ಶಾಸಕ ಅಲ್ಲಂಪ್ರಭು ಪಾಟೀಲರಿಂದ ಮಹಾನಗರ ಪಾಲಿಕೆ ವಿವಿಧ ಕಾಮಗಾರಿಗಳ ಪರಿಶೀಲನೆ

0
22

ಕಲಬುರಗಿ; ದಕ್ಷಿಣ ಮತಕ್ಷೇತ್ರ ಶಾಸಕರಾದ ಅಲ್ಲಂಪ್ರಭು ಪಾಟೀಲರು ಶುಕ್ರವಾರ ನಗರದಲ್ಲಿ ಪಾಲಿಕೆಯವರು ಕೈಗೆತ್ತಿಕೊಂಡಿರುವ ನಗರ ಮೂಲ ಸವಲತ್ತು ಅಭಿವೃದ್ಧಿಯ ಡಲ್ಟ್‌ ಯೋಜನೆಯಡಿಯಲ್ಲಿ ಸೇಡಂ ರಸ್ತೆಯಲ್ಲಿ ಬರುವ ಅನ್ನಪೂರ್ಣ ಕಾಸ್‌ ನಿಂದ ಖರ್ಗೆ ಪೆಟ್ರೋಲ್‌ ಬಂಕ್‌ ವರೆಗೆ, ಜಗತ್‌ನಿಂದ ಪಟೇಲ್‌ ವೃತ್ತದವರೆಗೆ, ರಾಜಾಪುರ ರಸ್ತೆಯಲ್ಲಿ ಸೈಕಲ್‌ ಟ್ರಾಕ್‌ (ಜಗತ್‌ನಿಂದ ರಿಂಗ್‌ ರಸ್ತೆಗೆ ಸಂಪರ್ಕ ಕಲ್ಪಿಸುವ ಸೈಕಲ್‌ ದಾರಿ) ಪಟೇಲ್‌ ವೃತ್ತದಿಂದ ಹೂರಾಪೂರ ವೃತ್ತದವರೆಗೆ ಕೈಗೆತ್ತಿಕೊಳ್ಳಲಾಗಿರುವ ಸೈಕಲ್‌ ಟ್ಯ್ರಾಕ್‌ ಸಮೇತ ಬಸ್‌ ರ್ಯಾಪಿಡ್‌ ಟ್ರಾನ್ಸಿಟ್‌ ಸಿಸ್ಟಂ (ಬಿಆರ್‌ಟಿಎಸ್‌) ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು.

ಇವೆಲ್ಲ ಮೇಲಿನ ಕಾಮಗಾರಿಗಳ ಒಟ್ಟು ಮೊತ್ತ 23 ಕೋಟಿ ರುಪಾಯಿಗಳಾಗಿದ್ದು ಇವೆಲ್ಲವೂ 2021 ರಲ್ಲೇ ಟೆಂಡರ್‌ ಆಗಿದ್ದು 2024 ರೊಳಗೇ ಕಾಮಗಾರಿಗಳು ಪೂರ್ಣಗೊಂಡು ಜನತೆಗೆ ಬಳಕೆಗೆ ನೀಡಬೇಕಿದೆ. ಆದರೆ ಏನಕೇನ ಕಾರಣಗಳಿಂದಾಗಿ ಸದರಿ ಕಾಮಗಾರಿಗಳು ನಿಧಾನಕ್ಕೆ ಸಾಗಿದ್ದರಿಂದ ಇದನ್ನು ತಮ್ಮ ಪರಶೀಲನೆ ಕಾಲಕ್ಕೆ ಗಮನಿಸಿದ ಅಲ್ಲಂಪ್ರಭು ಪಾಟೀಲರು ನಿಗದಿತ ಸಮಯದಂತೆ ಕಾಮಗಾರಿ ಪೂೂರ್ಣ ಮಾಡಿ ಬಳಕೆಗೆ ನೀಡಲೇಬೇಕು ಎಂದು ಸ್ಥಳದಲ್ಲಿದ್ದ ಕಾಮಗಾರಿ ಗುತ್ತಿಗೆದಾರರು, ಪಾಲಿಕೆ ಇಂಜಿನೀಯರ್‌ಗಳಿಗೆ ನಿರ್ದೇಶನ ನೀಡಿದರು.

Contact Your\'s Advertisement; 9902492681

ರಸ್ತೆಯಲ್ಲಿ ಪಾದತಾರಿ ಪಥ, ಸೈಕಲ್‌ ಪಥಗಳು ಬೇರೆಯಾಗಿ ಪ್ರತ್ಯೇಕವಾಗಿ ಆದಲ್ಲಿ ಜನತೆಗೆ ಅನುಕೂಲವಾಗಲಿದೆ. ರಸ್ತೆಗಳು ಹೆಚ್ಚು ಸುರಕ್ಷಿತವಾಗಲಿವೆ. ಪಾಲಿಕೆಯ ಅಧಿಕಾರಿಗಳು ಈ ಕಾಮಗಾರಿಗಳು ನಿಗದಿಯಂತೆ ಪೂರ್ಣಗೊಳ್ಳುವಂತೆ ಉಸ್ತುವಾರಿ ವಹಿಸಬೇಕಂದು ಅಲ್ಲಂಪ್ರಭು ತಾಕೀತು ಮಾಡಿದರು.

ಪಾಲಿಕೆ ಇಇ ಶಿವನಗೌಡ ಪಾಟೀಲ್‌, ಕಾಮಗಾರಿಗಳ ಗುತ್ತಿಗೆದಾರರಲ್ಲಿ ದೇವರಾಜ ವಾರದ್‌ ಹಾಗೂ ಬಿಎಸ್‌ ಬಿರಾದಾರ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದಲ್ಲದೆ ಜೇವರ್ಗಿ ರಸ್ತೆಯ ವಾಜಪೇಟಿ ಬಡಾವಣೆಯಲ್ಲಿ 1. 21 ಕೋಟಿ ುರ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಚಿತಾಗಾರ ಕಾಮಗಾರಿಯನ್ನು ಪರಿಶೀಲನೆ ಮಾಡಿದ ಶಾಸಕ ಅಲ್ಲಂಪ್ರಭು ಪಾಟೀಲ್‌ ಇಲ್ಲಿನ ಉಳಿದ ಕಾಮಗಾರಿಗಳನ್ನು ಬೇಗ ಕೈಗೆತ್ತಿಕೊಂಡು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಿದರು.

ಸ್ಥಳಧಲ್ಲೇ ಇದ್ದ ಗುತ್ತಿಗೆದಾರರು ಆದಷ್ಟು ಬೇಗ, 3 ವಾರದಲ್ಲಿ ಸದರಿ ಕಾಮಗಾರಿ ಪೂರ್ಣಗೊಳಿಸಿ ಮಹಾನಗರದ ಮೂಲ ಸವಲತ್ತಿಗೆ ಇದನ್ನು ಒಪ್ಪಿಸಲಾಗತ್ತದೆ ಎದು ಶಾಸಕ ಪಾಟೀಲರಿಗೆ ಭರವಸೆ ನೀಡಿದ್ದಾರೆ. ಪಾಲಿಕೆ ಮಾಜಿ ಮೇಯರ್‌ ಬಾಬು ಒಂಟಿ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here