ಕಲಬುರಗಿ: ಸೆ.9ರಂದು ಬೃಹತ್ ಸಮಾವೇಶ

0
25

ಸೆ. 9ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಸಮಾವೇಶವನ್ನು ತೆಲಂಗಾಣದ ವಸತಿ ಸಚಿವ ಜೋಗಿ ರಮೇಶ ಅವರು ಉದ್ಘಾಟಿಸುವರು. ಬಿ.ಕೆ. ಹರಿಪ್ರಸಾದ ಸೇರಿದಂತೆ ಪಕ್ಷಾತೀತ ಗಣ್ಯರು ಮತ್ತು ವಿವಿಧ ಮಠಾದೀಶರು ಪಾಲೊಳ್ಳಲಿದ್ದಾರೆ. ಮುಂದಿನ ಜನವರಿ 20ರಿಂದ 30ರೊಳಗೆ ಉಡುಪಿಯಲ್ಲಿ ರಾಜ್ಯ ಮಟ್ಟದ ಸಮಾವೇಶ ನಡೆಸುವ ಚಿಂತನೆ ನಡೆದಿದೆ. -ಸತೀಶ ಗುತ್ತೇದಾರ, ಉದ್ಯಮಿ, ಕಲಬುರಗಿ.

ಕಲಬುರಗಿ: ಹಿಂದುಳಿದ ಸಮುದಾಯಗಳಿಗೆ ಸರ್ಕಾರ ಮಾಡುತ್ತಿರುವ ಅನ್ಯಾಯವನ್ನು ವಿರೋದಿಸಿ ರಾಷ್ಟ್ರೀಯ ಈಡಿಗ ಮಹಾಮಂಡಳ ಮತ್ತು ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯಿಂದ ಅತಿ ಹಿಂದುಳಿದ ವರ್ಗಗಳ ಒಕ್ಕೊರಲಿನಿಂದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಈಡಿಗರ ಮಹಾಮಂಡಳ ಸತೀಶ ಗುತ್ತೇದಾರ ಮತ್ತು ಬಾಲರಾಜ ಗುತ್ತೇದಾರ ಅವರು ಜಂಟಿಯಾಗಿ ತಿಳಿಸಿದರು.

ಬಹುಪಾಲು ಹಿಂದುಳಿದ ಮತ್ತು ಅತಿ ಹಿಂದುಳಿದ ಸಮುದಾಯಗಳಿಗೆ ಈಗಲು ಇದು ಕನಸಾಗಿದೆ. ಕರ್ನಾಟಕದ ಬಿಲ್ಲವ, ಈಡಿಗ, ದೀವರ, ನಾಮಧಾರಿ, ಮಡಿವಾಳ, ವಿಶ್ವಕರ್ಮ, ಅಲೆಮಾರಿ, ಅರೆ ಅಲೆಮಾರಿ, ಬೆಸ್ತ, ತಿಗಳ, ಕ್ಷೌರಿಕ, ದೇವಾಂಗ, ಗೊಲ್ಲ, ಯಾದವ, ಉಪ್ಪಾರ, ಹಾಲಕ್ಕಿ, ಒಕ್ಕಲಿಗ, ಮೇದಾರ, ಕುಂಬಾರ, ಗೆಜ್ಜೆಗಾರ ಸೇರಿದಂತೆ ನಾನಾ ಹೆಸರಿನಲ್ಲಿ ಗುರುತಿಸಿಕೊಂಡಿರುವ 1 ಕೋಟಿ ಜನಸಂಖ್ಯೆ ಹೊಂದಿರುವ ಅತಿ ಹಿಂದುಳಿದ ಸಮುದಾಯ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಸ್ಥಾನಮಾನಗಳಿಂದ ಸರಕಾರ ವಂಚಿತವನ್ನಾಗಿಸುತ್ತಿದೆ ಎಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ದೂರಿದರು.

Contact Your\'s Advertisement; 9902492681

ಅಲ್ಲದೆ ಸಮುದಾಯಗಳ ಅಬಿವೃದ್ದಿಗೆ ಸ್ಥಾಪನೆ ಮಾಡಿರುವ 24 ವಿವಿಧ ನಿಗಮಗಳಲ್ಲಿ ಕೇವಲ 7 ನಿಗಮಗಳಿಗೆ ಅನುದಾನ ನೀಡಿರುವ ಸರಕಾರ ಉಳಿದ ನಿಗಮಗಳಿಗೆ ನಿರ್ಲಕ್ಷ್ಯ ಮಾಡಿದೆ ಹಾಗಾಗಿ ಸರಕಾರಕ್ಕೆ ಆಗುತ್ತಿರುವ ಅನ್ಯಾಯವನ್ನು ಮುಟ್ಟಿಸುವ ನಿಟ್ಟಿನಲ್ಲಿ ಪೂರ್ವಭಾವಿ ಸಮಾವೇಶ ನಡೆಸಿ ಜನವರಿ ತಿಂಗಳಲ್ಲಿ ಉಡುಪಿಯಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವೆಂಕಟೇಶ ಯಾದವ, ಮಹಾದೇವ ಗುತ್ತೇದಾರ, ಅಂಬಯ್ಯ ಗುತ್ತೇದಾರ, ಡಾ. ಸದಾನಂದ ಪೆರ್ಲ, ಲೋಹಿತ ವಿಶ್ವಕರ್ಮ, ಸುಭಾಷ ಸೇರಿದಂತೆ ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here