ಆಳಂದ: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

0
14

ಆಳಂದ: ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಅರಳಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದ್ದು, ಮಕ್ಕಳು ಕೂಡ ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದು ದೈಹಿಕ ಶಿಕ್ಷಣಾಧಿಕಾರಿ ಅರವಿಂದ ಭಾಸಗಿ ಹೇಳಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಸಿ.ಪಿ. ಎಸ್ ಶಾಲೆ ಆವರಣದಲ್ಲಿ ಶನಿವಾರ ನಡೆದ ಸಮೂಹ ಸಂಪನ್ಮೂಲ ಕೇಂದ್ರದ ವತಿಯಿಂದ ಆಳಂದ ಉತ್ತರ ವಲಯದ
2023-24ನೇ ಸಾಲಿನ ಕ್ಲಸ್ಟರ್ ಮಟ್ಟದ
ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ನೋಡಲ್ ಅಧಿಕಾರಿ ಪ್ರಕಾಶ ಕೋಟರೆ ಮಾತನಾಡಿದರು.ಪ್ರೌಢಶಾಲೆ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಖಜೂರಿ,ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರಾಣಪ್ಪ ಸಂಗನ,ನಾಗನಾಥ ಅಲಮದ್ , ಕವಿತಾ ಪಾಟೀಲ,ಶಿವರಾಜ ಖಂಡಾಳ,ಪ್ರಕಾಶ ಕಿಣಗಿ,ಸೇರಿದಂತೆ ವಿವಿಧ ಶಾಲೆಯಮು ಖ್ಯಗುರು,ಶಿಕ್ಷಕರು, ವಿದ್ಯಾರ್ಥಿಗಳು,ಪಾಲಕರು ಪಾಲ್ಗೊಂಡಿದ್ದರು.

ನಂತರ ವಿದ್ಯಾರ್ಥಿಗಳಿಂದ ವಿವಿಧ ಸ್ಪರ್ಧೆಗಳು ಜರುಗಿದವು.ದಕ್ಷಿಣ ವಲಯ ಸಿ.ಆರ್.ಪಿ.ದತ್ತಪ್ಪ ಸುಳ್ಳನ ಪ್ರಾಸ್ತಾವಿಕ ಮಾತನಾಡಿದರು.ಶಿಕ್ಷಕ ಅಂಬಾರಾಯ ಕಾಂಬಳೆ ಸ್ವಾಗತಿಸಿದರು. ಅರವಿಂದ ಶಹಾಪುರ ನಿರೂಪಿದರು.ಸಂತೋಷ ಕವಲಗಾ ವಂದಿಸಿದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here