ಕಲಬುರಗಿ: ಬರ ಪರಿಹಾರ ಘೋಷಣೆಗೆ ಸಿರಗಾಪುರ ಆಗ್ರಹ

0
22

ಕಲಬುರಗಿ: ಮುಂಗಾರು ಮಳೆ ವೈಫಲ್ಯದಿಂದ ಬೆಳೆ ಬಾರದೆ ರೈತರು ತೊಂದರೆ ಅನುಭವಿಸುವಂತಾಗಿದೆ.ಬರ ಘೋಷಣೆಯಾದರೂ ರಾಜ್ಯ ಸರ್ಕಾರ ರೈತರಿಗೆ ಪರಿಹಾರ ನೀಡಲು ಮುಂದೆ ಬರುತ್ತಿಲ್ಲ.ಇದು ರೈತ ವಿರೋಧಿ ಸರ್ಕಾರ ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯದ 195 ಬರಗಾಲ ಪೀಡಿತ ತಾಲ್ಲೂಕುಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಸಿ ಒಂದು ತಿಂಗಳು ಕಳೆದಿದೆ.ಬರಗಾಲ ಪೀಡಿತ ಪ್ರದೇಶಗಳಲ್ಲಿ ಕೇಂದ್ರದ ತಂಡ ಸಮೀಕ್ಷೆ ಮಾಡುತ್ತಿದೆ.ಆದರೆ ಇದು ವಿಳಂಬಕ್ಕೆ ಕಾರಣವಾಗಿದೆ.ತಕ್ಷಣ ಪರಿಹಾರಕ್ಕೆ ಕೇಂದ್ರ ಸರ್ಕಾರದ ಮೊರೆ ಹೋಗದೆ ರಾಜ್ಯ ಸರ್ಕಾರ ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಪರಿಹಾರ ನೀಡಬೇಕು.ಇಗಾಗಲೇ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಳ್ಳಲಾಗಿದೆ.

Contact Your\'s Advertisement; 9902492681

ಹೆಸರು,ಉದ್ದು, ಎಳ್ಳು, ಸೋಯಾಬಿನ್ ಮುಂತಾದ ಮುಂಗಾರು ಬೆಳೆಗಳು ಮಳೆ ಬಾರದೆ ಹಾಳಾಗಿದೆ.ಇನ್ನು ಕೆಲವೆಡೆ ಬಿತ್ತನೆ ಕಾರ್ಯ ಮಾಡಿಲ್ಲ.ರೈತರು ಇಲ್ಲಿಯವರೆಗೆ ಬೆಳೆಯಿಂದ ಒಂದು ರೂಪಾಯಿ ಕೂಡ ಕಂಡಿಲ್ಲ.ಸಾಲ ಮಾಡಿ ಬಿತ್ತನೆ ಬೀಜ ಮತ್ತು ಗೊಬ್ಬರ ಖರೀದಿಸಿದ್ದಾರೆ.ಸಾಲ ಮರು ಪಾವತಿಗೆ ಹಣ ಇಲ್ಲ.ಮಳೆ ಬಂದಿದ್ದರೆ ಈಗಾಗಲೇ ರೈತರ ಕೈಗೆ ಹಣ ಬರುತ್ತಿತ್ತು.ಪರಿಸ್ಥಿತಿ ಹೀಗಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಚಿತ ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರದ ಖಜಾನೆ ಖಾಲಿ ಮಾಡುತ್ತಿದ್ದಾರೆ.ಆದರೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ ಎಂದು ಅವರು ಬಲವಾಗಿ ಟೀಕಿಸಿದ್ದಾರೆ.

ತೊಗರಿ ಬೆಳೆಗೆ ಈ ಬಾರಿ ಕೀಟಭಾದೆ ಆವರಿಸಿದೆ.ಕೀಟನಾಶಕ ಎಣ್ಣೆ ಖರೀದಿಸಲು ಸರ್ಕಾರ ರೈತರ ಖಾತೆಗೆ ಕೂಡಲೇ ಹಣ ಜಮಾ ಮಾಡಬೇಕು.ಪ್ರಸಕ್ತ ಸಾಲಿನ ಎಲ್ಲಾ ರೈತರ ಬೆಳೆ ಸಾಲ ಬಡ್ಡಿ ಸಮೇತ ಸಂಪೂರ್ಣ ಮನ್ನಾ ಮಾಡಬೇಕು.ಜೋಳ ಹಾಗೂ ಗೋಧಿ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಉಚಿತವಾಗಿ ನೀಡಬೇಕು.ಹಲವಾರು ದಿನಗಳಿಂದ ಉಳಿದಿರುವ ರೈತರಿಗೆ ಕಬ್ಬಿನ ಬಿಲ್ಲು ಪಾವತಿಸಲು ಕಾರ್ಖಾನೆಗಳಿಗೆ ಸೂಚಿಸಬೇಕು.ರೈತರಿಗೆ ಕಿರುಕುಳ ನೀಡುತ್ತಿರುವ ಸಹಕಾರಿ ಬ್ಯಾಂಕ್ ಗಳ ಮೇಲೆ ಕೂಡಲೇ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here