ದೇಶದ ಗಡಿ ಕಾಯುವ ಸೈನಿಕರೇ ನಮಗೆ ರಿಯಲ್ ಹೀರೋಗಳು

0
93

ಶಹಾಬಾದ: ದೇಶದ ಗಡಿಯಲ್ಲಿ ಹಗಲಿರುಳು ಕಾಯುತ್ತಿರುವ ಸೈನಿಕರ ಶ್ರಮದಿಂದಲೇ ದೇಶದ ವಾಸಿಗಳು ನೆಮ್ಮದಿಯಿಂದ ಇದ್ದಾರೆ. ನಮ್ಮ ಸೈನಿಕರೇ ನಮಗೆ ರಿಯಲ್ ಹೀರೋಗಳು ಎಂದು ನಗಸಭೆಯ ಮಾಜಿ ಅಧ್ಯಕ್ಷ ಶರಣಪ್ಪ ಹದನೂರ ಹೇಳಿದರು.

ಅವರು ನಗರದ ಸೇಂಟ್ ಥಾಮಸ್ ಶಾಲೆಯಲ್ಲಿ ಆಯೋಜಿಸಲಾದ ಸೈನಿಕರ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಮತ್ತು ಯುವಕರಲ್ಲಿ ದೇಶ ಸೇವೆ ಮಾಡುವ ಮನೋಭಾವ ಬೆಳೆಯಬೇಕು ಎಂದರು.

Contact Your\'s Advertisement; 9902492681

ಭಾರತ ಶಾಂತಿಪ್ರಿಯ ದೇಶವಾಗಿದ್ದು, ಯಾವುದೇ ದೇಶದವರ ತಂಟೆಗೆ ನಾವು ಹೋಗುವುದಿಲ್ಲ. ನಮ್ಮ ತಂಟೆಗೆ ಬಂದರೆ ನಾವು ಬಿಡುವುದಿಲ್ಲ ಎಂಬಂತೆ ನಮ್ಮ ಸೈನಿಕರು ಕಾರ್ಗಿಲ್ ಯುದ್ಧದಲ್ಲಿ 500ಕ್ಕೂ ಅಧಿಕ ಸೈನಿಕರು ಪ್ರಾಣ ತ್ಯಾಗ ಮಾಡಿ ದೇಶಕ್ಕೆ ವಿಜಯವನ್ನು ತಂದುಕೊಟ್ಟರು. ಈ ದಿನವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ದೇಶಕ್ಕಾಗಿ ಸೇನಾನಿಗಳು ಬಾರ್ಡರನಲ್ಲಿ ರಕ್ಷಣೆ ಮಾಡುತ್ತಿದ್ದರೆ, ಪೆÇಲೀಸ್ ಸಿಬ್ಬಂದಿಗಳು ಸಹ ಹಗಲಿರುಳು ಶ್ರಮಿಸಿ ಸಾರ್ವಜನಿಕ ಹಿತ-ರಕ್ಷಣೆ ಮಾಡುತ್ತಾ ಬರುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳುತ್ತ, ಇಂತಹ ಕಾರ್ಯಕ್ರಮಗಳು ಮಾಡುವುದಲ್ಲದೇ ಸಾಮಾಜಿಕ ಕಾಳಜಿಯನ್ನು ಇಟ್ಟುಕೊಂಡು ವಿನೂತನ ಸೈನಿಕರಿಗೆ,ಪೊಲೀಸರಿಗೆ ಗೌರವಿಸಿ ಸನ್ಮಾನಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಶಾಲೆಯ ಮುಖ್ಯಗುರುಮಾತೆ ಸಿಸ್ಟರ್ ಅನಸ್ಥಾಸಿಯಾ ಮಾತನಾಡಿ, ಪ್ರಾಣ ತ್ಯಾಗ ಬಲಿದಾನವನ್ನು ಸ್ಮರಿಸುವುದರ ಜೊತೆಗೆ ಇಂದಿನ ವಿದ್ಯಾರ್ಥಿಗಳಲ್ಲಿ ಮತ್ತು ಯುವಕರಲ್ಲಿ ರಾಷ್ಟ್ರಪ್ರೇಮ ಮೂಡಿಸಲು ಇಂತಹ ಕಾರ್ಯಕ್ರಮಗಳು ಸ್ಪೂರ್ತಿ ದಾಯಕವಾಗಲಿವೆ ಎಂದು ಹೇಳಿದರು.

ನಿವೃತ್ತ ಸೈನಿಕ ಸುಮಿತ್ರ, ರೇಲ್ವೆ ಇಲಾಖೆಯಲ್ಲಿ ಆರಕ್ಷಕರಾಗಿ ನಿವೃತ್ತರಾದ ನಾಗೇಂದ್ರ ಹೇರೂರ ಅವರನ್ನು ಸನ್ಮಾನಿಸಲಾಯಿತು. ಶಾಲೆಯ ಮುಖ್ಯಗುರುಮಾತೆ ಸಿಸ್ಟರ್ ಅನಸ್ಥಾಸಿಯಾ, ಸಿಸ್ಟರ್ ಮರಿಯಾ,ಶಿಲ್ಪಾ,ಪ್ರೀಯಾ,ಮಾಲತಿ,ರಶ್ಮಿ, ಶ್ವೇತಾ, ನಂದಿನಿ, ಮಹೇಶ್ವರಿ, ರೂಪ, ನಿಲೋಫರ್ ಬೇಗಂ,ಆರೋಫಾ,ನಿಲೋಫರ್ ಫಾತಿಮಾ,ಕಾವೇರಿ,ಸುಭದ್ರ,ದೈಹಿಕ ಶಿಕ್ಷಕರಾದ ಸಾಯಿಬಣ್ಣ. ಇಮ್ಯಾನುವೆಲ್ ಸೇರಿದಂತೆ ಶಾಲಾ ಮಕ್ಕಳು ಹಾಗೂ ಪಾಲಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here