ಪ್ರಥಮ ಶುಕ್ಲಯಜುರ್ವೇದ ‘ಕಣ್ವ ಶಾಖೆ’ ಕಂಠಸ್ಥ ಘನ ಪಾರಾಯಣ & ವೈದಿಕ ಸಮ್ಮೇಳನ

0
9
  • ನೀವಿರುವಲ್ಲಿ ಕಣ್ವ ಪರಿಷತ್: ರಾಷ್ಟ್ರಾಧ್ಯಕ್ಷ ಶ್ರೀಮನೋಹರ ಮಾಡಿಗೇರಿ
  • ಹೈದರಾಬಾದಿನಲ್ಲಿ ಕಣ್ವ ಶಾಖೆಯ ವೈದಿಕ ಸಮ್ಮೇಳನ.
  • ಕರ್ನಾಟಕದಲ್ಲಿ ಪರಿಷತ್ತಿನ ಚಟುವಟಿಕೆಗಳನ್ನು ಚುರುಕುಗೊಳಿಸಲಾಗಿದೆ – ರಾಜ್ಯಾಧ್ಯಕ್ಷ ವಿ.ಕಿಶನರಾವ್ ಕುಲಕರ್ಣಿ
  • ಶ್ರೀಮತ್ಕಣ್ವಮಠ ಆಡಳಿತಾಭಿವೃದ್ಧಿ ಟ್ರಸ್ಟ್ ವತಿಯಿಂದ ಘನಪಾಠಿ ವೇದಬ್ರಹ್ಮಶ್ರೀ ಅನಿರುದ್ಧ ಕುಲಕರ್ಣಿ ಅವರಿಗೆ ಸನ್ಮಾನ

ಕಲಬುರಗಿ: ಅಖಿಲ ಭಾರತೀಯ ಶುಕ್ಲಯಜುರ್ವೇದ ಕಣ್ವ ಪರಿಷತ್ ಶತಮಾನದ ಹಿಂದೆ ಸ್ಥಾಪನೆಯಾದಂತ ಸಂಸ್ಥೆಯಾಗಿದೆ, ದೇಶದ ಪ್ರತಿಯೊಂದು ರಾಜ್ಯಗಳಲ್ಲಿನ ಕಣ್ವ ಶಾಖೆಯ ಬಾಂಧವರನ್ನು ಸಂಘಟಿಸುವ ಸಲುವಾಗಿ ಕಣ್ವಪರಿಷತ್ ಕಣ್ವರಿರುವ ಪ್ರತಿಯೊಂದು ಜಿಲ್ಲೆ, ತಾಲೂಕು, ಗ್ರಾಮದ ಮನೆ ಮನೆಗಳಿಗೆ ಹೋಗಿ ಸಂಘಟಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಮನೋಹರ ಮಾಡಿಗೇರಿ ಮಾತನಾಡಿದರು.

ಹೈದರಾಬಾದಿನ ಕಾಚಿಗುಡದ ಶ್ರೀತುಳಜಾ ಭವಾನಿ ಧರ್ಮಶಾಲೆಯಲ್ಲಿ ನಡೆದ ಕಣ್ವ ಪರಿಷತ್ತಿನ ಆಂಧ್ರ ಮತ್ತು ತೆಲಂಗಾಣ ರಾಜ್ಯದ ಅಧಿಕಾರಿಗಳನ್ನು ಆಯ್ಕೆ ಮಾಡಲು ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಣ್ವ ಪರಿಷತ್ತಿನ 9 ಸೂತ್ರಗಳ ಬಗ್ಗೆ ಮಾಹಿತಿ ನೀಡಿದರು. ಈಗಾಗಲೇ ವೇದಪಂಡಿತರಿಗಾಗಿ ಕಣ್ವನಿಧಿ ಸ್ಥಾಪಿಸಲಾಗಿದೆ, ಪರಿಷತ್ತಿನ ಮುಖವಾಣಿಯಾದ ಕಣ್ವ ವಿಕಾಸ ಕನ್ನಡ ಮಾಸಪತ್ರಿಕೆಯನ್ನು ಪುನರಾರಂಭಿಸಲಾಗುವುದು, ಕಣ್ವ ಪರಿಷತ್ತಿನ ವೆಬ್ ಸೈಟಗೆ ಚಾಲನೆ ನೀಡಲಾಗಿದೆ.

Contact Your\'s Advertisement; 9902492681

ಗುರುಪರಂಪರೆಯನ್ನು ಪ್ರೋತ್ಸಾಹಿಸುವುದಕ್ಕಾಗಿ ಕಣ್ವ ವೇದ ಪಾಠ ಶಾಲೆಗಳನ್ನು ಸ್ಥಾಪಿಸಲಾಗುವುದು. ನಡೆಸಲಾಗುವುದು ಹಾಗೂ ಕಣ್ವ ಮಹಿಳೆಯರನ್ನು ಸಂಘಟಿಸಲು, ಒಗ್ಗೂಡಿಸಲು ಕಣ್ವ ಮಹಿಳಾ ವಿಭಾಗ ಸ್ಥಾಪನೆ ಮಾಡಲಾಗಿದೆ ಎಂದರು. ಶ್ರೀಅಮರೇಶ್ವರ ಅವಧಾನಿ ಅವರನ್ನು ಆಂಧ್ರಪ್ರದೇಶದ ಕಣ್ವ ಪರಿಷತ್ತಿನ ಅಧ್ಯಕ್ಷರನ್ನಾಗಿ ಮತ್ತು ಶ್ರೀದಿನಕರ್ ಜೋಶಿ ಅವರನ್ನು ತೆಲಂಗಾಣ ರಾಜ್ಯದ ಕಾರ್ಯದರ್ಶಿಯನ್ನಾಗಿ ನಿಯುಕ್ತಿ ಗೊಳಿಸಲಾಯಿತು.

ಕಲಬುರಗಿಯ ಶ್ರೀ ಅಶ್ವತ್ ಜೋಶಿಯವರನ್ನು ಆಂಧ್ರಪ್ರದೇಶದ ರಾಜ್ಯ ಸಮಿತಿಯ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡುವಂತೆ ಕಾರ್ಯದರ್ಶಿಗಳಿಗೆ ಸೂಚಿಸಲಾಯಿತು.

ಅಧಿಕ ಶ್ರಾವಣ ಮಾಸದ ನಿಮಿತ್ತವಾಗಿ ಶ್ರೀ ಸದ್ಗುರು ಘನ ಪಾರಾಯಣ ಸಮಿತಿ ವತಯಿಂದ ಪ್ರಪ್ರಥಮ ಬಾರಿಗೆ ಶುಕ್ಲಯಜುರ್ವೇದ ಕಣ್ವ ಶಾಖಾ ಕಂಠಸ್ಥ ಘನ ಪಾರಾಯಣ ಕಾರ್ಯಕ್ರಮವನ್ನು ಅಖಿಲ ಭಾರತೀಯ ಶುಕ್ಲಯಜುರ್ವೇದೀಯ ಕಣ್ವ ಪರಿಷತ್ತನ ಉಪಾಧ್ಯಕ್ಷರಾದ ಘನಪಾಠಿ ವೇದ ಬ್ರಹ್ಮಶ್ರೀ ಶ್ರೀಕೃಷ್ಣ ಲಕ್ಷ್ಮಿಕಾಂತ ಪುರಾಣಿಕ ಅವರ ನೇತೃತ್ವದಲ್ಲಿ ಜುಲೈ 19 ನಿರಂತರವಾಗಿ ನಡೆದ ಘನ ಪಾರಾಯಣ ಇಂದು 40ನೇ ಅಧ್ಯಾಯ ಈಶಾವಾಸ್ಯೊಪನಿಷತ್ತು ಪಾರಾಯಣ ಮಾಡುವುದರ ಮೂಲಕ ಸಮಾಪ್ತಿಗೊಳಿಸಲಾಯಿತು.

ಕರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಕಣ್ವ ಪರಿಷತ್ತಿನ ಕಾರ್ಯ ಚಟುವಟಿಕೆಗಳು ಕುಂಠಿತಗೊಂಡಿದ್ದವು, ಇದೀಗ ಪರಿಷತ್ತಿನ ಪದಾಧಿಕಾರಿಗಳ ಸಹಕಾರದೊಂದಿಗೆ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಘಟಕಗಳನ್ನು ಸ್ಥಾಪಿಸಿ ಪರಿಷತ್ತಿನ ಚಟುವಟಿಕೆಗಳನ್ನು ಚುರುಕುಗೊಳಿಸಲಾಗಿದೆ, ಕಣ್ವ ಪರಿಷತ್ತಿನ ನಿಕಟಪೂರ್ವ ರಾಷ್ಟ್ರೀಯ ಅಧ್ಯಕ್ಷರಾದ ಪಿ.ಎಸ್ ಕುಲಕರ್ಣಿ ಅವರು ಕರ್ನಾಟಕದ ಕಣ್ವ ಪರಿಷತ್ತಿನ ರಾಜ್ಯಾಧ್ಯಕ್ಷನಾಗಿ ನನ್ನನ್ನು ನೇಮಿಸಿದ್ದರು ಎಂದು ಸ್ಮರಿಸಿದರು, ಈ ವರ್ಷದ ಅಂತ್ಯದೊಳಗೆ ಕಣ್ವ ಪರಿಷತ್ತಿನ ರಾಷ್ಟ್ರೀಯ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಬೆಳಿಗ್ಗೆ ಕಣ್ವ ಶಾಖೆಯ ವೈದಿಕ ಸಮ್ಮೇಳನದಲ್ಲಿ ವೈದಿಕ ವೃಂದದಿಂದ ಕಣ್ವ ಶಾಖೆ’ ಕಂಠಸ್ಥ ಘನ ಪಾರಾಯಣ, ವಿವಿಧ ಗೋಷ್ಠಿ ನಡೆದವು, ಸಾಯಂಕಾಲ ತಾಳ,ಮೇಳ ವಾದ್ಯದೊಂದಿಗೆ ಭವ್ಯ ಶೋಭಯಾತ್ರೆ ಜರುಗಿತು.

ದಕ್ಷಿಣ ವಲಯದ ಅಧ್ಯಕ್ಷರಾದ ಆರ್ ಲಕ್ಷ್ಮಿಕಾಂತ್, ಕಾರ್ಯದರ್ಶಿ ಕೆ.ಎನ್ ಚಂದ್ರಶೇಖರ್, ಶ್ರೀಶಂಕರಭಟ್ ಜೋಶಿ ಅಗಡಿ, ಸಂಜಯ್ ಕುಲಕರ್ಣಿ ಪುಣೆ, ರಾಜ್ಯ ಕಾರ್ಯಧ್ಯಕ್ಷರಾದ ಕೋನಕುಂಟ್ಲು ನಾಗರಾಜ್, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ವಿನುತ ಜೋಶಿ, ಪ್ರಸನ್ನ ಆಲಂಪಲ್ಲಿ, ತೆಲಂಗಾಣ ರಾಜ್ಯ ಸಂಚಾಲಕರಾದ ಭೀಮಸೇನರಾವ್ ಸಿಂಧಗೆರಿ, ಮಹಾರಾಷ್ಟ್ರ ರಾಜ್ಯ ಸಂಚಾಲಕರಾದ ಭೀಮರಾವ್ ಕುಲಕರ್ಣಿ, ವೆಂಕಟೇಶ್ ಕುಲಕರ್ಣಿ, ಗೋವಿಂದರಾವ್ ಆಲಂಪಲ್ಲಿ, ಅನಂತ ಕುಲಕರ್ಣಿ ಪುಣೆ,ಸೇರಿದಂತೆ ಆಂಧ್ರ ತೆಲಂಗಾಣ ಮಹಾರಾಷ್ಟ್ರ ಗುಜರಾತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here