ಕಸಾಪದಿಂದ ವಿಶ್ವ ಜಾನಪದ ದಿನಾಚರಣೆ

0
96
ಕಲಬುರಗಿ ನಗರದ ಅಂಗಡಿಗಳ ಮೇಲಿನ ನಾಮಫಲಕಗಳನ್ನು ಸಂಪೂರ್ಣವಾಗಿ ಕನ್ನಡೀಕರಣಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಕಸಾಪ ದಿಂದ ಪಿಡಿಎ ಇಂಜಿನೀಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಸಂಜಯ ಮಾಕಲ್ ಅವರ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರನ್ನೊಳಗೊಂಡ ಒಂದು ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದ್ದು, ಆ ಮೂಲಕ ನಗರದ ಕನ್ನಡ ಭಾಷೆಯ ಬೆಳವಣಿಗೆಗಾಗಿ ಕ್ರಾಂತಿಕಾರಿ ಚಳವಳಿಯ ರೂಪದಲ್ಲಿ ಜನಜಾಗೃತಿಯ ಆಂದೋಲವನ್ನು ಕೈಗೊಳ್ಳಲಾಗುತ್ತಿದೆ. – ವಿಜಯಕುಮಾರ ಪಾಟೀಲ ತೇಗಲತಿಪ್ಪಿ
ಅಧ್ಯಕ್ಷ, ಜಿಲ್ಲಾ ಕಸಾಪ, ಕಲಬುರಗಿ. 

ಕಲಬುರಗಿ: ಜಗತ್ತಿನ ಎಲ್ಲಾ ಕಲೆಗಳ ಮೂಲ ನಮ್ಮ ಜಾನಪದವೇ ಆಗಿದೆ. ಜಾನಪದ ಮನುಷ್ಯನ ಶ್ರಮ ಸಂಸ್ಕøತಿಯಿಂದ ಜನ್ಮ ತಾಳಿದೆ ಎಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಸೋಮಶೇಖರ ಗೋನಾಯಕ್ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿ ಮಂಗಳವಾರ ಏರ್ಪಡಿಸಿದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾನಪದ ಅನ್ನೋದು ಮನುಕುಲದ ಜೀವನವಾಗಿದೆ. ಆದರೆ ಈ ಜಾನಪದ ಕಲೆಗಳು ಇಂದು ಮಾಯವಾಗುತ್ತಿರುವ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇಂಥ ಕಾರ್ಯಕ್ರಮಗಳು ನಿರಂತರವಾಗಿ ನಡೆಸುವ ಮೂಲಕ ಜನರೆಲ್ಲರನ್ನೂ ಒಗ್ಗೂಡಿಸಿ ಜಾನಪದ ಸೊಗಡನ್ನು ನವ ಜನಾಂಗಕ್ಕೆ ಪರಿಚಯಿಸಿ ಬೆಳೆಸುತ್ತಿರುವುದು ಶ್ಲಾಘನೀಯ ಎಂದು ಮನದುಂಬಿ ಮಾತನಾಡಿದರು. ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಅವರು ಪರಿಷತ್ತಿನ ಜಿಲ್ಲಾಧ್ಯಕ್ಷನಾದ ನಂತರ ಅವರ ಬಳಗದ ನೇತೃತ್ವದಲ್ಲಿ ಕನ್ನಡ ಭವನಕ್ಕೆ ಹೊಸದೊಂದು ಸ್ಪರ್ಶ ಕೊಡುತ್ತಿದ್ದಾರೆ ಎಂದರು.

Contact Your\'s Advertisement; 9902492681

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕಲೆ ಮತ್ತು ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸ ಪರಿಷತ್ತು ನಿರಂತರವಾಗಿ ಮಾಡುತ್ತಿದೆ. ಕಲಾವಿದರನ್ನು ಉಳಿಸಿಕೊಂಡರೆ ಮಾತ್ರ ಕಲೆ ಉಳಿಯುತ್ತದೆ. ಹಾಗಾಗಿ ಜನಪದ ಕಲೆ ಎಂಬುದು ಅತ್ಯಂತ ಶ್ರೀಮಂತ ಕಲೆಯಾಗಿದೆ. ಜನಪದ ಕಲಾವಿದರು ನಮ್ಮ ನಾಡಿನ ಸಾಂಸ್ಕøತಿಕ ರಾಯಭಾರಿಗಳಾಗಿದ್ದಾರೆ. ಕಲೆಯ ಉಳಿವಿಗಾಗಿ ಕಲಾವಿದರ ನೆರವಿಗೆ ಸರಕಾರ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಬೇಕಿದೆ ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಹಿರಿಯ ಜಾನಪದ ಕಲಾವಿದೆ ಶಕುಂತಲಾ ಡಿ. ನಾಯಕ್, ಯಾವುದೇ ತರಹದ ಸವಲತ್ತುಗಳಿಲ್ಲದ ಕಾಲದಲ್ಲಿ ಕಲೆ ಉಳಿಸಿಕೊಂಡು ಬಂದ ಅನಭವವನ್ನು ಹಂಚಿಕೊಂಡರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ರಾಜೇಂದ್ರ ಮಾಡಬೂಳ, ಎಸ್ ಕೆ ಬಿರಾದಾರ, ಪ್ರಭುಲಿಂಗ ಮೂಲಗೆ, ವಿಶ್ವನಾಥ ತೊಟ್ನಳ್ಳಿ ವೇದಿಕೆ ಮೇಲಿದ್ದರು.

ಜಾನಪದ ಕ್ಷೇತ್ರದ ವಿವಿಧ ಕಲಾವಿದರಾದ ಪುಂಡಲಿಕ ಪೂಜಾರಿ, ಶರಣಪ್ಪ ದೊಡ್ಮನಿ, ದೇವೇಂದ್ರಪ್ಪ ಚಿಂಚಿನಸೂರ, ಬಾಬು ಪೂಜಾರಿ, ಲಲಿತಾಬಾಯಿ ನಾಯಕ್, ಶಂಕರಲಿಂಗ ರುದ್ರವಾಡಿ, ಚಂದ್ರಕಾಂತ ಡಿಗ್ಗಿ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.

ಪ್ರಮುಖರಾದ ರೇವಣಸಿದ್ದಪ್ಪ ಜೀವಣಗಿ, ಸೋಮಶೇಖರ ನಂದಿಧ್ವಜ, ಎಸ್ ಎಂ ಪಟ್ಟಣಕರ್, ಪ್ರೊ. ಎಸ್.ಎಲ್.ಪಾಟೀಲ, ನರಸಿಂಗರಾವ ಹೇಮನೂರ, ಮಲ್ಲಿಕಾರ್ಜುನ ಜಾನೆ, ಶಿವಶರಣಪ್ಪ ಹಡಪದ, ಶಿವಕುಮಾರ ಸಿ.ಹೆಚ್., ಪ್ರಭವ ಪಟ್ಟಣಕರ್, ಕಲ್ಲಯ್ಯಾ ಸ್ಥಾವರಮಠ, ನಾಗನ್ನಾಥ ಯಳಸಂಗಿ, ಬಸ್ವಂತರಾಯ ಕೋಳಕೂರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರು ತಮ್ಮ ತಮ್ಮ ಕಲಾ ಪ್ರತಿಭೆಯನ್ನು ಅನಾವರಣಗೊಳಿಸಿ ಪ್ರೇಕ್ಷಕರ ಮನಸೂರೆಗೊಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here