ಅಲೆಮಾರಿಗಳಿಗೆ ಆಸರೆಯಾಗಿ ಅರಿವು ಮೂಡಿಸುವ ಕಾರ್ಯ ಶ್ಲಾಘನೀಯ; ಪಿ.ಎಸ್.ಐ ನಂದಿನಿ

0
8

ಚಿಂಚೋಳಿ; ತಾನಾಯಿತು ತನ್ನ ಹೆಂಡರ ಮಕ್ಕಳ ಹೊಟ್ಟೆ ಬಟ್ಟೆಗಿದ್ದರೆ ಸಾಕು ಎನ್ನುವಂತ ಪ್ರಸ್ತುತ ದಿನಮಾನಗಳಲ್ಲಿ ನೆಲೆಯಿಲ್ಲದೆ ಅಲೆದಾಡುವ ಅಲೆಮಾರಿ ಆದಿವಾಸಿ ಕುಟುಂಬಗಳಿಗೆ ಆಸರೆಯಾಗಿ ಅರಿವು ಮೂಡಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಸುಲೇಪೇಟ ಗ್ರಾಮದಲ್ಲಿ ಬಾಂಸೆಫ ಮತ್ತು ಯೂನಿಟಿ ಆಫ್ ಮೂಲನಿವಾಸಿ ಬಹುಜನ ಸಂಘಟನೆ ವತಿಯಿಂದ ಹಮ್ಮಿಕೊಂಡ ವಿಶ್ವ ಆದಿವಾಸಿ ಬುಡಕಟ್ಟು ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಮಾತನಾಡಿದ ಸುಲೇಪೇಟ ಪೋಲಿಸ್ ಠಾಣೆಯ ಆರಕ್ಷಕ ಉಪನೀರಿಕ್ಷಕರಾದ ನಂದಿನಿ ರವರು ಮುಂದುವರೆದು ಭಾರತೀಯ ಸಂವಿಧಾನದ ಅಡಿಯಲ್ಲಿ ಅಲೆಮಾರಿ ಆದಿವಾಸಿ ಬುಡಕಟ್ಟು ಜನಾಂಗದವರಿಗೆ ಸಾಕಷ್ಟು ಸೌಲಭ್ಯಗಳಿದ್ದು ಅವುಗಳನ್ನು ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಹೇಳಿದರು.

Contact Your\'s Advertisement; 9902492681

ನಂತರ ಮಾತನಾಡಿದ ಮಾರುತಿ ಗಂಜಗಿರಿರವರು ಪ್ರಪ್ರಥಮವಾಗಿ ಭಾರತ ದೇಶದಲ್ಲಿ ಗಣವ್ಯವಸ್ಥೆ ಪರಿಕಲ್ಪನೆಯನ್ನು ಹುಟ್ಟುಹಾಕಿದ ಕಿರ್ತಿ ಆದಿವಾಸಿ ಬುಡಕಟ್ಟು ಜನಾಂಗಕ್ಕೆ ಸಲ್ಲುತ್ತದೆ ಅಲೆಮಾರಿ ಜನಾಂಗದ ಕಲ್ಯಾಣಕ್ಕಾಗಿ ಹಗಲಿರುಳೆನ್ನದೆ ಹೋರಾಟ ಮಾಡಿದ ಬಿರ್ಸಾಮುಂಡನ ಇತಿಹಾಸ ಅರಿಯುವುದು ಅನಿವಾರ್ಯವಾಗಿದೆ ಸ್ವತಂತ್ರ ಭಾರತದಲ್ಲಿ ಸುಮಾರು ಕೋಟಿಗಟ್ಟಲೆ ಆದಿವಾಸಿ ಬುಡಕಟ್ಟು ಜನರಿಗೆ ಬದುಕು ನಡೆಸುವುದು ದುಸ್ತರವಾಗಿದೆ ಸುಮಾರು ಮೂವತ್ತು ಕೋಟಿ ಆದಿವಾಸಿ ಜನರು ಆಧಾರ್ ಕಾರ್ಡ್ ರೇಷನ್ ಕಾರ್ಡ್ ಇಲ್ಲದೆ ಪರದಾಡುವ ಪರಿಸ್ಥಿತಿ ಬಂದಿದೆ ಸರ್ಕಾರ ಮುತುವರ್ಜಿ ವಹಿಸಿ ಅವರಿಗೆ ಅನುಕೂಲ ಮಾಡಿಕೊಡುವಲ್ಲಿ ಕಾರ್ಯಪ್ರವೃತ್ತವಾಗಬೇಕೆಂದರು.

ಮುಖ್ಯ ಅತಿಥಿಗಳಾಗಿ ಗ್ರಾಂ ಪಂಚಾಯಿತಿ ಅದ್ಯಕ್ಷರಾದ ಸಂತೋಷ ರಾಠೋಠ, ರಜಾಕ ಪಟೇಲ್, ಸಿರಾಜ ಕುಪನೂರ, ರೇವಣಸಿದ್ದಪ್ಪ ಸುಭೆದಾರ, ಬಿಚ್ಚಪ್ಪ ಭಜಂತ್ರಿ, ಗೋಪಾಲ ಗಾರಂಪಳ್ಳಿ, ಹಾಫೀಜ, ಸರ್ದಾರ್, ಮೌನೇಶ್ ಗಾರಂಪಳ್ಳಿ, ಸಾಗರ ಹೋಸಳ್ಳಿ, ಹರ್ಷವರ್ಧನ ಚಿಮ್ಮನಕಟ್ಟಿ, ಗಮ್ಮು ರಾಠೋಡ, ಸುಭಾಷ್ ತಾಡಪಳ್ಳಿ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here