.

ರೈತರು ಸುಮಾರು ದಿವಸದಿಂದ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಮಾತನಾಡಿದರೆ ಯಾವುದೇ ರೀತಿಯ ಸ್ಪಂದನೆ ಸಿಕ್ಕಿರುವುದಿಲ್ಲ ಮತ್ತು ಶಾಸಕರು ಕೂಡ ಹೇಳಿದ್ದಾರೆ ಮತ್ತು ವಿವಿಧ ಅಧಿಕಾರಿಗಳಿಗೆ ಕೂಡ ಮನವಿ ಕೊಟ್ಟರು ಯಾವುದೇ ಪ್ರಯೋಜನ ಆಗ್ತಾ ಇಲ್ಲ ಅದಕ್ಕಾಗಿ ರೊಚ್ಚಿಗೆದ್ದ ರೈತರು ದೇವಪೂರ 110 ಕೆವಿ ಆಫೀಸಿಗೆ ಆಗಮಿಸಿ ತಕ್ಷಣ ಕನೆಕ್ಷನ್ ಕೊಡಬೇಕು ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಶಾಖಾಧಿಕಾರಿಗಳು ಹಾಗೂ ಲೈನ್ ಮ್ಯಾನ್ ಗಳು ಆಗಮಿಸಿ ರೈತರ ರೈತರ ಕಷ್ಟಗಳನ್ನು ಕೇಳಿದರು ಮತ್ತು ಮೇಲಧಿಕಾರಿಗಳ ಗಮನಕ್ಕೆ ತಂದು ಕನೆಕ್ಷನ್ ಮಾಡುತ್ತೇನೆ ಎಂದು ಹೇಳಿದರು.

ಇದಕ್ಕೆ ಒಪ್ಪದ ರೈತರು ಆಗ ಸಂಘಟನೆ ಮುಖಂಡರು ಇಂದು ಈ ಕ್ಷಣವೇ ತಕ್ಷಣ ನಮ್ಮ ಐಪಿ ಸೆಟ್ಳಿಗೆ ಲೈನ್ ಕನೆಕ್ಷನ್ ಕೊಡಬೇಕು ಇಲ್ಲದಿದ್ದರೆ ನಾವು ನಿಮ್ಮ ಕಾರ್ಯಾಲಯದ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಪಟ್ಟು ಹಿಡಿದರು ಆದರೂ ಕೂಡ ಅಧಿಕಾರಿಗಳು ಸಮರ್ಪಕವಾಗಿ ಉತ್ತರ ಕೊಡದೆ ಹೋದರು ನಂತರ ನಿರಂತರವಾಗಿ ರೈತರು ಪ್ರತಿಭಟನೆ ನಡೆಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here