ಹಿಂದುಳಿದ ವರ್ಗಗಗಳಿಗೆ ನ್ಯಾಯ ಒದಗಿಸುವುದೇ ನಮ್ಮ ಸರ್ಕಾರದ ಗುರಿ: ಸಚಿವ ಶಿವರಾಜ ತಂಗಡಗಿ

0
10

ಬೆಂಗಳೂರು; ಹಿಂದುಳಿದ ವರ್ಗದವರ ಜೀವನ ಹಸನಾಗಿಸುವ ದೃಷ್ಟಿಯಿಂದ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿ, ಯೋಜನೆಗಳು ಅವರಿಗೆ ತಲುಪಿಸಿ ನ್ಯಾಯ ಒದಗಿಸುವುದು ನಮ್ಮ ಸರ್ಕಾರದ ಗುರಿಯಾಗಿದೆ ಎಂದು ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ ಅವರು ತಿಳಿಸಿದರು.

ಇಂದು ದೇವರಾಜ ಅರಸು ನಿಗಮದ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ನಿಗಮಗಳ ಮತ್ತು ಬ್ಯಾಂಕ್ ಆಫ್ ಬರೋಡದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ನಿಗಮಗಳಲ್ಲಿ ‘ವಿಶ್ವಾಸ್’ ತಂತ್ರಾಶದ ಮೂಲಕ ಸಾಲ ವಿತರಣೆ, ಮರು ಪಾವತಿ ತಂತ್ರಾಶದ ಉದ್ಘಾಟನೆ ಹಾಗೂ ಪಿಓಎಸ್ ಸಾಧನಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಜನರಿಗೆ ಅನುಷ್ಠಾನಗೊಳಿಸುವ ಯೋಜನೆಗಳ ಸಾಲ ವಿತರಣೆ-ಮರುಪಾವತಿ ನೇರವಾಗಿ ಜನರಿಗೆ ಮುಟ್ಟಬೇಕು. ಮಧ್ಯವರ್ತಿಗಳಿಗೆÀ ಅವಕಾಶ ನೀಡಬಾರದು ಎನ್ನುವ ಉದ್ದೇಶದಿಂದ ‘ವಿಶ್ವಾಸ್’ ತಂತ್ರಾಶವನ್ನು ಜಾರಿಗೊಳಿಸಲಾಗಿದೆ.

Contact Your\'s Advertisement; 9902492681

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವ್ಯಾಪ್ತಿಯಲ್ಲಿ ಪ್ರಸ್ತುತ 11 ನಿಗಮಗಳು ಕಾರ್ಯನಿರ್ವಹಿಸುತ್ತಿವೆ. ಇನ್ನೂ 11 ನಿಗಮಗಳನ್ನು ಸ್ಥಾಪಿಸಿ ಎಲ್ಲಾ ಹಿಂದುಳಿದ ವರ್ಗದ ಜನರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲು ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ ಜನರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಅನುμÁ್ಠನಗೊಳಿಸುವ ಸ್ವಯಂ ಉದ್ಯೋಗ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಶೈಕ್ಷಣಿಕ ಸಾಲ ಮತ್ತು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ ಯೋಜನೆ ಮತ್ತು ಆಯಾ ಸಮುದಾಯಕ್ಕೆ ಸಂಬಂಧಿಸಿದಂತೆ ಸಾಂಪ್ರದಾಯಿಕ ವೃತ್ತಿಗಳ ಕೌಶಲ್ಯತೆ ಹೆಚ್ಚಿಸಿಕೊಳ್ಳಲು ಆರ್ಥಿಕ ನೆರವು ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಅನುμÁ್ಠನಗೊಳಿಸುತ್ತಿವೆ.

ನಿಗಮಗಳ, ವಿವಿಧ ಸಾಲ ಯೋಜನೆಗಳಲ್ಲಿ ಮಂಜೂರು ಮಾಡಿರುವ ಸಾಲವನ್ನು ನಿಗದಿತ ಕಂತುಗಳನ್ವಯ ಆಸಲು ಮತ್ತು ಬಡ್ಡಿಯನ್ನು ಪಾವತಿಸಬೇಕಾಗಿರುತ್ತದೆ. ನಿಗಮದ ಅಧಿಕಾರಿಗಳು ಕ್ಷೇತ್ರಗಳಿಗೆ ಭೇಟಿ ನೀಡಿ ಮರುಪಾವತಿ ಕಂತುಗಳನ್ನು ಪಡೆದು ಬ್ಯಾಂಕಿಗೆ ಜಮಾ ಮಾಡಲು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿರುವ ಪಿಒಎಸ್ ಯಂತ್ರವನ್ನು ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಿತರಿಸಿದರು.

ನಿಗಮಗಳಿಂದ ಸಾಲ ಸೌಲಭ್ಯ ಪಡೆದ ಫಲಾನುಭವಿಗಳು ಸಾಲ ಮರುಪಾವತಿ ಮಾಡಲು ಬ್ಯಾಂಕ್ ಆಫ್ ಬರೋಡಾ ಇವರ ಸಹಯೋಗದೊಂದಿಗೆ ಪಿಒಎಸ್ ಯಂತ್ರವನ್ನು ನಿಗಮದ ಎಲ್ಲಾ ಸಹಾಯಕ ಅಭಿವೃದ್ಧಿ ಅಧಿಕಾರಿಗಳಿಗೆ ಸರಬರಾಜು ಮಾಡಲಾಗುವುದು. ಪಿಒಎಸ್ ಯಂತ್ರಕ್ಕೆ ವಿಶ್ವಾಸ್ ತಂತ್ರಾವನ್ನು ಅಳವಡಿಸಿ ಫಲಾನುಭವಿಗಳಿಂದ ಆನ್‍ಲೈನ್ ಅಥವಾ ನಗದು ಮೂಲಕ ಪಡೆಯಲಾದ ಮರುಪಾವತಿ ಮೊತ್ತವು ದುರ್ಬಳಕೆಯಾಗದೆ ನಿಗಮದ ಮರುಪಾವತಿ ಖಾತೆಗೆ ನೇರವಾಗಿ ಜಮಾ ಆಗುತ್ತದೆ. ತಂತ್ರಾಂಶದಿಂದ ಸಂಗ್ರಹಿಸಿದ ಮರುಪಾವತಿ ಹಾಗೂ ಉಳಿಕೆ ಸಾಲದ ಮೊತ್ತದ ವಿವರವನ್ನು ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಸಂದೇಶದ ಮೂಲಕ ತಕ್ಷಣವೇ ಮಾಹಿತಿ ತಲುಪಿಸುವುದು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ 10 ನಿಗಮಗಳಿಗೆ ಆಯಾ ಸಮುದಾಯದ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಅನುμÁ್ಠನಗೊಳಿಸಲು ರಾಜ್ಯ ಸರ್ಕಾರವು 2022-23ನೇ ಸಾಲಿಗೆ ರೂ. 10750 ಕೋಟಿಗಳನ್ನು ಒದಗಿಸಿದೆ. 2023-24ನೇ ಸಾಲಿಗೆ 6 ನಿಗಮಗಳಿಗೆ ರೂ.250 ಕೋಟಿಗಳನ್ನು ಆಯವ್ಯಯದಲ್ಲಿ ಒದಗಿಸಲಾಗಿರುತ್ತದೆ. ಇನ್ನು 04 ನಿಗಮಗಳಿಗೆ ಅನುದಾನವನ್ನು ಆರ್ಥಿಕ ಇಲಾಖೆಯಿಂದ ಹಂಚಿಕೆ ಮಾಡಲಾಗುತ್ತದೆ.

2022-23ನೇ ಸಾಲಿನಲ್ಲಿ ಒಟ್ಟಾರೆ 59,865 ಫಲಾನುಭವಿಗಳಿಗೆ ರೂ.459.06 ಕೋಟಿ ರೂ.ಗಳ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಸ್ವಯಂ ಉದ್ಯೋಗ ಸಾಲ ಯೋಜನೆಯಲ್ಲಿ 42,265 ಫಲಾನುಭವಿಗಳಿಗೆ ರೂ.212.32 ಕೋಟಿಗಳ ಸಾಲ ಮತ್ತು ಸಹಾಯಧನದ ನೆರವನ್ನು ಒದಗಿಸಲಾಗಿರುತ್ತದೆ. ಗಂಗಾ ಕಲ್ಯಾಣ ನೀರಾವರಿ ಯೋಜನೆಯಲ್ಲಿ 12,807 ಕೊಳವೆ ಬಾವಿಗಳನ್ನು ಕೊರೆಯಿಸಿ ನೀರಾವರಿ ಸೌಲಭ್ಯ ಒದಗಿಸಲು 9,064 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು, ಕೊಳವೆ ಬಾವಿ ಕೊರೆಯಿಸಲು ಕ್ರಮವಹಿಸಲಾಗಿದ್ದು, ರೂ.203,29 ಕೋಟಿಗಳನ್ನು ವೆಚ್ಚ ಮಾಡಲಾಗುತ್ತದೆ.

ಶೈಕ್ಷಣಿಕ ಸಾಲ ಯೋಜನೆಯಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಮುಂತಾದ ಉನ್ನತ ಕೋರ್ಸ್‍ಗಳಿಗೆ ಸಿ.ಇ.ಟಿ/ನೀಟ್ ಮೂಲಕ ಪ್ರವೇಶ ಪಡೆದು ವ್ಯಾಸಂಗ ಮಾಡಲು 3,358 ವಿದ್ಯಾರ್ಥಿಗಳಿಗೆ ರಿಯಾಯಿತಿ ಬಡ್ಡಿದರದಲ್ಲಿ ರೂ.29.43 ಕೋಟಿಗಳ ಸಾಲದ ನೆರವನ್ನು ಒದಗಿಸಲಾಗಿರುತ್ತದೆ. ವಿಶ್ವಕರ್ಮ, ಮಡಿವಾಳ, ಸವಿತಾ ಸಮಾಜದವರ ಸಾಂಪ್ರದಾಯಿಕ ವೃತ್ತಿ ಕೌಶಲ್ಯತೆಗಳನ್ನು ಹೆಚ್ಚಿಸಿಕೊಳ್ಳಲು 1,113 ಫಲಾನುಭವಿಗಳಿಗೆ ರೂ.6.55ಕೋಟಿ ರೂಗಳ ಆರ್ಥಿಕ ನೆರವು ಒದಗಿಸಲಾಗಿರುತ್ತದೆ.ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆಯಲ್ಲಿ ಕೌಶಲ್ಯಾಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಸರ್ಕಾರಿ ತರಬೇತಿ ಸಂಸ್ಥೆಗಳಾದ ಜಿಟಿಟಿಸಿ, ಕೆಜಿಟಿಟಿಐ, ಐಟಿಐ ಮತ್ತು ಎಟಿಡಿಸಿ ಗಳ ಮೂಲಕ 4,061 ಅಭ್ಯರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಒದಗಿಸಿ ಉದ್ಯೋಗಿಮುಖಿಗಳನ್ನಾಗಿಸಲು ಕ್ರಮವಹಿಸಲಾಗಿರುತ್ತದೆ. ಅರಿವು ಶೈಕ್ಷಣಿಕ ಯೋಜನೆಯಡಿ 1 ಕೋಟಿ 21 ಲಕ್ಷ ಬಿಡುಗಡೆ ಮಾಡಿ 138 ಫಲಾನುಭವಿಗಳಿಗೆ ತಲುಪಿಸಲಾಗಿದೆ.

ವಿದೇಶದಲ್ಲಿ ಉನ್ನತ ಶಿಕ್ಷಣ ಕೈಗೊಳ್ಳುವ ಮಕ್ಕಳಿಗೆ ಸಾಲ ಮಂಜೂರು ಮಾಡಲಾಗುವುದು. ಕೊಳವೆ ಬಾವಿ ಕೊರೆಸಿದವರಿಗೆ ರೂ. 3 ರಿಂದ 3.50 ಲಕ್ಷದವರೆಗೆ ಸಾಲದ ನೆರವನ್ನು ಒಮಗಿಸಲಾಗುವುದು. ಹಿಂದುಳಿದ ವರ್ಗದವರು ವಿದ್ಯಾಭ್ಯಾಸ ಮಾಡುತ್ತಿರುವ ಹಾಸ್ಟೆಲ್‍ಗಳ ಗುಣಮಟ್ಟ ಕಾಯ್ದುಕೊಳ್ಳಲು ಪಾರದರ್ಶಕವಾಗಿ ಕ್ರಮವಹಿಸಲಾಗುವುದು. ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ಹಿಂದುಳಿದ ವರ್ಗದ ಸಮುದಾಯದವರಿಗೆ ಸರ್ಕಾರದ ಎಲ್ಲಾ ಯೋಜನೆಗಳು ತಲುಪಲು ನಿಗಮದ ಎಲ್ಲಾ ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಲು ಮುಂದಾಗಿ ಇಲಾಖೆಗೆ ಹಾಗೂ ಸರ್ಕಾರಕ್ಕೆ ಹೆಸರು ತರಲು ಶ್ರಮಿಸಬೇಕು ಎಂದು ಅಧಿಕಾರಿ ವರ್ಗದವರಿಗೆ ಮಾನ್ಯ ಸಚಿವರು ಕರೆ ನೀಡಿದರು.

ಸಮಾರಂಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ತುಳಸಿ ಮದ್ದಿನೇನಿ, ದೇವರಾಜು ಅರಸು ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಕಾಂತರಾಜು, ಬ್ಯಾಂಕ್ ಆಫ್ ಬರೋಡಾದ ಮಹಾ ಪ್ರಬಂಧಕರಾದ ದೇವಬ್ರತದಾಸ್, ಉಪ ಮಹಾಪ್ರಬಂಧಕ ಪ್ರವೀಣ್ ಕುಮಾರ್ ಸಿಂಗ್, ಸಚಿವರ ಆಪ್ತ ಕಾರ್ಯದರ್ಶಿಗಳಾದ ಮಧುಸೂದನ್ ರೆಡ್ಡಿ ಸೇರಿದಂತೆ, ವಿವಿಧ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರುಗಳು ಹಾಗೂ ವಿವಿಧ ಜಿಲ್ಲೆಗಳ ನಿಗಮ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here