ಕಲಬುರಗಿ: ಐಟಿಐ ಕಾಲೇಜಿನ ಪ್ರಾಂಗಣ ಸುತ್ತಾಡಿ ಕಸಗೂಡಿಸಿದ ಪ್ರಾಚಾರ್ಯರು, ಸಿಬ್ಬಂದಿ ವರ್ಗ

0
24

ಕಲಬುರಗಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 154ನೇ ಜಯಂತಿ ಹಿನ್ನೆಲೆಯಲ್ಲಿ ರವಿವಾರ ಇಲ್ಲಿನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಶ್ರಮದಾನ ನಡೆಯಿತು.

ಪ್ರಾಚಾರ್ಯರಾದ ಮುರಲೀದರ ರತ್ನಗಿರಿ ನೇತೃತ್ವದಲ್ಲಿನ ಈ ಶ್ರಮದಾನದಲ್ಲಿ ಕಾಲೇಜಿನ ಪುರುಷ ಹಾಗೂ ಮಹಿಳಾ ಹಿರಿಯಯ, ಕಿರಿಯ ತರಬೇತಿ ಅಧಿಕಾರಿಗಳು, ಬೋಧಕ, ಬೋಧಕೇತರ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Contact Your\'s Advertisement; 9902492681

ಪ್ರಾಚಾರ್ಯ ಮುರಲೀಧರ ರತ್ನಗಿರಿ ಸ್ವತಃ ತಾವೇ ಕೈಯಲ್ಲಿ ಪೊರಕೆ ಹಿಡಿದು ಕಾಲೇಜಿನ ಅಂಗಳ ಸುತ್ತಾಡಿ ಕಸಗೂಡಿಸಿದರು. ಕಾಲೇಜಿನ ಇತರೆಲ್ಲ ಸಿಬ್ಬಂದಿ, ಅದರಲ್ಲೂ ವಿಶೇಷವಾಗಿ ಮಹಿಳಾ ಸಿಬ್ಬಂದಿ ಈ ಸ್ವಚ್ಚತಾ ಅಭಿಯಾನದಲ್ಲಿ ಹೆಚ್ಚಿನ ಶ್ರಮದಾನ ಮಾಡಿ ಗಮನ ಸೆಳೆದರು.

ಸುಮಾರು 1 ಗಂಟೆ ಕಾಲ ಶ್ರಮದಾನ ನಡೆಯಿತು. ಕಸಗೂಡಿಸದಲ್ಲದೆ ಅದನ್ನು ಬುಟ್ಟಿಯಲ್ಲಿ ತುಂಬಿ ಪಾಲಿಕೆ ಸ್ವಚ್ಛತಾ ವಾಹಿನಿಗೆ ಹಾಕಲಾಯಿತು. ಕಾಲೇಜಿನ ಹೊರಾಂಗಣ, ಒಳಾಂಗಣ, ನೆಲ ಮಹಡಿ, ಮೊದಲನೇ ಮಹಡಿ, ತಮ್ಮ ಕೊಠಡಿ ಹೀಗೆ ಎಲ್ಲವನ್ನು ಎಲ್ಲರೂ ಸೇರಿಕೊಂಡು ಕಸ ಗುಡಿಸಿ, ಧೂಳು ಜಾಡಿಸಿ ಸ್ವಚ್ಚಗೊಳಿಸಿದರು.

ಬೋಧಕ, ಬೋಧಕೇತರ ಸಿಬ್ಬಂದಿ ಜೊತೆಗೂಡಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದ ಪ್ರಾಚಾರ್ಯ ಮುರಲೀಧರ ರತ್ನಗಿರಿ ಅವರು ಆಯಾ ವಿಭಾಗದವರು ತಮ್ಮ ಕೊಠಡಿ, ತರಗತಿ, ಕಚೇರಿ ಚೆಂಬರ್‌, ಕಾಲೇಜಿನ ಅಂಗಳ ಸೇರಿದಂತೆ ಎಲ್ಲೆಡೆ ಗಮನ ಕೊಟ್ಟು ಸ್ವಚ್ಚತೆ ಕಾಪಾಡಿಕೊಳ್ಳಬೇಕೆಂದು ಅಭಿಪ್ರಾಯಪಟ್ಟರು.

ಶ್ರಮದಾನದಲ್ಲಿ ಪಾಲ್ಗೊಂಡಿದ್ದ ತರಬೇತಿ ಅಧಿಕಾರಿಗಳಾದ ಭಾರತಿ, ರೇವಣಕುಮಾರ್‌, ಕಿರಿಯ ತರಬೇತಿ ಅಧಿಕಾರಿಗಳಾದ ಮೀನಾಕ್ಷಿ ಅವಧಾನಿ, ಲಲಿತಾ ಪಾಟೀಲ್‌, ವಿಠಲರಾವ ಕುಲಕರ್ಣಿ ಮಾತನಾಡುತ್ತ ಲಿಂಗ ತಾರತಮ್ಯವಿಲ್ಲದೆ ಮಹಿಳೆಯರು, ಪುರುಷರು ಎಲ್ಲರೂ ಕಸ ಹಿಡಿದು ಗುಡಿಸಿದ್ದೇವೆ. ನಮ್ಮ ಮನೆ ಸ್ವಚ್ಚ ಇಟ್ಟುಕೊಂಡಂತೆ ಕೆಲಸದ ಸ್ಥಳವನ್ನು ಸ್ವಚ್ಚವಾಗಿಡುವ ಕೆಲಸ ನಾವು ನಿತ್ಯ ಆಸಕ್ತಿಯಿಂದ ಮಾಡಲೇಬೇಕು ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here