ಅರಗ ಜ್ಞಾನೇಂದ್ರರ ಬಂಧನಕ್ಕೆ ಸಿಪಿಐಎಂ ಆಗ್ರಹ

0
45

ಕಲಬುರಗಿ; ಬಿಜೆಪಿ ಮುಖಂಡ ಮಾಜಿ ಗೃಹ ಸಚಿವರಾದ ಅರಗ ಜ್ಞಾನೇಂದ್ರರ ಕಸ್ತೂರಿ ರಂಗನ್ ವರದಿಯ ವಿರುದ್ದ ಮಾತನಾಡುವಾಗ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ  ಕಾಡು ಬೆಳೆಸಲು ಗಮನ ನೀಡಲಿಲ್ಲವೆಂದು ಠೀಕಿಸುವ ಭರದಲ್ಲಿ ಈ ಪ್ರದೇಶದ ಜನರನ್ನು ಮತ್ತು ನಾಯಕರನ್ನು ಬಣ್ಣದ ಆಧಾರದಲ್ಲಿ ಅಪಮಾನಿಸುವ ವ್ಯಂಗ್ಯಭರಿತ ಮಾತುಗಳನ್ನಾಡಿದ್ದಾರೆ. ಇದೊಂದು ಜಾತಿ ತಾರತಮ್ಯದ ದುರಹಂಕಾರದ ದುರ್ವರ್ತನೆಯಾಗಿದೆ ಎಂದು  ಸಿಪಿಐಎಂ ಕಾರ್ಯದರ್ಶಿ ಕೆ ನೀಲಾ ಆಕ್ರೋಶ ವ್ಯಕ್ತಪಡಿಸಿ ಅಪಮಾನದ ಹಾಗೂ ವರ್ಣದ ಆಧಾರದಲ್ಲಿ ಕೀಳಾಗಿ ಕಾಣುವ ಈ ಜಾತಿ ತಾರತಮ್ಯದ ದುರಹಂಕಾರವನ್ನು ಬಲವಾಗಿ ಖಂಡಿಸುತ್ತದೆ. ರಾಜ್ಯ ಸರಕಾರ ಈ ಕೂಡಲೇ ಬಂಧನಕ್ಕೆ ಒಳಪಡಿಸಬೇಕೆಂದು ಆಗ್ರಹಿಸಿದ್ದಾರೆ.

ಅವರು ಕೇವಲ ಕೆಲ ನಾಯಕರನ್ನು ನಿಂದಿಸಿದ್ದು ಮಾತ್ರವಲ್ಲಾ, ಇಡೀ ಕಲ್ಯಾಣ ಕರ್ನಾಟಕದ ಜನತೆಯನ್ನು ಪ್ರತ್ಯಕ್ಷವಾಗಿ ಮತ್ತು ಜಗತ್ತಿನ ಎಲ್ಲ ಕಪ್ಪು ಬಣ್ಣದ ಜನತೆಯನ್ನು ಅಪ್ರತ್ಯಕ್ಷವಾಗಿ ಅಪಮಾನಿಸಿದ್ದಾರೆ. ಅರಗ ಜ್ಞಾನೇಂದ್ರ ರಾಜ್ಯ ಗೃಹ ಮಂತ್ರಿಗಳಾಗಿ ಕಾರ್ಯ ನಿರ್ವಹಿಸಿ, ದೇಶದ ಹಾಗೂ ರಾಜ್ಯದ ಕಾನೂನಿನ ಆಡಳಿತದ ನಿರ್ವಹಣೆ ಮಾಡಿದವರು. ಕಾನೂನಿನ ಮುಂದೆ ಎಲ್ಲರೂ ಸಮಾನರೆಂಬ ಭಾರತ ಸಂವಿಧಾನದ  ಆಶಯವನ್ನು ಓದಿಕೊಂಡವರು ಮಾತ್ರ. ವಾಸ್ತವದಲ್ಲಿ ತಮ್ಮ ಪಕ್ಷವಾದ ಬಿಜೆಪಿಯ ಮನುವಾದಿ ನೀತಿಯನ್ನೇ ನಂಬಿದವರಾಗಿದ್ದಾರೆ ಎಂಬುದಕ್ಕೆ ಅವರ ಹೇಳಿಕೆ ಸಾಕ್ಷಿಯಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅಸಮಧಾನ ಹೊರಹಾಕಿದ್ದಾರೆ.

Contact Your\'s Advertisement; 9902492681

ಸಂವಿಧಾನ ಮತ್ತು ಕಾನೂನಿನ ಆಡಳಿತಕ್ಕೆ ವ್ಯತಿರಿಕ್ತವಾಗಿ ಈ ರೀತಿ ಪದ ಬಳಕೆ ಮಾಡಿದ್ದಾರೆ. ಇದು ಅಕ್ಷಮ್ಯವಾಗಿದೆ ಅಪರಾಧವಾಗಿದೆ. ಇಂತಹ ನಿಲುವುಗಳು ಅವೈಜ್ಞಾನಿಕತೆಯಿಂದ ಕೂಡಿವೆ. ಅಪಾಯದಿಂದ ಕೂಡಿವೆ. ಇದು ಕನ್ನಡದ ನೆಲದ ವಿರೋಧಿ ನಿಲುವಾಗಿದೆ. ಮನುವಾದ, ಜಾತಿ ಹಾಗೂ ಲಿಂಗ ತಾರತಮ್ಯವನ್ನು ಉಳಿಸಿ ಬಲವಾಗಿ ಮುನ್ನಡೆಸಲು ಕಾರ್ಯ ನಿರ್ವಹಿಸುವ ಹಿಂದುತ್ವ ಕೋಮುವಾದಿ ಮೂಲದಿಂದ ಬಂದವರ ಬಾಯಿಂದ ನಿಂದನೆ ಮತ್ತು ಅಪಮಾನಗಳಿಲ್ಲದ ಮತ್ತೆಂತ ಮಾತುಗಳನ್ನು ನಿರೀಕ್ಷಿಸಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಜಾತಿ ಹಾಗೂ ಲಿಂಗ ಮತ್ತು ವರ್ಣ ತಾರತಮ್ಯದ ದುರಹಂಕಾರವನ್ನು ರಾಜ್ಯದ ಜನತೆ ಬಲವಾಗಿ ಪ್ರತಿರೋಧಿಸ ಬೇಕೆಂದು ಅವರು ಕರೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here