ವಾಡಿ: ರಕ್ಷಾಬಂಧನ ಸಂಭ್ರಮದಲ್ಲಿ ಗುರು ಶಿಷ್ಯರು

0
57

ವಾಡಿ: ಅಕ್ಷರ ಕಲಿಕೆಗೆಂದು ಶಾಲೆಗೆ ಬಂದ ವಿದ್ಯಾರ್ಥಿಗಳು ರಕ್ಷಾಬಂಧನ ಸಂಭ್ರಮಾಚರಣೆಯಲ್ಲಿ ತೊಡಗಿದರು. ಸಹಪಾಠಿ ವಿದ್ಯಾರ್ಥಿನಿಯರು ಶಾಲೆಯ ಎಲ್ಲಾ ಹುಡುಗರಿಗೆ ರಾಖಿ ಕಟ್ಟುವ ಮೂಲಕ ಸಹೋದರತೆಯ ಪ್ರೀತಿ ಮೆರೆದರು.

ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಸ್ಥೆಯಲ್ಲಿ ಗುರುವಾರ ರಕ್ಷಾಬಂಧನ ಹಬ್ಬದ ಸಡಗರ ಮನೆಮಾಡಿತ್ತು. ತರಗತಿ ಕೋಣೆಯಿಂದ ಹೊರಬಂದ ಮಕ್ಕಳು, ಶಾಲೆಯ ಅಂಗಳದಲ್ಲಿ ಸಾಲಾಗಿ ಕುಳಿತು ಗಮನ ಸೆಳೆದರು. ಸಹಪಾಟಿ ವಿದ್ಯಾರ್ಥಿನಿಯರು ವಿದ್ಯಾರ್ಥಿ ಸಹೋದರರ ಕೈಗಳಿಗೆ ಏಕಕಾಲಕ್ಕೆ ರಾಖಿ ಕಟ್ಟಿ ಸಿಹಿ ತಿನಿಸಿದರು.

Contact Your\'s Advertisement; 9902492681

ಸಂಸ್ಥೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳ ಶಿಕ್ಷಕರರನ್ನು ಶಿಕ್ಷಕಿಯರು ರಾಖಿ ಕಟ್ಟಿದರು. ಹಣೆಗೆ ವಿಭೂತಿ ಕುಂಕುಮ ತಿಲಕವಿಟ್ಟು ಆರತಿ ಬೆಳಗಿದರು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ವಿದ್ಯಾರ್ಥಿಗಳು ರಕ್ಷಷಾಬಂಧನ ಹಬ್ಬದ ಸಡಗರ ಹೆಚ್ಚಿಸಿದರು. ಶಾಲೆಯ ಶಿಕ್ಷಕಿಯರಿಂದ ರಾಖಿ ಕಟ್ಟಿಸಿಕೊಂಡ ಶಾಲಾ ಆಡಳಿತ ಮಂಡಳಿ ಸದಸ್ಯರು ಹರ್ಷ ವ್ಯಕ್ತಪಡಿಸಿದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸದಾಶಿವ ಕಟ್ಟಿಮನಿ, ಉಪಾಧ್ಯಕ್ಷ ಭೀಮಶಾ ಜಿರೊಳ್ಳಿ, ಕಾರ್ಯದರ್ಶಿ ಅಣ್ಣಾರಾವ ಪಸಾರೆ, ಕಾಶೀನಾಥ ಪಾನಗಾಂವ, ಬಸವರಾಜ ಯರಗಲ್, ಮುಖ್ಯ ಶಿಕ್ಷಕರಾದ ಕವಿತಾ ಪಾಟೀಲ, ಚಂದ್ರಶೇಖರ ಕಲ್ಲೂರೆ, ಶಿಕ್ಷಕರಾದ ಶಿವುಕುಮಾರ ಮಲಕಂಡಿ, ಶಂಕ್ರೆಪ್ಪ ಜುಮಲಾಪುರ, ಶಿವುಕುಮಾರ ಮಲಕಂಡಿ, ನಾಗರಾಜ ತಳವಾರ, ಸಂತೋಷ ಪಾಟೀಲ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here