ರಸ್ತೆ ಸಾರಿಗೆ ನಿಗಮದ ಎಡವಟ್ಟು ಶಾಲಾ-ಕಾಲೇಜಿನ ಮಕ್ಕಳಿಗೆ ತೊಂದರೆ

0
17

ಶಹಾಬಾದ: ರಸ್ತೆ ಸಾರಿಗೆ ನಿಗಮದ ಎಡವಟ್ಟು ನೀತಿಗಳಿಂದ ನಗರದಲ್ಲಿರುವ ಸಾರ್ವಜನಿಕರಿಗೆ ಮತ್ತು ಶಾಲಾ-ಕಾಲೇಜಿನ ಮಕ್ಕಳಿಗೆ ಎಲ್ಲಿಲ್ಲದ ತೊಂದರೆ ಅನುಭವಿಸುವ ಪರಿಸ್ಥಿತಿ ಉಂಟಾಗಿದೆ.

ಈ ಎರಡು ಸ್ಥಳಗಳಲ್ಲಿ ಬಸ್ ನಿಲ್ಲಿಸಿದರೆ ಬಹಳ ಅನುಕೂಲವಾಗುತ್ತದೆ. ಇಲ್ಲದಿದ್ದರೇ ಹೆದ್ದಾರಿಯಲ್ಲಿ ವಿದ್ಯಾರ್ಥಿಗಳು ಭಂಕೂರ ವೃತ್ತದ ಕಡೆಗೆ ಪ್ರಯಾಣ ಮಾಡಬೇಕಾಗುತ್ತದೆ. ವೇಗದಲ್ಲಿ ಬರುವ ವಾಹನಗಳು ಸ್ವಲ್ಪ ಎಚ್ಚರತಪ್ಪಿದರೂ ಅಪಾಯ ಹೆಚ್ಚಾಗಿದೆ. ಅಪಾಯದ ಕರಗಂಟೆಯಿದೆ ಎಂದು ಗೊತ್ತಿದ್ದರೂ ಬಸ್ ನಿಲ್ಲಿಸುತ್ತಿಲ್ಲ.ಈಗಲಾದರೂ ಬಸ್ ನಿಲ್ಲಿಸಿ ಇದರಿಂದ ಎಷ್ಟೋ ಮಂದಿ ಅಮಾಯಕರು ಪ್ರಾಣಾಪಾಯದಿಂದ ಪಾರಾಗಬಹುದು –ಈರಣ್ಣ ಕಾರ್ಗಿಲ್, ಮಹ್ಮದ್ ನದೀಮ್ ಭಂಖುರ ಗ್ರಾಮಸ್ಥರು.

ಶಹಾಬಾದ-ಕಲಬುರಗಿ ಬಸ್‍ಗಳು ಶಾಂತನಗರ ಮಜ್ಜಿದ್ ಹಾಗೂ ಎಬಿಎಲ್ ಕಾರ್ಖಾನೆಯ ಮೇನ್ ಗೇಟ್ ಹತ್ತಿರ ನಿಲ್ಲುತ್ತಿದ್ದವು.ಆದರೆ ಒಂದುವರೆ ತಿಂಗಳಿನಿಂದ ಲೋಕಲ್ ಬಸ್‍ಗಳು ಈ ಸ್ಥಳಗಳಲ್ಲಿ ನಿಲ್ಲಿಸದೇ ಇರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.ನಿತ್ಯ ಕೆಲಸಕ್ಕೆ ಹಾಗು ಶಾಲಾ-ಕಾಲೇಜಿಗೆ ಹೋಗುವ ಮತ್ತು ಮತ್ತೆ ಮರಳಿ ಬರುವ ವಿದ್ಯಾರ್ಥಿಗಳು ಶಾಂತನಗರ ಮಜ್ಜಿದ್ ಹತ್ತಿರ ಬಸ್ ನಿಲ್ಲಿಸದೇ ಇರುವುದರಿಂದ ಬಸವ ಸಮಿತಿ ಶಾಲೆಯ ಮಕ್ಕಳು, ಕರ್ನಾಟಕ ಕಾಲೇಜಿನ ವಿದ್ಯಾರ್ಥಿಗಳು ಸುಮಾರು 1.5 ಕಿಮೀ ದೂರದ ಭಂಕೂರ ವೃತ್ತದವರೆಗೆ ನಡೆದುಕೊಂಡು ಹೋಗಬೇಕಾಗುತ್ತದೆ.

Contact Your\'s Advertisement; 9902492681

ಸುಮಾರು ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲಾ-ಕಾಲೇಜುಗಳಿಗೆ ತೆರಳಲು ರಾಷ್ಟ್ರೀಯ ಹೆದ್ದಾರಿ ಇರುವುದರಿಂದ ವಾಹನ ಸಂಚಾರ ದಟ್ಟಣವಾಗಿರುತ್ತದೆ. ಪ್ರಯಾಣಿಕರು ರಸ್ತೆಯ ಬದಿಯಲ್ಲಿ ನಿಂತಿರುತ್ತಾರೆ. ಅದರಲ್ಲೂ ಈ ಭಾಗದ ರಸ್ತೆ ತುಂಬಾ ವಾಹನಗಳು ಅತೀ ವೇಗವಾಗಿ ಸಂಚರಿಸುತ್ತವೆ. ಇದರಿಂದ ಶಾಲಾಮಕ್ಕಳಿಗೆ ಏನಾದರೂ ಅಪಾಯವಾದರೆ ಯಾರು ಹೊಣೆ? ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.ಅಲ್ಲದೇ ನಗರದ ಎಬಿಎಲ್ ಕಾರ್ಖಾನೆಯ ಮುಂದೆಯೂ ನಿಲ್ಲಿಸದೇ ಇರುವುದರಿಂದ ವೃದ್ಧರು, ಸ್ತ್ರೀಯರು ವಾಡಿ ವೃತ್ತದವರೆಗೆ ನಡೆದುಕೊಂಡು ಹೋಗಬೇಕಾಗುತ್ತದೆ.

ಇದರಿಂದ ತೊಂದರೆ ಅನುಭವಿಸುವಂತಾಗಿದೆ. ಅಲ್ಲದೇ ವಾಡಿ ವೃತ್ತದಲ್ಲಿ ತಂಗುದಾನವಿಲ್ಲ. ಮಳೆ,ಗಾಳಿ, ಬಿಸಿಲಿನ ಹೊಡೆತಕ್ಕೆ ಜನರು ಒಳಗಾಗುತ್ತಿವುದು ದೊಡ್ಡ ಸಮಸ್ಯೆಯಾಗಿದೆ.ಸುಮಾರು ವರ್ಷಗಳಿಂದ ಶಾಂತನಗರ ಮಜ್ಜಿದ್ ಹಾಗೂ ಎಬಿಎಲ್ ಕಾರ್ಖಾನೆಯ ಮೇನ್ ಗೇಟ್ ಹತ್ತಿರ ಬಸ್‍ಗಳು ನಿಲ್ಲಿಸಲಾಗುತ್ತಿತ್ತು.ಆದರೆ ಕಳೆದ ಒಂದುವರೆ ತಿಂಗಳಿನಿಂದ ಬಸ್‍ಗಳು ನಿಲ್ಲಿಸದ ಕಾರಣ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈಗಾಗಲೇ ಶಾಲಾ ಆಡಳಿತ ಮಂಡಳಿಯವರು ಈ ಬಗ್ಗೆ ತಹಸೀಲ್ದಾರರಿಗೆ ಬಸ್ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.ಆದರೂ ನಿಲ್ಲಿಸುತ್ತಿಲ್ಲ.ಅಧಿಕಾರಿಗಳು ನಿಲ್ಲಿಸಲಾಗುತ್ತದೆ ಎಂದು ಹೇಳುತ್ತಾರೆ.ಆದರೆ ಚಾಲಕರು ಹಾಗೂ ನಿರ್ವಾಹಕರು ನಿಲ್ಲಿಸುವುದಿಲ್ಲ.ನಿಲ್ಲಿಸಲು ಮನವಿಮಾಡಿದರೂ ಕ್ಯಾರೇ ಎನ್ನುತ್ತಿಲ್ಲ. ಒಂದು ವಾರದಲ್ಲಿ ಬಸ್ ಈ ಎರಡು ಸ್ಥಳದಲ್ಲಿ ನಿಲುಗಡೆ ಮಾಡದಿದ್ದರೇ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ಸಾರ್ವಜನಿಕರು ನೀಡಿದ್ದಾರೆ.

ಹೊಸ ಸ್ಥಳಗಳಲ್ಲಿ ಬಸ್ ನಿಲ್ಲಿಸಲು ಹೇಳುತ್ತಿಲ್ಲ.ಈ ಮುಂಚೆ ಈ ಸ್ಥಳದಲ್ಲಿ ನಿಲ್ಲುತ್ತಿದ್ದ ಬಸ್‍ಗಳನ್ನು ಮಾತ್ರ ನಿಲ್ಲಿಸಲು ಆಗ್ರಹಿಸುತ್ತಿದ್ದೆವೆ. ಬಸ್‍ಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕಾದ ಕಾರ್ಯವನ್ನು ಬಸ್ ಚಾಲಕರು ಮತ್ತು ನಿರ್ವಾಹಕರು ಮಾಡಬೇಕಿದೆ. ಈ ಬಗ್ಗೆ ಇಲಾಖಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆಯನ್ನು ಚಾಲಕರಿಗೆ ನೀಡಬೇಕಿದೆ- ನೀಲಕಂಠ ಮುದೋಳಕರ್ ಅಧ್ಯಕ್ಷರು ಬಸವ ಸಮಿತಿ ಶಾಲೆ ಭಂಕೂರ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here