CUK: ಮುಖ್ಯ ಪರೀಕ್ಷೆಗಳಿಗೆ ಮೂರು ದಿನಗಳ ತರಬೇತಿ ಕಾರ್ಯಗಾರ 

0
28

ಕಲಬುರಗಿ; “ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನ್ಯಾಯಾಂಗ ಪರೀಕ್ಷೆಯ ತಯಾರಿಗಾಗಿ ಕ್ರಿಯಾ ಯೋಜನೆ ಬಹಳ ಮುಖ್ಯ” ಎಂದು ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ನಾಗಶ್ರೀ, ಹೇಳಿದರು. ಅವರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕಾನೂನು ವಿಭಾಗ ಮತ್ತು ಅಧಿವಕ್ತ ಪರಿಷತ್ ಕರ್ನಾಟಕ ಉತ್ತರ (ಕಲಬುರಗಿ ಘಟಕ) ಜಂಟಿಯಾಗಿ ಆಯೋಜಿಸಿದ್ದ ಸಿವಿಲ್ ನ್ಯಾಯಾಧೀಶರ ಮುಖ್ಯ ಪರೀಕ್ಷೆಗಳ ಮೂರು ದಿನಗಳ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಅವರು ಮುಂದುವರೆದು ಮಾತನಾಡಿ “ಯೋಜನಾಬದ್ದ ಸಿದ್ಧತೆಯು ಯಶಸ್ಸಿಗೆ ಕಾರಣವಾಗುತ್ತದೆ. ಆಕಾಂಕ್ಷಿಗಳು ಕೇವಲ ಪರೀಕ್ಷೆ ಪಾಸಾಗುವುದನ್ನು ಗಮನದಲ್ಲಿಟ್ಟುಕೊಂಡು ಅಧ್ಯಯನ ಮಾಡಬಾರದು. ಬದಲಿಗೆ ಜ್ಞಾನವನ್ನು ಪಡೆಯಲು ಅಧ್ಯಯನ ಮಾಡಬೇಕು. ನೀವು ಕೇವಲ ಉತ್ತೀರ್ಣಕ್ಕೆ ಸಾಕಾಗುವಷ್ಟು ಅಂಕಗಳಿಸುವ ಉದ್ದೇಶ ಹೊಂದಿರಬಾರದು. ಬದಲಿಗೆ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆಯುವ ಗುರಿಯನ್ನು ಹೊಂದಿರಬೇಕು.” ಎಂದು ಹೇಳಿದರು.

Contact Your\'s Advertisement; 9902492681

ಗೌರವಾನ್ವಿತ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಅವರು ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿ “ಸಮಾಜವನ್ನು ಸುಸ್ಥಿತಿಯಲ್ಲಿಡುವಲ್ಲಿ ನ್ಯಾಯಾಂಗದ ಪಾತ್ರ ಬಹಳ ಮುಖ್ಯವಾಗಿದೆ. ಪ್ರಸ್ತುತ ದಿನಗಳಲ್ಲಿ ಎಲ್ಲ ಸಂಸ್ಥೆಗಳ ಗುಣಮಟ್ಟ ಹದಗೆಡುತ್ತಿದೆ. ವ್ಯವಸ್ಥೆಯನ್ನು ಕಾಪಾಡುವುದು ನ್ಯಾಯಾಂಗದಿಂದ ಮಾತ್ರ ಸಾಧ್ಯ. ನ್ಯಾಯಾಂಗ, ಶಿಕ್ಷಣ ಸಂಸ್ಥೆಗಳು ಮತ್ತು ವೈದ್ಯರು ನಿರ್ಭಯವಾಗಿ ಮತ್ತು ನಿಸ್ವಾರ್ಥವಾಗಿ ಕೆಲಸ ಮಾಡಿದಾಗ ಮಾತ್ರ ದೇಶ ನಿಜವಾದ ಅಭಿವೃದ್ಧಿ ಕಾಣಲು ಸಾಧ್ಯ. ಅವರು ಯಾವುದೇ ಬಾಹ್ಯ ಒತ್ತಡಕ್ಕೆ ಮಣಿಯಬಾರದು. ಕಾನೂನು ಕ್ಷೇತ್ರದಲ್ಲಿ ಯಶಸ್ಸು ಕೇವಲ ಜ್ಞಾನದ ಮೇಲೆ ಅವಲಂಬಿತವಾಗಿರದೆ ಕಾನೂನುಗಳನ್ನು ಹೇಗೆ ಅರ್ಥೈಸಬೇಕು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಕಾನೂನು ಕ್ಷೇತ್ರದಲ್ಲಿ ವ್ಯಾಖ್ಯಾನ ಬಹಳ ಮುಖ್ಯ.” ಎಂದರು.

ಕಾರ್ಯಕ್ರಮ ಆಯೋಜನೆಯಬಗ್ಗೆ ತಮ್ಮ ಸಂತೋಷ ವ್ಯಕ್ತ ಪಡಿಸಿದ ಕುಲಪತಿಗಳು “ಅವರ ಪ್ರಯತ್ನಕ್ಕಾಗಿ ನಾನು ಸಂಘಟಕರನ್ನು ಅಭಿನಂದಿಸುತ್ತೇನೆ. ಈ ವಿಷಯದ ಕುರಿತು ಒಂದು ತಿಂಗಳ ಕಾರ್ಯಕ್ರಮವನ್ನು ಆಯೋಜಿಸಲು ನಾನು ಅವರಿಗೆ ಸಲಹೆ ನೀಡುತ್ತೇನೆ ಮತ್ತು ವಿಶ್ವವಿದ್ಯಾಲಯದ ಆಡಳಿತವು ಅಗತ್ಯವಾದ ಬೆಂಬಲವನ್ನು ನೀqಲಿದೆ” ಎಂದು ಅವರು ಹೇಳಿದರು.

ಸಿಯುಕೆಯ ಕಾನೂನು ಮತ್ತು ನ್ಯಾಯಶಾಸ್ತ್ರ ಅಧ್ಯಯನ ನಿಕಾಯದ ಡೀನ್ ಡಾ.ಬಸವರಾಜ ಎಂ.ಕುಬಕಡ್ಡಿ ಅತಿಥಿಗಳನ್ನು ಸ್ವಾಗತಿಸಿ, ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಹಾರೈಸಿದರು. ಕಡ್ಲೂರು ಸತ್ಯನಾರಾಯಣ ಆಚಾರ್, ಪ್ರಧಾನ ಜಿಲ್ಲಾ ನ್ಯಾಯಾಧೀಶರು ಹಾಗೂ ರಾಜ್ಯ ಗೌರವಾಧ್ಯಕ್ಷರು, ಆದಿವಕ್ತ ಪರಿಷತ್, ಕರ್ನಾಟಕ ಉತ್ತರ, ಕಲಬುರಗಿಯ ವಕೀಲರ ಸಂಘದ ಕಾರ್ಯದರ್ಶಿ ಬಸವರಾಜ ನಾಶಿ, ನ್ಯಾಯಾಂಗ ತರಬೇತಿ ಪರೀಕ್ಷೆ ರಾಜ್ಯ ಸಂಚಾಲಕ ರಾಕೇಶ ಪಂಘಂಟಿ, ಅಧಿವಕ್ತ ಪರಿಷತ್ ಕರ್ನಾಟಕ ಉತ್ತರ ಉಪಸ್ಥಿತರಿದ್ದರು. ಇಂದೂದರ್ ಜಾಧವ್ ಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here