ಹೋಬಳಿ ಮಟ್ಟದ ಕ್ರೀಡೆಯಲ್ಲಿ ಸಾಧನೆ ಮಾಡಿದÀ ಎಂ.ಸಿ.ಸಿ. ವಿದ್ಯಾರ್ಥಿಗಳು

0
11

ಶಹಾಬಾದ: ನಗರದ ಬಿ.ವ್ಹಿ.ಎಮ್ ಆಟದ ಮೈದಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2023-24ನೇ ಸಾಲಿನ ಹೋಬಳಿ ಮಟ್ಟದ ಪ್ರಾಥಮಿಕ/ಪ್ರೌಢ ವಿಭಾಗದ ಕ್ರೀಡಾ ಕೂಟದಲ್ಲಿ ಗುಂಪು ಸ್ಪರ್ಧೆಗಳಲ್ಲಿ ಮೌಂಟ್ ಕಾರ್ಮಲ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ.

ಗುಂಪು ಆಟಗಳಾದ ವಾಲಿಬಾಲ್,ತ್ರೋಬಾಲ್, ಮತ್ತು ಕಬ್ಬಡಿಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದಾರೆ. ಅದೇ ರೀತಿ ವೈಯಕ್ತಿಕ ಸ್ಪರ್ಧೆಗಳಾದ 100,200,400, ಮೀ 600ಮೀ ಓಟದಲ್ಲಿ ಹಾಗೂ ಗುಂಡು ಎಸೆತ, ಚಕ್ರ ಎಸೆತ ಇತರ ಸ್ವರ್ಧೆಗಳಲ್ಲಿ ಭಾಗವಹಿಸಿ ಪ್ರಥಮ,ದ್ವೀತಿಯ,ತೃತೀಯ ಸ್ಥಾನ ಪಡೆದು ತಾಲೂಕ ಮಟ್ಟಕೆ ಆಯ್ಕೆಯಾಗಿದಾರೆ. ಹೋಬಳಿ ಮಟ್ಟದಲ್ಲಿ ವಿಜೇತರಾಗಿ ತಾಲೂಕ ಮಟ್ಟಕ್ಕೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here