ಸುರಪುರ: ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ ಪವಮಾನ ಹೋಮ

0
11

ಸುರಪುರ: ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ತಾಲೂಕು ಘಟಕದ ವತಿಯಿಂದ ಲೋಕ ಕಲ್ಯಾಣಾರ್ಥ ನಗರದ ಲಕ್ಷ್ಮೀನರಸಿಂಹದೇವರ ಗುಡಿಯಲ್ಲಿ ಅಧಿಕಮಾಸದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಪವಮಾನ ಹೋಮ ಹಾಗೂ ಪಾರಾಯಣ ಕಾರ್ಯಕ್ರಮದ

ಕಾರ್ಯಕ್ರಮದ ನೇತೃತ್ವವಹಿಸಿದ್ದ ಪಂಡಿತರಾದ ನಾರಾಯಣಾಚಾರ್ಯ ಐಜಿ ಅವರು ಮಾತನಾಡಿ, ಶಾಸ್ತ್ರ ಪುರಾಣಗಳಲ್ಲಿ ಹೇಳಿರುವಂತೆ “ಅಧಿಕಸ್ಯ ಅಧಿಕ ಫಲಂ” ಸಾಕ್ಷಾತ ಪರಮಾತ್ಮನು ನಿಯಮಕನಾಗಿರುವ ಅಧಿಕ ಮಾಸವು ಶ್ರೇಷ್ಠ ಮಾಸವಾಗಿದ್ದು ಕಾರಣ ಅಧಿಕ ಮಾಸದಲ್ಲಿ ನಾವು ಭಗವಂತನಿಗೆ ಸಲ್ಲಿಸುವ ಯಾವುದೇ ಸೇವೆಯಿಂದ ಅನಂತ ಫಲ ಪ್ರಾಪ್ತಿಯಾಗುವುದು. ಅಧಿಕ ಮಾಸದಲ್ಲಿ ಇಂತಹ ಜ್ಞಾನಸತ್ರ ಕಾರ್ಯಕ್ರಮಗಳನ್ನು ಕೈಗೊಳ್ಳುಳ್ಳು ಪ್ರಯತ್ನ ಕೂಡಾ ಬಹಳ ಮುಖ್ಯ ಎಂದ ಅವರು ಅಧಿಕ ಮಾಸದಲ್ಲಿ ನೆರವೇರಿಸುವ ಜ್ಞಾನಸತ್ರ ಕಾರ್ಯಗಳು ಭಗವಂತನ ಅನುಗ್ರಹಕ್ಕೆ ಪಾತ್ರರಾಗಿ ಹೆಚ್ಚಿನ ಫಲ ತಂದು ಕೊಡುತ್ತದೆ ಎಂದ ಅವರು ಹೇಳಿದರು.

Contact Your\'s Advertisement; 9902492681

ಬ್ರಾಹ್ಮಣರಾಗಿ ಹುಟ್ಟಿರುವ ನಾವು ಬ್ರಾಹ್ಮಣರಾಗಿ ಜೀವನ ಮಾಡಬೇಕು ಪ್ರಾಣಿಗಳನ್ನು ಕೊಂದರೆ ಮಾತ್ರ ಹಿಂಸೆಯಲ್ಲ ನಮ್ಮ ಗುರುಗಳಾದ ಮಧ್ವಚಾರ್ಯರು ಹೇಳಿರುವಂತೆ ನಮ್ಮ ಜೀವನದಲ್ಲಿ ಸಜ್ಜನರ ಮನಸ್ಸನ್ನು ನೋಯಿಸಿದರೆ ಅದು ಕೂಡಾ ಹಿಂಸೆ ಎಂದು ಹೇಳಿದ್ದಾರೆ ನಮ್ಮ ಜೀವನದಲ್ಲಿ ಯಾರ ಮನಸ್ಸನ್ನು ನೋಯಿಸದೇ ಬದುಕಬೇಕು ದುಷ್ಟರ ಮನೆಗೆ ಹೋಗಿ ಏನನ್ನೂ ಕೇಳಬಾರದು ಹಾಗೂ ಭಗವಂತನು ನಮಗೆ ನೀಡಿದ್ದರಲ್ಲಿ ತೃಪ್ತಿಯಿಂದ ಬದುಕಬೇಕು ಪರಮಾತ್ಮನ ಇಚ್ಛೆಯಿಂದ ನಮಗೆ ಕೊಟ್ಟಿದ್ದನ್ನು ನಾವು ಸ್ವೀಕರಿಸಬೇಕು ನಮಗೆ ಸ್ವಲ್ಪವೇ ಕೊಟ್ಟಿದ್ದರೂ ನಮಗೆ ಬಹಳಷ್ಟು ಕೊಟ್ಟಿದ್ದಾನೆ ಎಂಬ ತೃಪ್ತಿಯಿಂದ ಇರಬೇಕು ಎಂದು ಅವರು ಹೇಳಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್‍ನ ಜಿಲ್ಲಾಧ್ಯಕ್ಷ ಭೀಮಶೇನಾಚಾರ್ಯ ಜೋಷಿ ಮಂಗಳೂರು ಮಾತನಾಡಿ ಅಧಿಕಮಾಸದ ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ಪವಮಾನ ಹೋಮ ಹಮ್ಮಿಕೊಳ್ಳಲಾಗಿದ್ದು ಈ ಕಾಲದಲ್ಲಿ ಆಚರಿಸುವ ಜಪ, ಪಾರಾಯಣ, ಪೂಜೆ, ಹೋಮ ಇತ್ಯಾದಿ ಕರ್ಮಗಳು ಪುಣ್ಯಕಾರಿ ಕಾರ್ಯಗಳಾಗಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬೆಳಿಗ್ಗೆ ಭಗವದ್ಗೀತೆ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣ ಮದ್ಯಾಹ್ನ ಮಹಿಳೆಯರಿಂದ ಲಕ್ಷ್ಮೀ ಶೋಭಾನ ಪಾರಾಯಣ ನಡೆದವು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯ ಗಣೇಶ ಜಾಗೀರದಾರ ಅಲಂಪುರ ಹಾಗೂ ಅರ್ಚಕರ ಮತ್ತು ಪುರೋಹಿತರ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಶ್ರೀಪಾದಭಟ್ ಗಡ್ಡದ ಅವರನ್ನು ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.

ಪುರೋಹಿತರಾದ ಗಂಗಾಧರ ಜೋಷಿ ಕೊಡೇಕಲ್ ಹಾಗೂ ಮಾಧವಾಚಾರ್ಯ ಪಾಲ್ಮೂರ ಪೌರೋಹಿತ್ಯದಲ್ಲಿ ಪವಮಾನ ಹೋಮ ಕಾರ್ಯಕ್ರಮಗಳು ನೆರವೇರಿಸಲಾಯಿತು, ಪ್ರಮುಖರಾದ ಕೃಷ್ಣಭಟ್ ಜೋಷಿ, ರಘುನಾಥಾಚಾರ್ಯ ರಾಜರುಗು, ಶ್ರೀಹರಿರಾದ ಆದವಾನಿ,ಶ್ರೀನಿವಾಸಾಚಾರ್ಯ ಗುಡಿ,ಕೃಷ್ಣಾಚಾರ್ಯ ದೇವರು, ಗುರುರಾಜ ಪಾಲ್ಮೂರ,ನರಸಿಂಹ ಭಂಡಿ, ಶ್ರೀನಿವಾಸಾಚಾರ್ಯ ಪ್ರತಿನಿಧಿ, ಮಲ್ಲಾರಾವ ಸಿಂದಗೇರಿ,ಪ್ರಾಣೇಶರಾವ ಬೋನಾಳ, ನಾಗರಾಜ ಪಾಲ್ಮೂರ, ಲಕ್ಷ್ಮೀಕಾಂತ ಅಮ್ಮಾಪುರ,ಚಂದ್ರಕಾಂತ ನಾಡಗೌಡ,ರಮೇಶ ಗೆದ್ದಲಮರಿ,ವೆಂಕಟೇಶಚಾರ್ಯ ಕುರಿಹಾಳ,ಶ್ರೀನಿವಾಸ ದೇವಡಿ,ವೆಂಕಟೇಶ ರಾಯನಪಾಳ್ಯ,ಕೃಷ್ಣಮೂರ್ತಿ ಭಂಡಿ, ಪ್ರಲ್ಹಾದ ದಿಕ್ಷೀತ, ಶ್ರೀನಿವಾಸ ಸಿಂದಗೇರಿ,ವೆಂಕಟೇಶ ಅರಳಹಳ್ಳಿ, ಅಣ್ಣಯ್ಯಶಾಸ್ತ್ರಿ, ರಾಘವೇಂದ್ರ ಭಕ್ರಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here