ಗದಗನಲ್ಲಿ ಮೇ 4 ಮತ್ತು 5 ಮೇ ಸಾಹಿತ್ಯ ಮೇಳ

0
66

ಗದಗ: ಗದಗನಲ್ಲಿ ಮೇ ಸಾಹಿತ್ಯ ಮೇಳದ 5ನೇ ಪೂರ್ವಭಾವಿ ಸಭೆ ನಡೆಯಿತು.ಈ ಮೊದಲು ಮೇಳವನ್ನು ಕನ್ನಡ ಸಾಹಿತ್ಯ ಭವನದಲ್ಲಿ ಮಾಡುವುದೆಂದು ತಿರ್ಮಾನಿಸಿತ್ತು. ಆದರೆ ಮೇ ಮೇಳಕ್ಕೆ ಬರುವ ಜನ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದರಿಂದ ಸಾಹಿತ್ಯ ಭವನದಲ್ಲಿ ಕಡಿಮೆ ಆಸನದ ವ್ಯವಸ್ಥೆ ಇರುವುದರಿಂದ ಅದನ್ನು ಕೈ ಬಿಟ್ಟು ಅಂಬೇಡ್ಕರ ಭವನದಲ್ಲಿ ಮಾಡುವುದು ಎಂದು ಸಭೆಯಲ್ಲಿ ತಿರ್ಮಾನಿಸಿತು.

6ನೇ ಮೇಳದ ಅಧ್ಯಕ್ಷೀಯ ಮಂಡಳಿ ಪರಿಚಯ ಮೀನಾಕ್ಷಿ ಬಾಳಿ ಕಲಬುರಗಿ, ರಂಜಾನ್ ದರ್ಗಾ ಧಾರವಾಡ, ಟಿ. ಆರ್. ಚಂದ್ರಶೇಖರ್ ಬೆಂಗಳೂರು, ಶೈಲಜ ವೇಣುಗೋಪಾಲ್ ಮೈಸೂರು. ಅವರನ್ನು ಆಯ್ಕೆ ಮಾಡಲಾಗಿದೆ.

Contact Your\'s Advertisement; 9902492681

ಇದೇ ಮೇ 4 ಮತ್ತು 5ರಂದು ಗದಗನ ಅಂಬೇಡ್ಕರಭವನದಲ್ಲಿ ನಡೆಯಲಿದ್ದು, ಮೇ ಮೇಳವನ್ನ ಯಶಸ್ವಿಗೊಳಿಸಲು ಕೆಲವು ಸಮಿತಿಗಳನ್ನ ಮಾಡಲಾಯಿತು.ಸ್ವಾಗತ ಸಮಿತಿ, ವಸತಿ ಸಮಿತಿ, ಹಣಕಾಸು ಸಮಿತಿ, ಊಟೋಪಚಾರ ಸಮಿತಿ, ಪ್ರಚಾರ ಸಮಿತಿ, ವೇದಿಕೆ ಸಾಂಸ್ಕೃತಿಕ ಸಮಿತಿ, ದಾಖಲೀಕರಣ, ಕಲಾ ಶಿಬಿರ.ನೋಂದಣಿ ಸಮಿತಿ, ಹೀಗೆ ಪ್ರತಿಯೊಂದು ಸಮಿತಿಗಳಲ್ಲಿ ಸಂಚಾಲಕರನ್ನ ನೇಮಿಸಲಾಯಿತು.

ಮೇಳ ಯಶಸ್ವಿಯಾಗಲು ಎಲ್ಲ ಕೆಲಸಗಳು ಪ್ರಾರಂಭವಾಗಿವೆ ಬರುವವರು ವಸತಿಗಾಗಿ ಬೇಗ ಬೇಗ ನಿಮ್ಮ ಹೆಸರನ್ನು ನೊಂದಾಯಿಸಿಕೊಳಲು ಸಂಪರ್ಕ. ಡಾ.ಡಿ.ಬಿ.ಗವಾನಿ 9482931100, ಡಾ.ರಾಮಚಂದ್ರ ಹಂಸನೂರ 9739239811,

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here