ಸುರಪುರ: ಬಸವೇಶ್ವರ ಪಿ.ಯು ಕಾಲೇಜ್ ಶೈಕ್ಷಣಿಕ ಚಟುವಟೆಕೆ ಉದ್ಘಾಟನೆ

0
9

ಸುರಪುರ: ನಗರದ ರಂಗಂಪೇಟೆಯ ಬಸವೇಶ್ವರ ಪಿ.ಯು ಕಾಲೇಜಿನಲ್ಲಿ ಪಿ.ಯು.ಸಿ ಪ್ರಥಮ ವರ್ಷ ವಿಧ್ಯಾರ್ಥಿಗಳ ಸ್ವಾಗತ ಹಾಗೂ ಪ್ರಸಕ್ತ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭನಡೆಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ರಂಗಂಪೇಟೆ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸೂಗುರೇಶ ವಾರದ ಮಾತನಾಡಿ, ವಿಧ್ಯಾರ್ಥಿಗಳು ಶಿಕ್ಷಣ ಕಲಿಯುವುದರ ಜೊತೆಗೆ ಸಂಸ್ಕಾರ ಪಡೆಯುವುದು ಅತ್ಯಂತ ಅವಶ್ಯವಾಗಿದೆ ಶಿಕ್ಷಣ ಎಂಬುವುದು ಬರಿ ನೌಕರಿಗಾಗಿ ಕಲಿಯುವುದು ಮಾತ್ರವಲ್ಲ, ಶಿಕ್ಷಣದಿಂದ ಸಮಾಜದಲ್ಲಿ ಬದುಕುವ ಚಿಂತನೆ ಕಲೆಯಬೇಕು ಹಾಗೂ ಶಿಕ್ಷಕರು ವಿಧ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ನಾಡು, ನುಡಿ, ಭಾಷ ಪ್ರೇಮದ ಜೊತೆಗೆ ದೇಶಪ್ರೇಮದ ಕಲ್ಪನೆ ಮೂಡಿಸುವುದು ಅತ್ಯಂತ ಅವಶ್ಯವಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ರಂಗಂಪೇಟ ಅಂಬೇಡ್ಕರ್ ಮಹಾವಿದ್ಯಾಲಯದ ಪ್ರಾಚಾರ್ಯ ನಾಗಣ್ಣ ಪೂಜಾರಿ, ವಿಧ್ಯಾರ್ಥಿಗಳಿಗೆ ಉತ್ತಮವಾದ ನಂಬಿಕೆ, ಆತ್ಮ ವಿಶ್ವಾಸ, ಶ್ರದ್ಧೆ, ದೃಢನಿರ್ಧಾರ, ಸಾದನೆಯ ಛಲ, ಉತ್ತಮ ಗುರಿ ಉದ್ಧೆಶ ಇವುಗಳನ್ನು ಹೊಂದಿದ್ದರೆಮಾತ್ರ ಬದುಕಿನಲ್ಲಿ ಏನಾದರು ಸಾಧಿಸಲು ಸಾಧ್ಯಾವಾಗುತ್ತದೆ. ಸಾದನೆ ಎಂಬುವುದು ಸಾಧಕನ ಕೈವಶ ಅದರ ಸದ್ಬಳಕೆ ಸಾಧಕರಿಂದಾಗಬೇಕು ಎಂದು ಹೇಳಿದರು.

ಇನ್ನೊರ್ವ ಅತಿಥಿಗಳಾಗಿದ್ದ ಪ್ರೀಯದರ್ಶಿನಿ ಮಹಾವಿದ್ಯಾಲಯದ ಪ್ರಾಚಾರ್ಯ ನಿಂಗಣ್ಣ ಹೆಗ್ಗಣದೊಡ್ಡಿ ಮಾತನಾಡಿ, ನಮ್ಮ ಭಾಗದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವ ಬೆಂಗಳೂರು, ಮೈಸೂರು ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ದೆಯೊಡ್ಡಬೇಕು ಎಂದು ಹೇಳಿದರು. ಸಂಸ್ಥೆಯ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಕಾಲೇಜಿನ ಪ್ರಾಚಾರ್ಯ ವಿರೇಶ ಹಳಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಕಾರ್ಯಕ್ರಮವನ್ನು ಶೃತಿ ಹಿರೇಮಠ ನಿರೂಪಿಸಿದರು, ಬಲಭೀಮ ಪಾಟೀಲ್ ಸ್ವಾಗತಿಸಿದರು, ಮಾನಯ್ಯ ರುಕ್ಮಾಪೂರ ವಂದಿಸಿದರು, ಪ್ರಮುಖರಾದ ಶ್ರೀಕಾಂತ ರತ್ತಾಳ, ರುದ್ರಪ್ಪ ಕೆಂಭಾವಿ, ವೆಂಕಟೇಶ ದೇವಿಕೇರಾ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here