ಅಂಗವಿಕಲರ ಹಕ್ಕುಗಳಿಗಾಗಿ, ಅಂಗವಿಕಲರ ಪಾಲಕರ ಒಕ್ಕೂಟ ಉದ್ಘಾಟನೆ

0
32

ಕಲಬುರಗಿ: ಅಂಗವಿಕಲರ ಸಂಕಷ್ಟಗಳ ಪರಿಹಾರಕ್ಕಾಗಿ, ಹಕ್ಕುಗಳಿಗಾಗಿ, 2016ರ ಹಕ್ಕುಗಳ ಕಾಯ್ದೆಯ ಜಾರಿಗಾಗಿ ಹೋರಾಟ ನಡೆಸಲು ಕಲಬುರಗಿ ಜಿಲ್ಲೆಯಲ್ಲಿ ಬಲಿಷ್ಟ ಚಳುವಳಿಯನ್ನು ಕಟ್ಟಲು ಅಂಗವಿಕಲರ ಹಾಗೂ ಪಾಲಕರ ಒಕ್ಕೂಟವನ್ನು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಅಖಿಲ ಭಾರತ ಕಾರ್ಯಧ್ಯಕ್ಷರಾದ ಎಸ್. ನಂಬುರಾಜನ್ ಮಾತನಾಡಿ, ಅಂಗವಿಕಲರ ಹಕ್ಕುಗಳ ಕಾಯ್ದೆ- 2016ನ್ನು ಸಂಘಟನೆಯ ಸತತ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ಜಾರಿ ಮಾಡಲು ಸಾಧ್ಯವಾಗಿದೆ. ಈ ಕಾಯ್ದೆಯು ಅಂಗವಿಕಲರ ಹಕ್ಕುಗಳನ್ನು ರಕ್ಷಿಸುತ್ತದೆ.

Contact Your\'s Advertisement; 9902492681

ಅಂಗವಿಕಲರ ಶಿಕ್ಷ‌ಣ, ಉದ್ಯೋಗ, ಘನತೆಯ ಜೀವನಕ್ಕೆ ಒತ್ತು ನೀಡುತ್ತದೆ. ಆದರೆ ಕಾಯ್ದೆ ಜಾರಿಗೆ ಬಂದು ಏಳು ವರ್ಷಗಳು ಕಳೆದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾಯ್ದೆಯನ್ನು ಅನುಷ್ಠಾನ ಗೊಳಿಸುತ್ತಿಲ್ಲ. ಅಂಗವಿಕಲರಿಗಾಗಿ ಉದ್ಯೋಗ ನೀತಿ ಬದಲಾಗಬೇಕಾಗಿದೆ. ಇದಕ್ಕಾಗಿ ಆಂದೋಲನ‌ ನಡೆಸಬೇಕಾಗಿದೆ. ಈ ಹಿನ್ನಲೆಯಲ್ಲಿ ಅಂಗವಿಕಲರು ಸಂಘಟಿತತರಾಗಿ ಹೋರಾಟ ನಡೆಸಬೇಕಾಗಿದೆ ಎಂದು ಹೇಳಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ ಮಾತನಾಡಿ, ಸರ್ಕಾರ ಅಂಗವಿಕಲರಿಗೆ ಉದ್ಯೋಗ ನೀಡುತ್ತಿಲ್ಲ. ಉದ್ಯೋಗ ನೀಡದಿದ್ದಲ್ಲಿ, ಜೀವನ ಭತ್ಯೆ ನೀಡಬೇಕು. ನಮಗೆ ಪಿಂಚಣಿ ಬೇಕಾಗಿಲ್ಲ, ಜೀವನ ಭತ್ಯೆ ಬೇಕಾಗಿದೆ. ಪಕ್ಕದ ತೆಲಂಗಾಣ ಸರ್ಕಾರ 4016ರೂ ಗಳನ್ನು ಮಾಸಿಕ ಭತ್ಯೆಯಾಗಿ ನೀಡುತ್ತಿದೆ. ಅಂಗವಿಕಲರ ಜೀವನ ಭತ್ಯೆ ಕನಿಷ್ಟ 6000 ರೂಗಳನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.

ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್‌ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ಬೆಂಬಲ ಕೋರಿ ಮಾತನಾಡಿ, ಅಂಗವಿಕಲರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಕುಟುಂದದ ಒಳಗೆ ಮತ್ತು ಹೊರಗೆ ಶೋಷಣೆಗೆ ಒಳಗಾಗುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ಅಂಗವಿಕಲ ಮಹಿಳೆಯರು ಸಂಕಷ್ಟ, ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ ಸುಲಭ ತುತ್ತಾಗುವ ಮಹಿಳೆ ಅಂಗವಿಕಲ ಮಹಿಳೆಯಾಗಿದ್ದಾಳೆ. ಹೀಗೆ ಸಾವಿರ ಸಂಕಷ್ಟ ಮತ್ತು ಸಮಸ್ಯೆಗಳಿನ್ನಿಟ್ಟುಕೊಂಡು ಅಂಗವಿಕಲರು ಜೀವನ ಸಾಗಿಸುತ್ತಿದ್ದಾರೆ. ನಿಮ್ಮ ಸಂಘಟನೆ, ಹೋರಾಟಕ್ಕೆ ಮಾರ್ಕ್ಸವಾದಿ ಕಮ್ಯುನಿಷ್ಟ ಪಕ್ಷ ಯಾವುತ್ತೂ ಬೆಂಬಲಿಸುತ್ತದೆ ಎಂದು ಹೇಳಿದರು.

ಈ ಸಂದರ್ಬದಲ್ಲಿ ಸ್ವಾಗತ, ಜಿಲ್ಲೆಯ ಅಂಗವಿಕಲರ ಸ್ಥಿತಿಯನ್ನು ಪ್ರಾಸ್ಥಾವಿಕವಾಗಿ ಸುಭಾಷ್ ಹೊಸಮನೆ ಮಾತನಾಡಿದರು. ಜಿಲ್ಲಾ ಸಂಘಟನಾ ಸಮಿತಿಯನ್ನು ರಚಿಸಲಾಯಿತು.

ಜಿಲ್ಲಾ ಸಂಘಟನಾ ಸಂಚಾಲಕರಾಗಿ ಸುಭಾಷ್ ಹೊಸಮನಿ, ಜಿಲ್ಲಾ ಸಹ ಸಂಘಟನಾ ಸಂಚಾಲಕರಾಗಿ ಮೆಹಬೂಬ್‌ಬೀ, ಶಾಂತ, ಸೌಭಾಗ್ಯಮ್ಮ ಭೀಮಣ್ಣ ಆಯ್ಕೆಯಾಗಿದ್ದಾರೆ. ಜಿಲ್ಲೆಯ 5 ತಾಲೂಕನ್ನು ಪ್ರತಿನಿಧಿಸಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here