ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಕ್ ಸ್ಮಾರಕ ಗ್ರಂಥಾಲಯ ಲೋಕಾರ್ಪಣೆ

0
28

ಕಲಬುರಗಿ: ಸಾರ್ವಜನಿಕರಿಗಾಗಿ ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಕ್ ಸ್ಮಾರಕ ಗ್ರಂಥಾಲಯವನ್ನು ನಗರದ ರೇಲ್ವೆ ಸ್ಟೇಷನ್ ಪಕ್ಕದಲ್ಲಿರುವ ಮಹಮ್ಮದ ಹಸನ್ ಖಾನ್ ಸ್ಮಾರಕ ಕಟ್ಟಡದ ಒಂದನೆ ಮಹಡಿಯಲ್ಲಿ ಪ್ರಾರಂಭಿಸಲಾಯಿತು.

ಮಾರ್ಕ್ಸವಾದಿ  ಭಾರತ ಕಮ್ಯುನಿಸ್ಟ್ ಪಕ್ಷದ ಪಾಲಿಟ್ ಬ್ಯೂರೊ ಸದಸ್ಯರಾದ ಕಾಂ ರಾಘವಲು ಅವರು ಗ್ರಂಥಾಲಯವನ್ನು ಉದ್ಘಾಟಿಸಿ ಪುಸ್ತಕಗಳು ಚಳುವಳಿಯ ಸಂಗಾತಿಗಳಾಗಿರುತ್ತವೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಯೂ ಗ್ರಂಥಾಲಯಗಳು ಬಹು ದೊಡ್ಡ ಪಾತ್ರ ನಿಭಾಯಿಸಿವೆ. ಇಂದು ತರುಣರು ಡಿಜಿಟಲ್ ಓದಿಗೆ ತೆರೆದುಕೊಂಡಿದ್ದಾರೆ. ಈ ಬುಕ್ ಓದಿನಲ್ಲಿ ವ್ಯಸ್ತರಾಗಿದ್ದಾರೆ. ಆದ್ದರಿಂದ ಈ ಗ್ರಂಥಾಲಯವು ಈ ಕ್ಷಣದ ತುರ್ತು ಎಂದರು. ಚಳುವಳಿಗಾರರು ಸತತ ಓದಿನಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

Contact Your\'s Advertisement; 9902492681

ಅತಿಥಿಗಳಾಗಿ ಆಗಮಿಸಿದ್ದ ಕಾಂ ಕೆ ಪ್ರಕಾಶ ಅವರು ಎಲ್ಲರನ್ನು ಅಭಿನಂದಿಸುತ್ತ ಇದು ಜನಸಾಮಾನ್ಯರಿಗಾಗಿ ಬಳಕೆಯಾಗಲಿ. ನಗರದ ಮೂಲೆ ಮೂಲೆಯಿಂದ ಬರುವ ವಿಚಾರವಾದಿಗಳು ವಿದ್ಯಾರ್ಥಿ ಗಳಿಗೆ ಇದು ಮಾರ್ಗದರ್ಶಕವಾಗಲಿ ಎಂದು ಹೇಳಿದರು. ಹೋರಾಟಗಾರ್ತಿ ಕೆ ನೀಲಾ ಅವರು  ಮಹಮ್ಮದ ಹಸನ್ಖಾನ್ ಸ್ಮಾರಕ್ ಮೇಲುಪ್ಪರಿಗೆಯಲ್ಲಿ ಪ್ರಾರಂಭವಾಗುತ್ತಿರುವ ಈ ಗ್ರಂಥಾಲಯವು ಉನ್ನತ ಅಧ್ಯಯನ ಮಾಡುವ ವಿದ್ಯಾರ್ಥಿ ಗಳಿಗೆ ಅನುಕೂಲವಾಗುವಂತೆ IAS,IPS,KPSC ಅಧ್ಯಯನ ಮಾಡುವ ಮಕ್ಕಳಿಗೆ ಅನುಕೂಲವಾಗುವಂತೆ ರೂಪಿಸಲಾಗುವುದು. ಆರ್ಥಿಕವಾಗಿ ದುರ್ಬಲರಾದ ಮಕ್ಕಳ ಬಾಳಿನಲ್ಲಿ ಈ ಗ್ರಂಥಾಲಯ ಆಶಾಕಿರಣವಾಗಿ ಅವರ ಕನಸುಗಳ ಸಾಕಾರಕ್ಕಾಗಿ ದುಡಿಯಲಿದೆ ಎಂದು ಹೇಳಿದರು.

ವಿಚಾರವಾದಿ ಡಾ ಪ್ರಭು ಖಾನಾಪುರೆ ಅವರು ವಂದನಾರ್ಪಣೆಗೈಯುತ ಮನೆಯನ್ನು ಸಿಂಗರಿಸಲು ಪುಸ್ತಕದಷ್ಟು ಸೂಕ್ತವಾದ ಸಾಧನಗಳು ಇನ್ನೊಂದು ಇಲ್ಲ. ಪುಸ್ತಕವಿಲ್ಲದ ಮನೆ, ಕಚೇರಿ ಪ್ರಾಣವಿಲ್ಲದ ಶರೀರದಂತೆ ಎಂದು ಹೇಳಿದರು. ಲವಿತ್ರ ವಸ್ತ್ರದ ಮತ್ತು ಸಂಗಡಿಗರು ಕ್ರಾಂತಿ ಗೀತೆ ಹಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here